Kannada Rajyotsava: ಬೆಂಗಳೂರು ಟು ಬೆಳಗಾವಿ... ಕನ್ನಡಿಗರೇ ಕರ್ನಾಟಕದ ಯಾವ ಯಾವ ಜಿಲ್ಲೆಗೆ ಯಾವ ಬಿರುದು ಇದೆ?
ಕನ್ನಡಿಗನಾಗಿ ಹುಟ್ಟಲು 7 ಜನ್ಮದ ಪುಣ್ಯ ಬೇಕು, ಕನ್ನಡ ನಾಡಲ್ಲಿ ಬದುಕಲು ಕನ್ನಡ ತಾಯಿ ಅನುಗ್ರಹ ಸಾಕು... ಹೀಗೆ ಕನ್ನಡ ನಾಡಿನ ಬಗ್ಗೆ ಎಷ್ಟೇ ಹೇಳಿದರೂ ಅದು ಕಡಿಮೆ ಮತ್ತು ಕನ್ನಡ ನಾಡಿನ ಕವಿಗಳು ಕೂಡ ಇದೇ ಮಾತು ಹೇಳಿದ್ದಾರೆ. ಕುವೆಂಪು ಅವರಿಂದ ಹಿಡಿದು ಕನ್ನಡದ ಆದಿ ಕವಿಗಳಾದ ಪಂಪ, ಪೊನ್ನ ಮತ್ತು ರನ್ನ ಇದೇ ಮಾತು ಹೇಳಿದ್ದಾರೆ.
ಹೀಗೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಎಂಬ ವಿವಿಧ ಭಾಗಗಳನ್ನು ಹೊಂದಿದ್ದರೂ ಒಗ್ಗಟ್ಟಾಗಿರುವ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗೆ ಇರುವ ಬಿರುದುಗಳು ಯಾವುವು? ಬೆಂಗಳೂರು - ಉದ್ಯಾನ ನಗರಿ.. ಬೆಳಗಾವಿ - ಕುಂದಾ ನಗರಿ.. ಹಾಗಾದ್ರೆ ನಿಮ್ಮ ಊರಿಗೆ ಯಾವ ಬಿರುದು & ವಿಶೇಷ ಹೆಸರು ಇದೆ? ಮುಂದೆ ಓದಿ.

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1). ವಿಜಯಪುರ = ಗುಮ್ಮಟ ನಗರಿ
2). ಧಾರವಾಡ = ಪೇಡಾ ನಗರಿ
3). ಗದಗ = ಮುದ್ರಣ ನಗರಿ
4). ಗೋಕಾಕ = ಕರದಂಟು ನಗರಿ
5). ಬೆಳಗಾವಿ = ಕುಂದಾ ನಗರಿ
6). ಮಂಗಳೂರು = ಬಂದರು ನಗರಿ
7). ಮಡಿಕೇರಿ = ಮಂಜಿನ ನಗರಿ
8). ಬೆಂಗಳೂರು = ಉದ್ಯಾನ ನಗರಿ
9). ಹಾವೇರಿ = ಏಲಕ್ಕಿ ನಗರಿ
10). ಉಡುಪಿ = ಕೃಷ್ಣ ನಗರಿ
ಬೆಣ್ಣೆ ನಗರಿ... ಭತ್ತದ ಕಣಜ...
11). ದಾವಣಗೆರೆ = ಬೆಣ್ಣೆ ನಗರಿ
12). ಗಂಗಾವತಿ = ಭತ್ತದ ಕಣಜ
13). ಮೈಸೂರು = ಸಾಂಸ್ಕೃತಿಕ ನಗರಿ
14). ಬಾಗಲಕೋಟೆ = ಕೋಟೆ ನಾಡು
15). ಬಳ್ಳಾರಿ = ಗಣಿ ನಾಡು
16). ಚಿತ್ರದುರ್ಗ = ಕೋಟೆ ನಾಡು
17). ತುಮಕೂರು = ಕಲ್ಪತರು ನಾಡು
18). ಕೋಲಾರ = ಚಿನ್ನದ ನಾಡು
19). ಚನ್ನಪಟ್ಟಣ = ಬೊಂಬೆ ನಾಡು
20). ಮಂಡ್ಯ = ಸಕ್ಕರೆ ನಾಡು
ರೇಷ್ಮೆ ನಾಡು... ಕಾಫಿ ನಾಡು...
21). ರಾಮನಗರ = ರೇಷ್ಮೆ ನಾಡು
22). ಚಿಕ್ಕಮಗಳೂರು = ಕಾಫಿ ನಾಡು
23). ಬಾದಾಮಿ = ಚಾಲುಕ್ಯರ ನಾಡು
24). ತಲಕಾಡು = ಗಂಗರ ನಾಡು
25). ರಾಯಚೂರು = ಬಿಸಿಲ ನಾಡು
26). ಶಿವಮೊಗ್ಗ = ಮಲೆನಾಡಿನ ಹೆಬ್ಬಾಗಿಲು
27). ಕಲಬುರಗಿ = ತೊಗರಿ ಕಣಜ
28). ಕಾರವಾರ = ಜಲಪಾತಗಳ ತವರೂರು
29). ಭದ್ರಾವತಿ = ಕೈಗಾರಿಕೆಗಳ ನಗರಿ
30). ಯಾದಗಿರಿ = ಗಿರಿಗಳ ನಾಡು
31). ಬೀದರ್ = ಸೂಫಿ ಸಂತರ ನಾಡು
32). ಬನವಾಸಿ = ಕದಂಬರ ನಾಡು
ಜಗತ್ತಿನಾದ್ಯಂತ ಕನ್ನಡದ ಕೀರ್ತಿ ಹಬ್ಬಿದೆ!
ಒಟ್ನಲ್ಲಿ ಕನ್ನಡ & ಕನ್ನಡಿಗರು ಇತಿಹಾಸದ ಪುಟಗಳಲ್ಲಿ ಕೂಡ ತಮ್ಮದೇ ತಾಕತ್ತು ಹಾಗೂ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಕೂಡ ಕನ್ನಡ ನಾಡು & ಕರ್ನಾಟಕ ಜಗತ್ತಿನಾದ್ಯಂತ ಹೆಸರು ಮಾಡಿದೆ. ಹಾಗೇ ಐಟಿ & ಬಿಟಿ ಕ್ಷೇತ್ರದಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕನ್ನಡಿಗರು ಕನ್ನಡ ನಾಡಿನ ಕೀರ್ತಿ ಪತಾಕೆ ಆಗಸಕ್ಕೆ ಏರಿಸಿದ್ದಾರೆ. ಹೀಗೆಯೇ ಇದು ಮುಂದುವರಿಯಲಿ ಎಂಬುದು ಕೋಟಿ ಕೋಟಿ ಕನ್ನಡಿಗರ ಆಶಯ.












Click it and Unblock the Notifications