ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಮಹಿಳಾ ಕಂಪನಿಗಳು ಆರಂಭ
ಬೆಂಗಳೂರು, ಮೇ 11: ಕರ್ನಾಟಕ ಸರ್ಕಾರ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ ಮಹಿಳಾ ಪೊಲೀಸ್ ಕಂಪನಿಗಳನ್ನು ಸೃಜಿಸುವ ಕುರಿತು ಆದೇಶವನ್ನು ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಚಳವಳಿ, ಧರಣಿ ಇನ್ನಿತರ ಹೋರಾಟಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಅವುಗಳನ್ನು ಸಮಪರ್ಕವಾಗಿ ನಿಭಾಯಿಸಲು ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಅವಶ್ಯಕತೆ ಇದೆ ಎಂದು ತಿಳಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ. ಎನ್. ವನಜ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚ) ಆದೇಶವನ್ನು ಹೊರಡಿಸಿದ್ದಾರೆ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರ ಪತ್ರವನ್ನು ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕಗಳು ಒಂದು ಪ್ರಹಾರ ದಳವಾಗಿದ್ದು, ಮತೀಯ ಹಾಗೂ ರಾಜಕೀಯ ಗಲಭೆಗಳು, ರೈತರ ಹೋರಾಟ, ವಿದ್ಯಾರ್ಥಿ ಚಳುವಳಿ ಹಾಗೂ ಇನ್ಯಾವುದೇ ಗಲಭೆಗಳನ್ನು ಹತ್ತಿಕ್ಕುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಸಮಾಜದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವ ಸಲುವಾಗಿ ಸದಾ ಸಿದ್ಧತೆಯಲ್ಲಿರುವ ಸನ್ನದ ಬಲವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಳವಳಿ, ಧರಣಿ ಇನ್ನಿತರೆ ಹೋರಾಟಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಅವುಗಳನ್ನು ಸಮಪರ್ಕವಾಗಿ ನಿಭಾಯಿಸಲು, ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಅವಶ್ಯಕತೆ ಇರುವುದಾಗಿ ತಿಳಿಸಿದ್ದು, ಹಾಲಿ 2ನೇ ಪಡೆ ಕ.ರಾ.ಮೀ.ಪೋ, ಬೆಳಗಾವಿ ಘಟಕದಲ್ಲಿರುವ ಒಂದು ಮಹಿಳಾ ಕಂಪನಿಗಳ ಹುದ್ದೆವಾರು ಮಂಜೂರಾತಿ ಬಲದ ವಿವರವನ್ನು ಒದಗಿಸಿರುತ್ತಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ ಸೈ.ಆರ್.ಪಿ.ಐ (ಪುರುಷ) ಅಧಿಕಾರಿ ಹುದ್ದೆಯಿಂದ ಅನುಯಾಯಿ (ಪುರುಷ) ವೃಂದದ ಬಲಾಬಲದ ವಿವರವನ್ನು ಒದಗಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ, ಕಮಾಂಡೆಂಟ್, 5ನೇಪಡೆ, ಕ.ರಾ.ಮೀ.ಪ್ರೊ, ಮೈಸೂರು, ಕಮಾಂಡೆಂಟ್ 6ನೇ ಪಡೆ, ಕ.ರಾ.ಮೀ.ವೊ, ಕಲಬುರಗಿ, ಕಮಾಂಡೆಂಟ್, 7ನೇ ಪಡೆ, ಕ.ರಾ.ಮೀ.ಪೂ, ಮಂಗಳೂರು, ಕಮಾಂಡೆಂಟ್, 8ನೇ ಪಡೆ, ಕ.ರಾ.ಮೀ.ಪೂ, ಶಿವಮೊಗ್ಗ, ಕಮಾಂಡೆಂಟ್, 10ನೇ ಪಡೆ, ಕ.ರಾ.ಮೀ.ಪೂ, ಶಿಗ್ಗಾವಿ, ಕಮಾಂಡೆಂಟ್, 11ನೇ ಪಡೆ, ಕ.ರಾ.ಮೀ.ಪೂ, ಹಾಸನ ಮತ್ತು ಕಮಾಂಡೆಂಟ್, 12ನೇ ಪಡೆ, ಕ.ರಾ.ಮೀ.ಪೂ, ತುಮಕೂರು ಹೀಗೆ ಎಲ್ಲಾ 7 ಪಡೆಗಳಲ್ಲೂ ಮಹಿಳಾ ಸಿಬ್ಬಂದಿ ಬಲದ ಮಂಜೂರಾತಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಗಲಭೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಲಿ ಇರುವ 2ನೇ ಪಡೆ, ಕ.ರಾ.ಮೀ.ಪೂ, ಬೆಳಗಾವಿ ಮತ್ತು 4ನೇ ವಡ, ಕ.ರಾ.ಮೀ.ವೂ, ಬೆಂಗಳೂರು ಘಟಕಗಳಿಂದ ಇತರ ಜಿಲ್ಲೆಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಿದಾಗ ಉಂಟಾಗುವ ಪ್ರಯಾಣದ ಅಂತರವನ್ನು ಕಡಿಮೆ ಮಾಡಿ ಸೂಕ್ತ ಸಮಯದಲ್ಲಿ ಗಲಭೆ ನಿಯಂತ್ರಣಕ್ಕೆ ತರಲು, ಸದರಿ ಪಡೆಗಳಲ್ಲಿನ ಮಂಜೂರಾತಿ ಬಲದಿಂದ ಹುದ್ದೆಗಳನ್ನು "ಮಹಿಳೆ" ಎಂದು ವರ್ಗೀಕರಿಸಿ ಆದೇಶ ಹೊರಡಿಸುವಂತೆ ಕೋರಿದ್ದಾರೆ.
ಸದರಿ ಪ್ರಸ್ತಾವನೆಯಿಂದಾಗಿ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲವಾದ್ದರಿಂದ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ಅಧೀನದಲ್ಲಿ ಕಾರ್ಯನಿರ್ವಹಿಸಲು 7 ಪಡೆಗಳಲ್ಲಿ ಮಹಿಳಾ ಕಂಪನಿಗಳನ್ನು ಸೃಜಿಸಲು ಅನುವಾಗುವಂತೆ ಮಂಜೂರಾತಿ ಬಲದಲ್ಲಿ ವಿವರಿಸಿರುವಂತೆ, ಸ್ಪೆ.ಆರ್.ಪಿ.ಐ. ಹುದ್ದೆಯಿಂದ ಅನುಯಾಯಿ ಹುದ್ದೆಯವರೆಗೆ ಒಟ್ಟು ವಿವಿಧ ವೃಂದದ 987 ಹುದ್ದೆಗಳನ್ನು ಮಹಿಳೆ ಎಂದು ವರ್ಗೀಕರಿಸಿ ಮಂಜೂರಾತಿ ನೀಡುವಂತೆ ಕೋರಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಮಾಂಡೆಂಟ್, 5ನೇ ಪಡೆ, ಕ.ರಾ.ಮೀ.ಪೂ, ಮೈಸೂರು ಮತ್ತು ಕಮಾಂಡೆಂಟ್, 6ನೇ ಪಡೆ, ಕ.ರಾ.ಮೀ.ಪೂ, ಕಲಬುರಗಿಯಲ್ಲಿರುವ ಕರ್ನಾಟಕ ರಾಜ ಮೀಸಲು ಪಡೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಪ್ರತಿ ಪಡೆಗೆ ತಲ್ಲಾ 141 ಹುದ್ದೆಗಳಂತೆ ಒಟ್ಟು 282 ಹುದ್ದೆಗಳನ್ನು "ಮಹಿಳೆ" ಎಂದು ವರ್ಗೀಕರಿಸಲು ಸಹಮತಿ ನೀಡಿ ಆದೇಶಿಸಿದೆ.
ಹುದ್ದೆಗಳ ವಿವರ
* ಮಹಿಳಾ ಸ್ಪೆಷಲ್ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ 1
* ಮಹಿಳಾ ಸ್ಪೆಷಲ್ ರಿಸರ್ವ್ ಸಬ್-ಇನ್ಸ್‌ಪೆಕ್ಟರ್ 4
* ಮಹಿಳಾ ಸ್ಪೆಷಲ್ ರಿಸರ್ವ್ ಸಹಾಯಕ ಸಬ್-ಇನ್ಸ್‌ಪೆಕ್ಟರ್ 12
* ಮಹಿಳಾ ಸ್ಪೆಷಲ್ ರಿಸರ್ವ್ ಹೆಡ್ ಕಾನ್ಸ್‌ಟೇಬಲ್ 36
* ಮಹಿಳಾ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ 76
* ಅನುಯಾಯಿ 12. ಒಟ್ಟು 141 ಹುದ್ದೆಗಳು.
-
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ -
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ












Click it and Unblock the Notifications