ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ಮಾಡುವಂತೆ ಎಚ್ಚರಿಕೆ ನೀಡುತ್ತಿದೆ ಫೇಸ್‌ಬುಕ್‌

By Manjunatha
|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ಮತದಾನ ಉತ್ಸಾಹದಿಂದ ನಡೆಯುತ್ತಿದೆ. ಹೆಚ್ಚಿಗೆ ಮತದಾನ ಆಗಲು ಕರ್ನಾಟಕ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದ್ದು, ಫೇಸ್‌ಬುಕ್‌ ಕೂಡಾ ಚುನಾವಣಾ ಹಬ್ಬಕ್ಕೆ ಕೈಜೋಡಿಸಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಫೇಸ್‌ಬುಕ್ ನೆರವಾಗುತ್ತಿದ್ದು, ಅದು ಮತದಾರರಿಗೆ ಮೇ 12ರ ಮತದಾನದ ದಿನದಂದು ಫೇಸ್‌ಬುಕ್‌ ನ್ಯೂಸ್‌ಫೀಡ್‌ನಲ್ಲಿ ಮತದಾನದ ಬಗ್ಗೆ ರಿಮೈಂಡರ್‌ (ಎಚ್ಚರಿಕೆ) ಅನ್ನು ಕಳಿಸಲಿದೆ. ಆ ಮೂಲಕ ಮತದಾನದ ಮಾಡಲು ಜಾಗೃತಿ ಮೂಡಿಸಲಿದೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

18 ಮತ್ತು ಅದಕ್ಕಿಂತ ಮೇಲ್ಪಟ್ಟ ಆಯುವರಿಗೆ ಫೇಸ್‌ಬುಕ್‌ ಮೂಲಕ ಈ ರಿಮೈಂಡರ್‌ ತಲುಪಲಿದ್ದು, ಈ ರಿಮೈಂಡರ್‌ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ (http://kgis.ksrsac.in/election) ಸಂಪರ್ಕ ಹೊಂದಿದ್ದು ಅದರಲ್ಲಿ ಜನರು ತಮ್ಮ ಮತಗಟ್ಟೆಯ ಹಾಗೂ ಇತರೆ ಮತಗಟ್ಟೆಗಳ ವಿವರಗಳನ್ನು ಕಾಣಬಹುದಾಗಿದೆ.

Facebook sending reminders to voters to go and vote

ಇದೇ ರೀತಿಯ ರಿಮೈಂಡರ್‌ಗಳನ್ನು ಫೇಸ್‌ಬುಕ್‌ ಇಂಗ್ಲೆಂಡ್‌ ಸ್ಥಳೀಯ ಚುನಾವಣೆಗಳಲ್ಲಿ ಬಳಸಿತ್ತು, ಮತ್ತು ಅಲ್ಲಿ ಬಳಕೆಯಾದ ಮಾದರಿಗಳನ್ನೇ ಇಲ್ಲಿಯೂ ಅನುಸರಿಸುತ್ತಿದ್ದು ಇದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರು ಹೆಚ್ಚು ಭಾಗವಹಿಸಲು ಉತ್ತೇಜಿಸುತ್ತದೆ ಎಂದು ಆಶಿಸಲಾಗಿದೆ.

ಈ ಕುರಿತು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾತನಾಡಿದ್ದು, 'ಈ ಕ್ರಮ ನಮಗೆ ಹೆಚ್ಚಿನ ಮತದಾರರು ಹೊರಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಲು ಉತ್ತೇಜಿಸಲು ನೆರವಾಗಿದೆ' ಎಂದಿದ್ದಾರೆ.

English summary
Facebook join hands with election commission. It sending reminders to the voters to go out and vote. facebook also giving links to find the booth and many other things about voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X