‘ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ...’
ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಬಹಿರಂಗ ಕದನ ಮತ್ತಷ್ಟು ಜೋರಾಗಿದೆ. ಇದೀಗ ನೇರವಾಗಿಯೇ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಕಿಚ್ಚು ಹೊತ್ತಿಸಿದೆ. ಹಾಗಾದ್ರೆ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೊರಿಸಿರುವ ಗಂಭೀರ ಆರೋಪ ಏನು? ಸಿದ್ದರಾಮಯ್ಯ ಅವರನ್ನ ಕರ್ನಾಟಕದ ಬಿಜೆಪಿ ಘಟಕ 'ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ' ಎಂದಿದ್ದು ಏಕೆ? ಮುಂದೆ ಓದಿ
ಅಂದಹಾಗೆ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಬಿಜೆಪಿ ಆರೋಪ ಹೊರಿಸುತ್ತಿದೆ. ಹೀಗೆ ಬಿಜೆಪಿ & ಕಾಂಗ್ರೆಸ್ ನಡುವೆ ನಡೆಯುತ್ತಿರುವ ಗ್ಯಾರಂಟಿ ವಾರ್ ಜೋರಾಗುತ್ತಿದೆ. ಒಬ್ಬರಿಗೆ ಮತ್ತೊಬ್ಬರು ಸವಾಲು ಎಸೆಯುತ್ತಾ ಫೈಟಿಂಗ್ ಮುಂದುವರಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ & ಬಿಜೆಪಿ ಜಗಳ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ನಾಯಕರ ವಿರುದ್ಧ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪ ಕೂಡ ಹೊರಿಸುತ್ತಿದೆ. ಹಾಗಾದರೆ ಈಗ ಸಿಎಂ ವಿರುದ್ಧ ಬಿಜೆಪಿ ದಿಢೀರ್ ಗಂಭೀರ ಆರೋಪ ಹೊರಿಸಿದ್ದು ಏಕೆ?

'ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ...'
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗ್ತಿದೆ ಅಂತ ಬಿಜೆಪಿ ಆರೋಪ ಮಾಡುತ್ತಿದೆ. ಆದರೆ ಬಿಜೆಪಿ ಇದ್ದಾಗಲೇ ಬ್ರಹ್ಮಾಂಡ ಭ್ರಷ್ಟಾಚಾರ ಇತ್ತು, ಈಗ ಅದನ್ನ ನಾವು ಕಂಟ್ರೋಲ್ ಮಾಡಿದ್ದೀವಿ ಅಂತಿದ್ದಾರೆ ಕಾಂಗ್ರೆಸ್ ಲೀಡರ್ಸ್. ಇಬ್ಬರ ಮಧ್ಯೆ ಫೈಟ್ ನಡೆಯುವಾಗ ಬಿಜೆಪಿ ಟ್ವೀಟ್ ಮೂಲಕ ಬಾಂಬ್ ಸಿಡಿಸಿದೆ. 'ಭ್ರಷ್ಟಾಚಾರದ ಪಿತಾಮಹ @siddaramaiah ಅವರು ಮುಖ್ಯಮಂತ್ರಿ ಆದಮೇಲೆ ಭ್ರಷ್ಟಾಚಾರಗಳು ನಡೆಯುತ್ತಿಲ್ಲವೆಂದರೆ @INCKarnataka ಸರ್ಕಾರಕ್ಕೆ ಬಹುದೊಡ್ಡ ಅವಮಾನ' ಎಂದು ಈಗ ಬಿಜೆಪಿ ಆರೋಪ ಮಾಡಿದೆ.
ಹಾಗೇ ಆರೋಪದ ಸರಪಳಿ ಮುಂದುವರಿಸಿರುವ ಬಿಜೆಪಿ 'ಪ್ರತಿಯೊಂದು ಇಲಾಖೆಯಲ್ಲೂ ಕಳಂಕಿತರು ಭ್ರಷ್ಟರು ಆರೋಪಿತರೇ ತುಂಬಿ ತುಳುಕುತ್ತಿದ್ದಾರೆ. ಹಣದ ದುರಾಸೆಗೆ ಬಿದ್ದಿರುವ #ATMSarkara ಆರೋಗ್ಯ ಇಲಾಖೆಯಲ್ಲೂ ಭ್ರಷ್ಟಾಚಾರದ ಕ್ಯಾನ್ಸರ್ ಹರಡಿ ಮಜಾ ನೋಡುತ್ತಿದೆ. ಆರೋಗ್ಯ ಸಚಿವ @dineshgrao ಅವರ ಕಾಮಾಲೆ ಕಣ್ಣಿಗಂತು ಯಾವುದೂ ಕಾಣುತ್ತಿಲ್ಲ. ಕಂಡರೂ ಶ್ಯಾಡೋ ಸಿಎಂ ಪ್ರಭಾವಕ್ಕೆ ಸೈಲೆಂಟ್ ಆಗಿದ್ದಾರೆ.' ಎಂದಿದೆ ಬಿಜೆಪಿ.
ಭ್ರಷ್ಟಾಚಾರದ ಪಿತಾಮಹ @siddaramaiah ಅವರು ಮುಖ್ಯಮಂತ್ರಿ ಆದಮೇಲೆ ಭ್ರಷ್ಟಾಚಾರಗಳು ನಡೆಯುತ್ತಿಲ್ಲವೆಂದರೆ @INCKarnataka ಸರ್ಕಾರಕ್ಕೆ ಬಹುದೊಡ್ಡ ಅವಮಾನ.
— BJP Karnataka (@BJP4Karnataka) November 28, 2023
ಪ್ರತಿಯೊಂದು ಇಲಾಖೆಯಲ್ಲೂ ಕಳಂಕಿತರು ಭ್ರಷ್ಟರು ಆರೋಪಿತರೇ ತುಂಬಿ ತುಳುಕುತ್ತಿದ್ದಾರೆ. ಹಣದ ದುರಾಸೆಗೆ ಬಿದ್ದಿರುವ #ATMSarkara ಆರೋಗ್ಯ ಇಲಾಖೆಯಲ್ಲೂ ಭ್ರಷ್ಟಾಚಾರದ… pic.twitter.com/6HKrSpIfWL
'ತಿಂಗಳಿಗೆ ಇಂತಿಷ್ಟು ಕಲೆಕ್ಷನ್..'
ಕಾಂಗ್ರೆಸ್ ವಿರುದ್ಧ ನಿನ್ನೆ ಕೂಡ ಹೀಗೆ ಆರೋಪ ಮಾಡಿತ್ತು ಬಿಜೆಪಿ, 'ಭ್ರಷ್ಟಾಚಾರದಲ್ಲಿ ಮುಳುಗಿರುವ @INCKarnataka ಸರ್ಕಾರದಲ್ಲಿ ಯಾವ ಫೈಲ್ ಅಲುಗಾಡಲೂ ಕಾಸು ಕೊಡಲೇಬೇಕು. ಬೆಳಗ್ಗೆಯಷ್ಟೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲಾದರೆ ಸಂಜೆಗೆ ಇಂಧನ ಇಲಾಖೆಯ ಭ್ರಷ್ಟಾಚಾರ ಹೊರಬಂದಿದೆ! ತಿಂಗಳಿಗೆ ಇಂತಿಷ್ಟು ಕಲೆಕ್ಷನ್ ಮಾಡಿ ದೆಹಲಿಗೆ ಕಳಿಸಲೇಬೇಕು ಎಂದು ಟಾರ್ಗೆಟ್ ನಿಗದಿ ಮಾಡಿರುವ ಕಾರಣ ಎಲ್ಲಾ ಇಲಾಖೆಗಳಲ್ಲೂ ಬೆಳಗ್ಗಿನಿಂದ ಸಂಜೆ ಏರು ಹೊತ್ತಿನ ವರೆಗೆ ದಂಧೆಯ ಮಾತುಕತೆಗಳೇ ನಡೆಯುತ್ತಿವೆ' ಎಂದು ಆರೋಪ ಹೊರಿಸಿತ್ತು.

ಹಾಗೇ ಇದೇ ಟ್ವೀಟ್‌ನಲ್ಲಿ ತನ್ನ ಆರೋಪ ಮುಂದುವರಿಸಿ, 'ಕಲೆಕ್ಷನ್ ನಿರಾತಂಕವಾಗಿ ನಡೆದರೆ ವಿದ್ಯುತ್ ಅವಘಡಗಳು ನಡೆದರೂ ಇಲಿ-ಹೆಗ್ಗಣಗಳ ನೆಪ ಹೇಳಿ ತಪ್ಪಿಸಿಕೊಳ್ಳುವ ಖಾತರಿಯನ್ನು ಸಚಿವರಾದ @thekjgeorge ಅವರೇ ನೀಡಿರುವಾಗ ಅಧಿಕಾರಿಗಳು ನಿರುಮ್ಮಳ ಭೋಜನ ಸವಿಯುತ್ತಾ ಕೂತಿದ್ದಾರೆ.' ಎಂದು ಆರೋಪಿಸಿತ್ತು.
ಭ್ರಷ್ಟಾಚಾರದಲ್ಲಿ ಮುಳುಗಿರುವ @INCKarnataka ಸರ್ಕಾರದಲ್ಲಿ ಯಾವ ಫೈಲ್ ಅಲುಗಾಡಲೂ ಕಾಸು ಕೊಡಲೇಬೇಕು. ಬೆಳಗ್ಗೆಯಷ್ಟೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲಾದರೆ ಸಂಜೆಗೆ ಇಂಧನ ಇಲಾಖೆಯ ಭ್ರಷ್ಟಾಚಾರ ಹೊರಬಂದಿದೆ!
— BJP Karnataka (@BJP4Karnataka) November 27, 2023
ತಿಂಗಳಿಗೆ ಇಂತಿಷ್ಟು ಕಲೆಕ್ಷನ್ ಮಾಡಿ ದೆಹಲಿಗೆ ಕಳಿಸಲೇಬೇಕು ಎಂದು ಟಾರ್ಗೆಟ್ ನಿಗದಿ ಮಾಡಿರುವ ಕಾರಣ ಎಲ್ಲಾ ಇಲಾಖೆಗಳಲ್ಲೂ… pic.twitter.com/Z7SSsyv4Qk
ಒಟ್ನಲ್ಲಿ ವಾರ್ ಅಂದ್ರೆ ವಾರ್, ಅದು ಪಕ್ಕಾ ವಾರ್! ಕರ್ನಾಟಕ ಕಾಂಗ್ರೆಸ್ & ಬಿಜೆಪಿ ನೋಡಿ ಈ ಮಾತನ್ನ ಸೋಷಿಯಲ್ ಮೀಡಿಯಾ ಬಳಕೆದಾರರು ಹೇಳ್ತಾ ಇದ್ದಾರೆ. ಯಾಕಂದ್ರೆ ಇಬ್ಬರ ನಡುವೆ ಫೈಟ್ ಜೋರಾಗಿದೆ. ಅದ್ರಲ್ಲೂ ಒಬ್ಬರ ಮೇಲೆ ಮತ್ತೊಬ್ಬರು ಗಂಭೀರ ಆರೋಪವನ್ನು ಹೊರಿಸಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ ಅಂತಾ ಕಾದು ನೋಡಬೇಕಿದೆ. ಮುಂದಿನ ಲೋಕಸಭೆ ಚುನಾವಣೆ ತನಕ ಈ ಕಿರಿಕ್ ನಿಲ್ಲೋದಿಲ್ಲ ಅನ್ನೋದಂತು ಪಕ್ಕಾ.












Click it and Unblock the Notifications