ಶುರುವಾಯ್ತು ಕುಡುಕರ ಸಂಘದ ರಿಜಿಸ್ಟ್ರೇಷನ್, ನೀವು ಮಾಡಿಸಿದ್ರಾ?

ಕೆಲವು ದಿನಗಳಿಂದ ಕುಡುಕರ ವಿಚಾರ ಕರ್ನಾಟಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕುಡುಕರ ಸಂಘದ ಬಗ್ಗೆ ವಿಪರೀತ ಕುತೂಹಲ ಜನರಲ್ಲಿ ಬೆಳೆದಿದೆ. ಹೀಗಿದ್ದಾಗ, 'ಅಖಿಲ ಕರ್ನಾಟಕ ಕುಡುಕರ ಸಂಘ'ದ ರಿಜಿಸ್ಟ್ರೇಷನ್ ಅಂದ್ರೆ ನೋಂದಣಿ ಪ್ರಕ್ರಿಯೆಯೂ ಶುರುವಾಗಿದೆ ಅಂತೆ. ಹಾಗಾದರೆ ನೀವು ಈ ಸಂಘಕ್ಕೆ ನೋಂದಣಿ ಮಾಡಿಸಿದ್ದೀರಾ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಕುಡುಕರ ಸಂಘದ ಅಪ್ಲಿಕೇಷನ್ ಏನನ್ನ ಹೇಳುತ್ತಿದೆ?

ಕುಡುಕರು ಕೆಲವು ದಿನಗಳಿಂದ ಹಲವು ಬೇಡಿಕೆ ಇಡುತ್ತಾ ಬಂದಿದ್ದಾರೆ. ಅದರಲ್ಲೂ ಇತ್ತೀಚೆಗೆ ಕುಡುಕರ ಸಂಘದ ಡಿಮ್ಯಾಂಡ್ ಫುಲ್ ವೈರಲ್ ಆಗಿತ್ತು. ಹಾಗೇ ಸಚಿವರು ಕೂಡ ಕುಡುಕರ ಸಂಘದ ಬೇಡಿಕೆಗಳನ್ನ ನೋಡಿ ಬೆಚ್ಚಿಬಿದ್ದಿದ್ದರು. ಇಷ್ಟು ಸಾಲದು ಎನ್ನುವಂತೆ ಹೊಸದಾಗಿ ಕುಡುಕರ ಸಂಘದ ಅಪ್ಲಿಕೇಷನ್, ಅರ್ಥಾತ್ ಅರ್ಜಿ ಒಂದು ವೈರಲ್ ಆಗುತ್ತಿದೆ. ಕುಡುಕರ ಸಂಘಕ್ಕೆ ಸೇರಲು ಈ ಮೂಲಕ ಆಹ್ವಾನ ನೀಡಲಾಗಿದೆ ಎಂಬ ವದಂತಿ ದಟ್ಟವಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಹಾಗಾದ್ರೆ 'ಅಖಿಲ ಕರ್ನಾಟಕ ಕುಡುಕರ ಸಂಘ' ಅರ್ಜಿ ಹೇಗಿದೆ? ಮುಂದೆ ಓದಿ.

Explore The Drinkers Association Members Application

ಕುಡುಕರ ಸಂಘಕ್ಕೆ ಸೇರಲು ಏನು ಮಾಡಬೇಕು?

ಅಂದಹಾಗೆ ಈಗ ವೈರಲ್ ಆಗುತ್ತಿರುವ ಅಪ್ಲಿಕೇಷನ್‌ನಲ್ಲಿ, 'ಅಖಿಲ ಕರ್ನಾಟಕ ಕುಡುಕರ ಸಂಘ' ಎಂದು ಮೇಲೆ ದೊಡ್ಡದಾಗಿ ಬರೆಯಲಾಗಿದೆ. ಅದರ ಕೆಳಗಡೆ, 'ಡಿಸೆಂಬರ್ 31ರ 'ಕುಡುಕರ ದಿನಾಚರಣೆ' ಅಂಗವಾಗಿ ಪಾರ್ಟಿ ಅರ್ಜಿ' ಎಂದು ಬರೆಯಲಾಗಿದೆ. ಹಾಗೇ ಈ ಅಪ್ಲಿಕೇಷನ್ ಅಂದ್ರೆ ಅರ್ಜಿಗೆ 'ಫಾರ್ಮ್ ನಂ. 30 & 60' ಎಂದು ಹೆಸರು ಕೊಡಲಾಗಿದೆ. ಈ ಮೂಲಕ ಆರಂಭವಾಗುವ ಅರ್ಜಿಯಲ್ಲಿ ಫೋಟೋ ಅಂಟಿಸೋದಕ್ಕೂ ಜಾಗ ಬಿಟ್ಟಿದ್ದು ವಿಶೇಷ ಎನ್ನಬಹುದು.

ಕುಡುಕರು ಏನೆಲ್ಲಾ ಮಾಹಿತಿ ನೀಡಬೇಕು?

ಹಾಗೇ ಈ ಅರ್ಜಿಯಲ್ಲಿ ಮಾಹಿತಿ ನೀಡುವವರು ತಮ್ಮ ಸಂಪೂರ್ಣ ಹೆಸರನ್ನು ತಿಳಿಸಬೇಕು ಎಂದು ಕೋರಲಾಗಿದೆ. ಮನೆ ವಿಳಾಸ, ಮನೆಯ ದೂರವಾಣಿ ಸಂಖ್ಯೆ, ಮದ್ಯದ ಪ್ರಕಾರನ ಅಂದ್ರೆ ಯಾವ ಬ್ರ್ಯಾಂಡ್ ಅಂತ ತಿಳಿಸಬೇಕಾಗಿದೆ. ಹಾಗೇ, ಯಾವುದರ ಜೊತೆಗೆ ಮಿಕ್ಸಿಂಗ್ ಮಾಡ್ತಾರೆ ಅನ್ನೋದನ್ನೂ ತಿಳಿಸಬೇಕಂತೆ. ಆ ಪ್ರಕಾರ, ನೀರು, ಸೋಡ ಹಾಗೂ ಕೋಕ್ ಆಪ್ಷನ್ ನೀಡಲಾಗಿದೆ ಮದ್ಯ ಪ್ರಿಯರಿಗೆ.

ಸ್ನ್ಯಾಕ್ಸ್‌ಗೆ ಏನು ಬೇಕಾಗುತ್ತೆ ಹೇಳಿ?

ಈ ಮಧ್ಯೆ ಕುಡಿಯುವಾಗ ಸ್ನ್ಯಾಕ್ಸ್‌ಗೆ ಏನ್ ಬೇಕು? ಅಂತಲೂ ಅರ್ಜಿಯಲ್ಲಿ ತಿಳಿಸಬೇಕಿದೆ. ಹಾಗೂ ಕುಡಿಯಲು ಬರುವವರು ವೆಜ್ ಅಥವಾ ನಾನ್ ವೆಜ್? ಅನ್ನೋದನ್ನು ತಿಳಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಾಗೇ ತಾಯಿ ಅಥವಾ ಪತ್ನಿ ಪರ್ಮಿಷನ್ ಪಡೆದು ಬಂದಿದ್ದೀರಾ? ಎಂದು ತಿಳಿಸಬೇಕು. ಹಾಗೇ ಯಾರು ಪರ್ಮಿಷನ್ ಕೊಟ್ಟಿರುತ್ತಾರೋ ಅವರ ಸೈನ್ ಕೂಡ ಇರಬೇಕಂತೆ!

ಒಟ್ನಲ್ಲಿ ಈ ಅರ್ಜಿ ನಿಜವೋ ಅಥವಾ ಟ್ರೋಲ್ ಪೇಜ್‌ಗಳು ತಮಾಷೆಗೆ ಮಾಡಿರುವುದೋ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಅಪ್ಲಿಕೇಷನ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಕುಡುಕರ ಸಂಘದ ವಿಚಾರ ಕೂಡ ಎಲ್ಲೆಡೆ ಹಬ್ಬುತ್ತಿದೆ. ಹೊಸ ವರ್ಷ ಹತ್ತಿರ ಬಂದ ಹಿನ್ನೆಲೆ ಕುಡುಕರು ಅಥವಾ ಮದ್ಯ ಪ್ರಿಯರು ಈ ಅಪ್ಲಿಕೇಷನ್ ಶೇರ್ ಮಾಡಿ ನಸುನಗೆ ಬೀರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+