ಮಳೆ.. ಮಳೆ.. ಕಾವೇರಿ ನದಿಯ ಈ ಡ್ಯಾಂಗೆ ಭಾರಿ ನೀರು!

ಮಳೆ ಇಲ್ಲದೆ ಕನ್ನಡಿಗರು ಪರದಾಡುವ ಸಮಯದಲ್ಲಿ ಮಳೆರಾಯ ಕರುಣೆ ತೋರಿಸಿ ಮಳೆ ಸುರಿಸುತ್ತಿದ್ದಾನೆ. ಅದ್ರಲ್ಲೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಭರ್ಜರಿ ಮಳೆ ಆಗುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಕೂಡ ಏರಿಕೆ ಕಾಣುತ್ತಿದ್ದು, ಕಾವೇರಿ ನದಿಗೆ ಕಟ್ಟಿರುವ ಡ್ಯಾಂಗಳಲ್ಲಿ ಕೂಡ ಭರ್ಜರಿ ನೀರು ಶೇಖರಣೆ ಆಗುತ್ತಿದೆ.

ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೂ ನಿಲುಕದು. ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮನುಷ್ಯರು ಪರದಾಡುತ್ತಿದ್ದು ನೀರಿಗೆ ಯುದ್ಧವೇ ನಡೆಯುತ್ತೇನೋ? ಎಂಬ ಭಯ ಕೂಡ ಆವರಿಸಿತ್ತು. ಇದೇ ಸಮಯದಲ್ಲಿ ಸರಿಯಾಗಿ ಭರ್ಜರಿ ಮಳೆ ಬರುತ್ತಿದ್ದು, ಕಾವೇರಿ ನದಿಯ ಡ್ಯಾಂಗಳು ತುಂಬುತ್ತಿವೆ. ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

Explore The Water Level At Mettur Dam Which Is Built To River Cauvery

ತುಂಬುತ್ತಿದೆ ಕಾವೇರಿ ಜಲಾಶಯ!

ಕೆಆರ್‌ಎಸ್ ಸೇರಿದಂತೆ ಹೇಮಾವತಿ ಜಲಾಶಯ, ಕಬಿನಿ ಜಲಾಶಯದಲ್ಲಿ ಭರ್ಜರಿ ನೀರು ಈಗ ಶೇಖರಣೆ ಆಗುತ್ತಿದೆ. ಈ ಸಮಯದಲ್ಲಿ ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಕಟ್ಟಿರುವ ಡ್ಯಾಂ ಅಂದ್ರೆ ಮೆಟ್ಟೂರು ಜಲಾಶಯ ಕೂಡ ಭರ್ಜರಿಯಾಗಿ ತುಂಬುತ್ತಿದೆ. ಜಲಾಶಯ ಈಗ ಸುಮಾರು 1000 ಕ್ಯೂಸೆಕ್ ನೀರನ್ನು ಪಡೆಯುತ್ತಿದ್ದು, 50 ಅಡಿ ನೀರು ಶೇಖರಣೆ ಆಗಿದೆ. ಈ ಮೂಲಕ ಮುಂಗಾರು ಮಳೆ ಆರಂಭಕ್ಕೂ ಮೊದಲೇ, ಮೆಟ್ಟೂರು ಜಲಾಶಯದ ನೀರು ಏರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಕರ್ನಾಟಕಕ್ಕೂ ರಿಲೀಫ್ ನೀಡುವ ನಿರೀಕ್ಷೆ ಇದೆ.

ಮುಂಗಾರು ಮಳೆ ಎಂಟ್ರಿ ಆಗಲಿದೆ!

ಮೇ 31ಕ್ಕೆ ಮುಂಗಾರು ಮಳೆ ಮಾರುತ ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆ ಪಾಲಿನಲ್ಲಿ ಶೇ. 70 ರಷ್ಟು ಮಳೆ ಮುಂಗಾರು ಮಳೆ ಒಂದೇ ಸುರಿಸುತ್ತೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ರು. ಆದ್ರೆ ಈಗ ಗುಡ್ ನ್ಯೂಸ್ ಸಿಕ್ಕಿದು ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ. 2024ರಲ್ಲಿ ಭರ್ಜರಿ ಮುಂಗಾರು ಮಳೆ ಬರಲಿದೆ ಎಂದು ಈಗ ಹವಾಮಾನ ತಜ್ಞರು ಮಾಹಿತಿ ನೀಡಿದ್ದು, ಮೇ 31ಕ್ಕೆ ಮುಂಗಾರು ಮಳೆ ಮಾರುತಗಳು ಕೇರಳಕ್ಕೆ ಎಂಟ್ರಿ ಕೊಡಲಿವೆ. ನಂತರ ಕರ್ನಾಟಕ ಕರಾವಳಿಗೆ ಕೂಡ ಎಂಟ್ರಿ ಕೊಡಲಿವೆ.

ಭರ್ಜರಿ ಮಳೆ ಫಿಕ್ಸ್!

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರಕ್ಕೆ ಕೌಂಟ್‌ಡೌನ್ ಶುರುವಾಗಿ, ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರ, ವಿಜಯಪುರ, ರಾಯಚೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ & ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ರಾಮನಗರ ಚಿಕ್ಕಮಗಳೂರು & ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುತ್ತೆ ಎನ್ನಲಾಗಿದೆ.

ಹಾಗೇ ಮೇ ತಿಂಗಳು ಪೂರ್ತಿ ಮಳೆಯ ಅಬ್ಬರವು ಇದೇ ರೀತಿ ಮುಂದುವರಿಯುತ್ತೆ ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ ಸುತ್ತಮುತ್ತ ಕೂಡ ಭರ್ಜರಿ ಮಳೆಯಾಗಲಿದ್ದು, ಬೆಂಗಳೂರು ಗ್ರಾಮಾಂತರ & ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲೂ ಮಳೆಯ ಅಬ್ಬರ ಜೋರಾಗಿ ಇರಲಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+