ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯೋದೇ ನನ್ನ ವೀಕ್ನೆಸ್ಸೂ: ನೋಟು ಬ್ಯಾನ್ ನಡುವೆಯೂ ಭಾರೀ ತೆರಿಗೆ ಸಂಗ್ರಹ

ನೋಟು ಬ್ಯಾನ್ ನಡುವೆಯೂ ಮದ್ಯ ಮಾರಾಟದಲ್ಲಿ ಗಣನೀಯ ಹೆಚ್ಚಳ, ಆ ಮೂಲಕ ಸರಕಾರಕ್ಕೆ ಕಳೆದ ಐವತ್ತು ದಿನಗಳಲ್ಲಿ ಸುಮಾರು 300 ಕೋಟಿಗೂ ಅಧಿಕ ಮೊತ್ತದ ತೆರಿಗೆ ಸಂಗ್ರಹವಾಗಿದೆ.

By Balaraj
|
Google Oneindia Kannada News

ಬೆಂಗಳೂರು, ಡಿ 31: ಐನೂರು ಮತ್ತು ಸಾವಿರ ರೂಪಾಯಿಯ ನೋಟು ನಿಷೇಧದ ಬಿಸಿ ಮದ್ಯ ಮಾರಾಟಕ್ಕೆ ತಟ್ಟಿಲ್ಲ, ಬದಲಿಗೆ ತೆರಿಗೆ ಸಂಗ್ರಹ ಹೆಚ್ಚಾಗುವ ಮೂಲಕ ಸರಕಾರಕ್ಕೆ ಅಬಕಾರಿ ಇಲಾಖೆ ತನ್ನ ಪಾಲನ್ನು ತುಸು ಹೆಚ್ಚಾಗಿಯೇ ನೀಡಿದೆ.

ನೋಟು ನಿಷೇಧದ ನಂತರ ಮದ್ಯಪ್ರಿಯರು ಕ್ಯಾಷ್ ಲೆಸ್ ವ್ಯವಹಾರಕ್ಕೆ ಹೆಚ್ಚಾಗಿ ಒಗ್ಗುತ್ತಿರುವುದು ಒಂದೆಡೆಯಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ರಾಜಸ್ವ ಸಂಗ್ರಹಣೆಯಲ್ಲಿ ಸುಮಾರು ಶೇ. 15ರಷ್ಟು ವೃದ್ದಿಯಾಗಿದೆ. (ಜ.1ರಿಂದ ಎಟಿಎಂನಲ್ಲಿ ದಿನಕ್ಕೆ 4,500 ರು. ಸಿಗುತ್ತೆ)

Even after demonetisation, liquor sale increased compare to last year

ಕಳೆದ ವರ್ಷ ನ 9ರಿಂದ ಡಿ 25ನೇ ತಾರೀಖಿನವರೆಗೆ ಅನ್ವಯವಾಗುವಂತೆ, 1,724 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಈ ವರ್ಷಕ್ಕೆ ಹೋಲಿಸಿದರೆ 2,030 ಕೋಟಿ ರೂ. ಹಣ ಸಂಗ್ರಹವಾಗಿದೆ. ಆ ಮೂಲಕ 306 ಕೋಟಿ ಅಧಿಕ ರಾಜಸ್ವ ಮೊತ್ತ ರಾಜ್ಯ ಬೊಕ್ಕಸಕ್ಕೆ ಬಂದಿದೆ.

ಕಳೆದ ವರ್ಷಕ್ಕಿಂತ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದು ತೆರಿಗೆ ಪ್ರಮಾಣ ಹೆಚ್ಚಿಸಿರುವುದರಿಂದ ಎನ್ನುವುದು ಅಬಕಾರಿ ಇಲಾಖೆಯ ಅಪರ ಆಯುಕ್ತ ವಿಶ್ವರೂಪ್ ಅವರ ಅಭಿಪ್ರಾಯ.

ಬ್ಯಾನ್ ಆಗಿರುವ ನೋಟುಗಳಲ್ಲೇ ಕೆಲವು ಬಾರ್ ಅಂಡ್ ರೆಸ್ಟೋರೆಂಟ್‍ಗಳು ಮದ್ಯವನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವುದು ತೆರಿಗೆ ಹೆಚ್ಚಳಕ್ಕೆ ನೀಡಬಹುದಾದ ಪ್ರಮುಖ ಕಾರಣಗಳಲ್ಲಿ ಒಂದು.

ರಾಜ್ಯ ಸರಕಾರದ ಬೊಕ್ಕಸಕ್ಕೆ ತೆರಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿರುವುದನ್ನು ನೋಡಿದರೆ, ನೋಟು ನಿಷೇಧದ ನೆಪ ಹೇಳದೇ ತೆರಿಗೆ ಸಂಗ್ರಹಿಸಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿರುವ ಹಿಂದೆ ರಾಜಕೀಯ ಅಡಗಿದೆಯೇ ಎಂದು ಅನುಮಾನಿಸುವಂತಾಗಿದೆ.

English summary
Even after demonetisation, liquor sale increased compare to last year. Government of Karnataka received additional 306 crores from Nov 9 to Dec 25, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X