‘ತಿಂಗಳಿಗೆ ಇಂತಿಷ್ಟು ಕಲೆಕ್ಷನ್‌ ಮಾಡಿ ದೆಹಲಿಗೆ ಕಳಿಸಲೇಬೇಕು ಎಂದು..’

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಗ್ಯಾರಂಟಿ ವಾರ್ ಬಲು ಜೋರಾಗುತ್ತಿದೆ. ಒಬ್ಬರಿಗೆ ಮತ್ತೊಬ್ಬರು ಸವಾಲು ಎಸೆಯುತ್ತಾ ಫೈಟಿಂಗ್ ಮುಂದುವರಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ & ಬಿಜೆಪಿ ಜಗಳ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಇದು ಸಾಲದು ಎಂಬಂತೆ ಈ ಜಗಳ ಬೇರೆ ಬೇರೆ ದಿಕ್ಕಿಗೂ ಹರಡುತ್ತಿದ್ದು, ಇದೀಗ ಬಿಜೆಪಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದು, ಬಿಜೆಪಿ & ಕಾಂಗ್ರೆಸ್ ವಾರ್ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇಷ್ಟು ದಿನಗಳ ಕಾಲ, ವಿಪಕ್ಷ ನಾಯಕರೇ ಇಲ್ಲ & ಹೊಸ ಅಧ್ಯಕ್ಷರೂ ಆಯ್ಕೆಯಾಗಿಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸ್ತ್ರವನ್ನ ಪ್ರಯೋಗ ಮಾಡ್ತಿತ್ತು. ಹಿಗಿದ್ದಾಗಲೇ, ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿತ್ತು. ಹೀಗೆ ಅಲರ್ಟ್ ಆಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನ ಮತ್ತು ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಅವರನ್ನ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಬಿಜೆಪಿಗೆ ಹೊಸ ಹುಮ್ಮಸ್ಸು ಬಂದಿದ್ದು, 'ಕೈ' ವಿರುದ್ಧ ವಾಗ್ದಾಳಿ ಶುರುವಾಗಿದೆ.

Explore The BJP & Congress Talk War About Corruption In Karnataka

'ತಿಂಗಳಿಗೆ ಇಂತಿಷ್ಟು ಕಲೆಕ್ಷನ್‌..'

ಇದೀಗ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ, 'ಭ್ರಷ್ಟಾಚಾರದಲ್ಲಿ ಮುಳುಗಿರುವ @INCKarnataka ಸರ್ಕಾರದಲ್ಲಿ ಯಾವ ಫೈಲ್‌ ಅಲುಗಾಡಲೂ ಕಾಸು ಕೊಡಲೇಬೇಕು. ಬೆಳಗ್ಗೆಯಷ್ಟೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲಾದರೆ ಸಂಜೆಗೆ ಇಂಧನ ಇಲಾಖೆಯ ಭ್ರಷ್ಟಾಚಾರ ಹೊರಬಂದಿದೆ! ತಿಂಗಳಿಗೆ ಇಂತಿಷ್ಟು ಕಲೆಕ್ಷನ್‌ ಮಾಡಿ ದೆಹಲಿಗೆ ಕಳಿಸಲೇಬೇಕು ಎಂದು ಟಾರ್ಗೆಟ್‌ ನಿಗದಿ ಮಾಡಿರುವ ಕಾರಣ ಎಲ್ಲಾ ಇಲಾಖೆಗಳಲ್ಲೂ ಬೆಳಗ್ಗಿನಿಂದ ಸಂಜೆ ಏರು ಹೊತ್ತಿನ ವರೆಗೆ ದಂಧೆಯ ಮಾತುಕತೆಗಳೇ ನಡೆಯುತ್ತಿವೆ' ಎಂದು ಆರೋಪ ಮಾಡಿದೆ ಬಿಜೆಪಿ

ಹಾಗೇ ಇದೇ ಟ್ವೀಟ್‌ನಲ್ಲಿ ತನ್ನ ಆರೋಪವನ್ನು ಮುಂದುವರಿಸಿರುವ ಕರ್ನಾಟಕ ಬಿಜೆಪಿ, 'ಕಲೆಕ್ಷನ್‌ ನಿರಾತಂಕವಾಗಿ ನಡೆದರೆ ವಿದ್ಯುತ್‌ ಅವಘಡಗಳು ನಡೆದರೂ ಇಲಿ-ಹೆಗ್ಗಣಗಳ ನೆಪ ಹೇಳಿ ತಪ್ಪಿಸಿಕೊಳ್ಳುವ ಖಾತರಿಯನ್ನು ಸಚಿವರಾದ @thekjgeorge ಅವರೇ ನೀಡಿರುವಾಗ ಅಧಿಕಾರಿಗಳು ನಿರುಮ್ಮಳ ಭೋಜನ ಸವಿಯುತ್ತಾ ಕೂತಿದ್ದಾರೆ.' ಎಂದು ಆರೋಪ ಮಾಡಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಿರಿಕ್ ಜೋರಾಗಿದೆ.

ಒಟ್ಟಾರೆ ಹೇಳೋದಾದ್ರೆ ಬಿಜೆಪಿ & ಕಾಂಗ್ರೆಸ್ ನಡುವೆ ಕರ್ನಾಟಕ ರಾಜಕೀಯ ಅಖಾಡದಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಈ ಕಿಚ್ಚು ತಣ್ಣಗಾಗಲು ಪಂಚರಾಜ್ಯ ಚುನಾವಣೆ ಮಾತ್ರವಲ್ಲದೆ, ಲೋಕಸಭೆ ಚುನಾವಣೆ ಕೂಡ ಮುಗಿಯಬೇಕು. ಅಲ್ಲಿಯ ತನಕ ಇಬ್ಬರ ಮಧ್ಯೆ ಇದೇ ರೀತಿ ಫೈಟಿಂಗ್ ಮುಂದುವರಿಯೋದು ಗ್ಯಾರಂಟಿ ಅಂತಿದ್ದಾರೆ ಕರ್ನಾಟಕದ ಜನತೆ. ಮುಖ್ಯವಾಗಿ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಬಗ್ಗೆ ಚರ್ಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+