ಕರ್ನಾಟಕದಲ್ಲಿ ಕಾಣಿಸಿಕೊಂಡ ಇಟಾ ವೈರಸ್ ಬಗ್ಗೆ ಮಾಹಿತಿ

ಬೆಂಗಳೂರು, ಆಗಸ್ಟ್ 13: ಕರ್ನಾಟಕದಲ್ಲಿ ಕೊರೊನಾ ರೂಪಾಂತರಿಯಾಗಿರುವ ಇಟಾ ವೈರಸ್ ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ರೂಪಾಂತರಿ ವೈರಸ್‌ 'ಇಟಾ' ಪ್ರಕರಣ ಪತ್ತೆಯಾಗಿತ್ತು. ಕತಾರ್‌ನಿಂದ ನಾಲ್ಕು ತಿಂಗಳ ಹಿಂದೆ ಆಗಮಿಸಿದ ವ್ಯಕ್ತಿಯಲ್ಲಿ ಈ ವೈರಸ್‌ ಪತ್ತೆಯಾಗಿದ್ದರೂ ನಂತರ ಅವರು ಗುಣಮುಖರಾಗಿ ಮರಳಿ ಕತಾರ್‌ಗೆ ತೆರಳಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ಹೇಳಿದ್ದರು.

ನಾಲ್ಕು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದ ಮೂಡುಬಿದಿರೆ ಮೂಲದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್‌ ದೃಢಪಟ್ಟಿತ್ತು. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವರ ಗಂಟಲು ದ್ರವ ಮಾದರಿಯನ್ನು ಜಿನೋಮಿಕ್‌ ಸ್ಟಡಿಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ರೂಪಾಂತರಿ ಈಟಾ ವೈರಸ್‌ ಇದ್ದುದು ದೃಢಪಟ್ಟಿದೆ.

Eta Variant of COVID In Karnataka: What Is It? How Is It Different? Details in Kannada

ಸಂಪರ್ಕಿತರೆಲ್ಲ ನೆಗೆಟಿವ್‌: ಈ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 150 ಮಂದಿಯನ್ನು ನಾಲ್ಕು ತಿಂಗಳ ಹಿಂದೆಯೇ ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರಿಗೂ ನೆಗೆಟಿವ್‌ ವರದಿ ಬಂದಿದೆ. ಅವರೆಲ್ಲರೂ ಈಗಲೂ ಆರೋಗ್ಯವಾಗಿದ್ದಾರೆ. ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ಕತಾರ್‌ಗೆ ವಾಪಸ್‌ ಹೋಗಿ ಆಗಿದೆ. ಹಾಗಾಗಿ ಆತಂಕಪಡಬೇಕಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಈ ಹೊಸ ರೂಪಾಂತರಿ ಇಟಾ ವೈರಾಣು ಬ್ರಿಟನ್ ಮತ್ತು ನೈಜೀರಿಯಾ ಭಾಗದಲ್ಲಿ ಪತ್ತೆಯಾಗಿತ್ತು. ಬಳಿಕ ಭಾರತದಲ್ಲಿ ಮಿಜೋರಾಂ ಸೇರಿ ಕೆಲವು ಭಾಗದಲ್ಲಿ ಕಂಡುಬಂದಿತ್ತು. ಇದೀಗ ಕತಾರ್‌ನಿಂದ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಗೂ ಅದರಿಂದಲೇ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಸಿಟಿವ್ ಬಂದ ನಂತರ ಅವರ ಸ್ಯಾಂಪಲ್ ಜಿನೋಮಿಕ್ ಸ್ಟಡಿಗೆ ಹೋಗಿದ್ದರಿಂದ ನಾಲ್ಕು ತಿಂಗಳ ಬಳಿಕ ತಡವಾಗಿ ವರದಿ ಬಂದಿದೆ.

ಕೊರೊನಾ ವೈರಸ್ 2ನೇ ಅಲೆ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಎಷ್ಟರ ಮಟ್ಟಿಗಿದೆ ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಭಾರತಕ್ಕೆ ರೂಪಾಂತರಿ ವೈರಸ್ ಕಾಟ ಹೆಚ್ಚಾಗಿ ಕಾಡಿದೆ.

ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದಿತ್ತು. ಇದೀಗ ಈ ಕುರಿತು ಸ್ಪಷ್ಟನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ರೂಪಾಂತರಿ ವೈರಸ್ ಹೆಸರನ್ನು ಅದು ಪತ್ತೆಯಾದ ದೇಶದ ಹೆಸರಿನೊಂದಿಗೆ ಜೋಡಿಸುವುದಿಲ್ಲ ಎಂದಿದೆ.

ವೈರಸ್ ಮೊದಲು ವರದಿ ಮಾಡಿದ ದೇಶದ ಹೆಸರಿನೊಂದಿಗೆ ವೈರಸ್ ಅಥವಾ ರೂಪಾಂತರಿ ವೈರಸ್‌ಗಳನ್ನು ಗುರುತಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವೈರಸ್ ವೈಜ್ಞಾನಿಕ ಹೆಸರಿನಿಂದ ಉಲ್ಲೇಖಿಸುತ್ತಿದೆ. ಜೊತೆಗೆ ಸ್ಥಿರತೆಗಾಗಿ ಎಲ್ಲರು ವೈರಸ್ ಗುರುತಿಸಲು ಇದೇ ಕ್ರಮ ಅನುಸರಿಸಲು ವಿನಂತಿಸಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ಕಳೆದ ವರ್ಷ ಅಕ್ಟೋಬರ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ B.1.617 ಕೊರೊನಾ ರೂಪಾಂತರಿ ವೈರಸ್ ಇದೀಗ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಈ ವೈರಸನ್ನು ಜಾಗತಿಕ ಆತಂಕಕಾರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಇಟಾ ವೈರಸ್ ಮೊದಲು ಕಾಣಿಸಿಕೊಂಡಿದ್ದೆಲ್ಲಿ?: ಯುಕೆ ಮತ್ತು ನೈಜೀರಿಯಾ ಭಾಗದಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು. ಭಾರತದಲ್ಲಿ ಮಿಜೋರಾಂ ಸೇರಿ ಕೆಲವು ಭಾಗದಲ್ಲೂ ಪತ್ತೆಯಾಗಿತ್ತು. ಇದೀಗ ಬಂದಿರುವ 'ಇಟಾ' ವರದಿಯಿಂದ ಕೋವಿಡ್‌ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನೈಜೀರಿಯಾದಲ್ಲಿ ಕಾಣಿಸಿಕೊಂಡಿತ್ತು. ಇದು ಒಂದು ರೂಪಾಂತರಿಯಾಗಿದೆ. ರೋಗದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆಯೇ ದೇಹದಲ್ಲಿರುವ ಪ್ರತಿಕಾಯಗಳನ್ನು ಕೂಡ ದುರ್ಬಲಗೊಳಿಸಲಿದೆ. ಇಲ್ಲಿಯವರೆಗೆ 69 ದೇಶಗಳಲ್ಲಿ ಇಟಾ ರೂಪಾಂತರಿ ಪತ್ತೆಯಾಗಿದೆ.

ಇಟಾ ರೂಪಾಂತರಿ ಅಪಾಯಕಾರಿಯೇ?: ಕೊರೊನಾವೈರಸ್‌ನಲ್ಲಿ ಕಂಡುಬರುವ ಗಾಮಾ ಮತ್ತು ಬೀಟಾ ರೂಪಾಂತರವನ್ನೇ E484K ಇಟಾ ರೂಪಾಂತರ ಒಳಗೊಂಡಿದೆ. ಬೀಟಾ ಮತ್ತು ಗಾಮಾ ರೂಪಾಂತರಗಳು ದಕ್ಷಿಣ ಆಫ್ರಿಕಾದದಲ್ಲಿ ಪತ್ತೆಯಾದ E484K ರೂಪಾಂತರವು ಎಸ್ಕೇಪ್ ಮ್ಯುಟೇಷನ್ ಆಗಿದೆ. ಇಂತಹ ರೂಪಾಂತರಗಳು ಲಸಿಕೆಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಈ ವೈರಸ್ ರೋಗನಿರೋಧಕ ಶಕ್ತಿ ಇದ್ದವರಲ್ಲಿ ಲಕ್ಷಣಗಳಿಲ್ಲದಿದ್ದರೂ ಅಪಾಯವನ್ನುಂಟುಮಾಡಲಿದೆ ಎಂದು ಡಾ. ರವಿ ಗುಪ್ತಾ ಹೇಳಿದ್ದಾರೆ.

ಆದರೆ ಇಟಾ ವೈರಸ್ N501Y ರೂಪಾಂತರಿಗಳನ್ನು ಹೊತ್ತೊಯ್ಯುವುದಿಲ್ಲ. ಈ ರೂಪಾಂತರದಿಂದ ಬೇಗ ಸೋಂಕು ಬಹುಮಂದಿಗೆ ಹರಡುತ್ತದೆ. ರೂಪಾಂತರಿ ಭಿನ್ನವಾಗಿದೆ: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇಟಾ ರೂಪಾಂತರವು ಭಿನ್ನವಾಗಿದೆ ಏಕೆಂದರೆ ಇದು E484K ಮತ್ತು F888L ರೂಪಾಂತರಿಗಳನ್ನು ಹೊಂದಿದೆ. ಹಾಗೂ ಇದರಿಂದ ಸಾವಿನ ಸಂಭವ ಕಡಿಮೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+