ಈ ಗುತ್ತಿಗೆ ನೌಕರರಿಗೂ ಇಎಸ್ಐ ಅನ್ವಯ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು, ಆಗಸ್ಟ್ 16: ಗುತ್ತಿಗೆ ನೌಕರರಿಗೆ ಅನುಕೂಲ ಆಗುವಂತೆ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಕಾರ್ಖಾನೆ ಆವರಣದಲ್ಲಿ ಅದೇ ಸಂಸ್ಥೆಗೆ ಸಂಬಂಧಿತ ಪೂರಕ ಕಾರ್ಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರಿಗೂ ಇಎಸ್‌ಐ (ನೌಕರರ ರಾಜ್ಯ ವಿಮಾ) ಅನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ನೌಕರರ ರಾಜ್ಯ ವಿಮಾ ಇಎಸ್‌ಐ ಕಾಯ್ದೆ ಸೆಕ್ಷನ್ 2(6) ಅಡಿಯಲ್ಲಿ ನೌಕರ ಎಂದರೆ ಮುಖ್ಯ ಉದ್ಯೋಗದಾತ ನೇರವಾಗಿ ನೇಮಮ ಮಾಡಿಕೊಂಡವರನ್ನು ಅಷ್ಟೇ ಅಲ್ಲದೆ, ಕಾರ್ಖಾನೆಯ ಇತರೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಿಕ ಮಾಡಿಕೊಂಡ ಕಾರ್ಮಿಕರನ್ನು ಒಳಗೊಂಡಿರುತ್ತದೆ.

ಆದ್ದರಿಂದ ಕಾರ್ಖಾನೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಕ ಆದವರು ಇಎಸ್‌ಐ ಕಾಯ್ದೆಗೆ ಒಳಪಡಲಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಕಾರ್ಮಿಕರಿಗೆ ಇಎಸ್‌ಐ ಪಾವತಿಸದ ಮೆಸೆಸ್ ಸನ್ಸೇರಾ ಇಂಜಿನಿಯರಿಂಗ್ ಕಂಪನಿಗೆ ವಿಧಿಸಿದ್ದ ದಂಡದ ಮೊತ್ತ ಕಡಿಮೆ ಮಾಡಿದ್ದ ಇಎಸ್‌ಐ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಇನ್ನು ಇಎಸ್‌ಐ ಕಾರ್ಪೊರೇಷನ್ ಸಹಾಯಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ. ಇಎಸ್‌ಐ ಕಾರ್ಪೊರೇಷನ್ ವಿಧಿಸಿದ ಮೊತ್ತ ಕಾನೂನಿನ ಅನ್ವಯ ಸಮರ್ಥ ಆಗಿದ್ದು, 13,52,825 ರೂಪಾಯಿಗಳನ್ನು ಮುಂದಿನ 8 ವಾರದಲ್ಲಿ ಪಾವತಿ ಮಾಡುವಂತೆ ಕಂಪನಿಗೆ ಸೂಚಿಸಿದೆ.
ಪ್ರಕರಣದಲ್ಲಿ ಗುತ್ತಿಗೆದಾರರ ಮೂಲಕ ನಿರ್ಮಾಣ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಇಎಸ್ಐ ಕಾಯ್ದೆ ಒಳಪಡುವುದಿಲ್ಲ ಎಂಬ ವಾದವನ್ನು ಒಪ್ಪಲು ಆಗುವುದಿಲ್ಲ. ಕಾರ್ಖಾನೆ ವಿಸ್ತರಣೆ, ಕಾರ್ಯಚರಣೆಯ ನಿರ್ವಹಣೆ ಕಾರ್ಯಗಳು ಉತ್ಪಾದನಾ ಘಟಕದ ನಿರ್ವಹಣೆಯಿಂದ ಪ್ರತ್ಯೇಕ ಆಗಿಲ್ಲ. ಈ ಕಾರ್ಯಗಳಲ್ಲಿ ಭಾಗಯಾಗುವ ಕಾರ್ಮಿಕರೂ ಕೂಡ ಕಾರ್ಖಾನೆಯ ದಕ್ಷತೆಯ ಅವಿಭಾಜ್ಯ ಅಂಗ ಆಗಿರಲಿದ್ದಾರೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ಗುತ್ತಿಗೆ ಆಧಾರದ ಕಾರ್ಮಿಕರು ಪಾವತಿ ಮಾಡಿರುವ ಕುರಿತಂತೆ ಅಗತ್ಯ ವಿವರಗಳನ್ನು ಒದಗಿಸಿಲ್ಲ. ಆದ್ದರಿಂದ ಕೆಲಸದ ಸ್ವರೂಪವನ್ನು ಆಧರಿಸಿ ವೇತನ ಸೇರಿ ಎಲ್ಲಾ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಿ ಶೇಕಡ 25 ರಷ್ಟು ಪಾವತಿ ಮಾಡಲು ಅಂದಾಜು ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ. ಮೊತ್ತವನ್ನು ಕಡಿಮೆ ಮಾಡಿರುವ ಇಎಸ್ಐ ನ್ಯಾಯಾಲಯದ ಕ್ರಮ ದೋಷದಿಂದ ಕೂಡಿದೆ.
ಆದ್ದರಿಂದ ಕಾನೂನು ಸಮರ್ಥನೆ ಕೂಡ ಇಲ್ಲ. ಇದೊಂದು ಉದ್ಯೋಗದಾತರು ದಾಖಲೆಗಳನ್ನು ಒದಗಿಸದೆ, ಇರುವುದು ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡುವಂತಹ ಅಪಾಯಕಾರಿ ನಿದರ್ಶನ ಆಗಲಿದೆ. ಅದನ್ನು ಒಪ್ಪಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಉದ್ಯೋಗಿಗಳ ಅನಾರೋಗ್ಯ, ಹೆರಿಗೆ, ಕರ್ತ್ಯವದಲ್ಲಿ ಇದ್ದಾಗ ಆಗುವ ಅನಾಹುತಗಳಿಂದ ಉಂಟಾಗುವ ಸಮಸ್ಯೆಗಳು, ಆಕಸ್ಮಿಕವಾಗಿ ಎದುರಾಗುವಂತಹ ತೊಂದರೆಗಳಿಗೊಳಗಾದ ವ್ಯಕ್ತಿ ಮತ್ತು ಅವರ ಕುಟುಂಬಸ್ಥರಿಗೆ ವೈದ್ಯಕೀಯವಾಗಿ ಸಹಕಾರಿ ಆಗಲು ಇಎಸ್ಐ ಕಾಯ್ದೆಯನ್ನ ಜಾರಿ ಮಾಡಿಲಾಗಿದೆ. ಇದೊಂದು ಸಮಾಜ ಕಲ್ಯಾಣಕ್ಕೆ ಜಾರಿ ಮಾಡಿರುವ ಕಾಯ್ದೆ ಆಗಿದೆ. ಈ ಕಾಯ್ದೆಯನ್ನು ಕಲ್ಯಾಣ ಕಾನೂನಿನ ನಿಯಮಗಳು ಫಲಾನುಭವಿಗಳಿಗೆ ನೆರವಾಗಲು ಅರ್ಥೈಸಿಕೊಳ್ಳಬೇಕೇ ಹೊರತು ಅದರ ಉದ್ದೇಶವನ್ನು ವಿಫಲಗೊಳಿಸುವಂತದಲ್ಲ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications