ಯತ್ನಾಳ್ ಸುಳ್ಳು ಹೇಳಿದ್ದರೆ ಅವರನ್ನು ಪಕ್ಷದಿಂದ ಕಿತ್ತುಹಾಕಿಲ್ಲ ಯಾಕೆ?: ರಣದೀಪ್ ಸುರ್ಜೆವಾಲ ಪ್ರಶ್ನೆ
ಬೊಮ್ಮಾಯಿ ಅವರೇ, ಕಟೀಲ್ ಅವರೇ, ನಡ್ಡಾ ಅವರೇ, ಅಮಿತ್ ಶಾ ಅವರೇ, ನಿಮ್ಮ ಧನದಾಹ ಯಾವಾಗ ನೀಗಲಿದೆ? ಎಂದು ಸುರ್ಜವಾಲ ಪ್ರಶ್ನಿಸಿದ್ದಾರೆ.
ಬೆಂಗಳೂರು,ಮಾರ್ಚ್4: ಬಿಜೆಪಿ ಸರ್ಕಾರದ ಅಕ್ರಮದ ಬಗ್ಗೆ, ಬಿಜೆಪಿಯ ಯತ್ನಾಳ್ ಅವರು ಮುಖ್ಯಮಂತ್ರಿ ಕುರ್ಚಿ 2500 ಕೋಟಿಗೆ ಮಾರಾಟವಾಗಿದೆ ಎಂದರು. ಯತ್ನಾಳ್ ಅವರು ಸುಳ್ಳು ಹೇಳಿದ್ದರೆ ಅವರನ್ನು ಪಕ್ಷದಿಂದ ಕಿತ್ತುಹಾಕಿಲ್ಲ ಯಾಕೆ? ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯತ್ನಾಳ್ ಅವರು ಸತ್ಯ ಹೇಳಿದ್ದರೆ ಬೊಮ್ಮಾಯಿ ಅವರು ಎಷ್ಟು ಹಣ ಕೊಟ್ಟು ಸಿಎಂ ಆಗಿದ್ದಾರೆ ಹೇಳಬೇಕು. ಬಿಜೆಪಿ ನಾಯಕರ ಪುತ್ರರು ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ರಾಜ್ಯದಲ್ಲಿ ಈ ಹಿಂದೆ ವಿಜಯೇಂದ್ರ ಟ್ಯಾಕ್ಸ್ ಹೆಚ್ಚು ಜನಪ್ರಿಯವಾಗಿತ್ತು. ಬಿಜೆಪಿಯ ಈ ಹಿಂದಿನ ಸಿಎಂ ಅವರ ಪುತ್ರರಿಗೆ ಗುತ್ತಿಗೆದಾರರು ಲಂಚ ನೀಡಬೇಕಿತ್ತು. ಆ ಮೂಲಕ ಬಿಜೆಪಿ ನಾಯಕರ ಪುತ್ರರ ಅಕ್ರಮಗಳು ಹೆಚ್ಚಾಗಿವೆ ಎಂದರು.

ಬಿಜೆಪಿ ತನ್ನ ಹೆಸರನ್ನು ಬದಲಿಸಿಕೊಳ್ಳಬೇಕು. ಅರು ಭಾರತೀಯ ಜನತಾ ಪಕ್ಷದಿಂದ, ಭ್ರಷ್ಟ ಜನತಾ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳಬೇಕು. ಬೊಮ್ಮಾಯಿ ಅವರ ಸರ್ಕಾರವನ್ನು ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಎಂದು ಕರೆಯಬೇಕು.ಈ ರಾಜ್ಯದಲ್ಲಿ ಯಾವ ರೀತಿಯಲ್ಲಿ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದರೆ ಜನರ ಸರ್ಕಾರವನ್ನು ಸಂಪೂರ್ಣವಾಗಿ ಲೂಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರದ ಮಾದರಿಯನ್ನು ನೀಡಿದೆ.
ಈ ಸರ್ಕಾರ 40% ಸರ್ಕಾರ ಎಂದು, ಮುಖ್ಯಮಂತ್ರಿಯನ್ನು ಪೇಸಿಎಂ ಎಂದು ಕರೆಯುತ್ತಾರೆ. ಈ ಮಾತನ್ನು ನಾವು ಮಾತ್ರ ಹೇಳುತ್ತಿಲ್ಲ. ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಈ ಸರ್ಕಾರದಲ್ಲಿ ಕಮಿಷನ್ ನೀಡದೇ ಏನು ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಬಿಜೆಪಿ ಸರ್ಕಾರ ಕೇವಲ ಲಂಚದ ಸಿದ್ಧಾಂತವನ್ನು ಹೊಂದಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾದರೂ ಆತ ತಾನು ಮಾಡಿದ ಕೆಲಸಕ್ಕೆ ಬಿಲ್ ಕೇಳಿದಾಗ 40% ಲಂಚ ಕೇಳಿದರು.
ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಆದರೆ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಲಿಲ್ಲ. ಬಿಜೆಪಿ ತನ್ನದೇ ಕಾರ್ಯಕರ್ತನನ್ನು ಬಿಡಲಿಲ್ಲ, ಇನ್ನು ಬೇರೆಯವರನ್ನು ಬಿಡುತ್ತಾರಾ? ಇನ್ನು ಬೆಂಗಳೂರಿನ ಗುತ್ತಿಗೆದಾರ ಪ್ರಶಾಂತ್, ತುಮಕೂರಿನಲ್ಲಿ ಗುತ್ತಿಗೆದಾರ ರಾಜೇಂದ್ರ ಅವರು ಲಂಚ ನೀಡಲಾಗದೇ ಪ್ರಾಣ ಬಿಟ್ಟಿದ್ದು, ಈ 40% ಸರ್ಕಾರದ ಬಗ್ಗೆ ಈ ಪರಿವಾರದವರನ್ನು ಕೇಳಬೇಕು.
ಬೊಮ್ಮಾಯಿ ಅವರೇ, ಕಟೀಲ್ ಅವರೇ, ನಡ್ಡಾ ಅವರೇ, ಅಮಿತ್ ಶಾ ಅವರೇ, ನಿಮ್ಮ ಧನದಾಹ ಯಾವಾಗ ನೀಗಲಿದೆ? ಎಂದು ಹೇಳಿ ಬೆಂಗಳೂರಿನ ಜನರೆಲ್ಲಾ ಸೇರಿ ಆ ಹಣವನ್ನು ಸೇರಿಸಿ ನೀಡುತ್ತೇವೆ. ನೀವು ಸಂತೋಷ್ ಪಾಟೀಲ್, ಪ್ರಶಾಂತ್, ರಾಜೇಂದ್ರ ಅವರನ್ನು ಅವರ ಕುಟುಂಬದವರಿಗೆ ವಾಪಸ್ ನೀಡಿ. 40% ಕಮಿಷನ್ ಬಗ್ಗೆ ತಿಳಿಯಬೇಕಾದರೆ ಶಾಲಾ ಒಕ್ಕೂಟ ರೂಪ್ಸಾ ಸಂಸ್ಥೆಯನ್ನು ಕೇಳಿ. ಪ್ರಧಾನಮಂತ್ರಿಗಳು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದು, ಇದುವರೆಗೂ ಕೆಂಪಣ್ಣ ಅವರ ಪತ್ರಕ್ಕೆ ಉತ್ತರ ನೀಡಿಲ್ಲ.
ಈ ಸರ್ಕಾರದ ಕಮಿಷನ್ ಬಗ್ಗೆ ಮಠಾಧೀಶರು 30% ಕಮಿಷನ್ ನೀಡಬೇಕು. ಕೆಂಪಣ್ಣ ಅವರು ತುಮಕೂರಿನ ಬಿಜೆಪಿ ಶಾಸಕರ ಅಕ್ರಮದ ಬಗ್ಗೆ ಆಡಿಯೋ ದಾಖಲೆ ಬಿಡುಗಡೆ ಮಾಡಿದರು. 90 ಲಕ್ಷದ ಲಂಚ ಪಡೆದ ಬಗ್ಗೆ ಮಾಹಿತಿ ನೀಡಿದರು. ಅವರ ವಿರುದ್ಧ ಯಾವ ಕ್ರಮ ಕೈಗೊಂಡರು? ಈ ಸರ್ಕಾರದ 8 ಸಚಿವರ ವಿರುದ್ಧ ದಾಖಲೆ ಇವೆ ಎಂದರು. ಆದರೆ ಈ ಸರ್ಕಾರ ಅವರು ಯಾರು ಎಂದು ಸರ್ಕಾರ ಕೇಳಿದೆಯಾ? ಇಲ್ಲ. ಎಲ್ಲರೂ ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆ.












Click it and Unblock the Notifications