ರಾಜ್ಯದಲ್ಲಿ 3 ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ಎಸ್ಕಾಂಗಳು ತೆಗೆದುಕೊಂಡ ನಿರ್ಧಾರ ಏನು?: ಇಲ್ಲಿದೆ ವಿವರ

ರಾಜ್ಯಾದ್ಯಂತ ಮುಂಬರುವ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ಎಲ್ಲಾ ಎಸ್ಕಾಂಗಳು ಸೂಕ್ತ ನಿರ್ಧಾರವನ್ನು ಕೈಗೊಂಡಿವೆ.

ಬೆಂಗಳೂರು, ಮಾರ್ಚ್‌, 16: ರಾಜ್ಯಾದ್ಯಂತ ಮುಂಬರುವ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ಎಲ್ಲಾ ಎಸ್ಕಾಂಗಳು ಸೂಕ್ತ ನಿರ್ಧಾರವನ್ನು ಕೈಗೊಂಡಿವೆ. ಹಾಗಾದರೆ ಈ ಬಗ್ಗೆ ವಿದ್ಯುತ್ ಸರಬರಾಜು ಕಂಪನಿಯ ಎಂಡಿ ಏನು ಹೇಳಿದ್ದಾರೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ಮುಂದಿನ ಮೂರು ತಿಂಗಳ ಅವಧಿಗೆ ರಾಜ್ಯದಲ್ಲಿ ವಿದ್ಯುತ್‌ ಅನ್ನು ಲೋಡ್ ಶೆಡ್ಡಿಂಗ್ ಮಾಡದಿರಲು ವಿದ್ಯುತ್ ಸರಬರಾಜು ಕಂಪನಿಗಳು ನಿರ್ಧಾರ ಮಾಡಿವೆ. ಬೆಸ್ಕಾಂ ಎಂಡಿ ಆಗಿರುವ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸೋಮವಾರ ಸಭೆ ನಡೆದಿದೆ. ಆಗ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಈ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಗ ಬೇಸಿಗೆ ಆರಂಭವಾಗಿದ್ದು, ವಿದ್ಯುತ್‌ ಪೂರೈಕೆಗೆ ಬೇಡಿಕೆಯೂ ಕೂಡ ಹೆಚ್ಚಾಗಿದೆ. ಮತ್ತೊಂದೆಡೆ ಈಗಾಗಲೇ SSLC ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಿವೆ. ಹಾಗೆಯೇ ರೈತರಿಗೂ ಕೂಡ ಹೆಚ್ಚಿನ ವಿದ್ಯುತ್ ಪೂರೈಸುವ ಜವಾಬ್ದಾರಿ ಎಸ್ಕಾಂಗಳ ಮೇಲೆ ನಿಂತಿದೆ. ಬೇಸಿಗೆಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆ ಮಾಡುವಂತೆ ರೈತ ಪ್ರತಿನಿಧಿಗಳು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು.

 ಬೇಡಿಕೆಗೆ ತಕ್ಕೆಂತೆ ವಿದ್ಯುತ್ ಖರೀದಿ

ಬೇಡಿಕೆಗೆ ತಕ್ಕೆಂತೆ ವಿದ್ಯುತ್ ಖರೀದಿ

ಈ ಹಿನ್ನೆಲೆಯಲ್ಲಿ ಎಲ್ಲಾ ಎಸ್ಕಾಂಗಳು ಮುಂದಿನ ಮೂರು ತಿಂಗಳ ಅವಧಿಗೆ ಬೇಕಾಗುವಷ್ಟು ವಿದ್ಯುತ್ ಬೇಡಿಕೆ ಕುರಿತು ಚಿಂತನೆ ನಡೆಸಿವೆ. ಹಾಗೆಯೇ ಬೇಡಿಕೆಗೆ ತಕ್ಕೆಂತೆ ವಿದ್ಯುತ್ ಖರೀದಿ ಮಾಡಿ ಗ್ರಾಹಕರಿಗೆ ಪೂರೈಸಲು ಎಸ್ಕಾಂಗಳು ನಿರ್ಧರಿಸಿವೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ‌ ಮಾಹಿತಿ ನೀಡಿದ್ದಾರೆ.

 ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ

ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ

ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಲು ಎಲ್ಲಾ ಎಸ್ಕಾಂಗಳು ನಿರ್ಧರಿಸಿವೆ. ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ಇಂಧನ ಇಲಾಖೆಯು ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ.

 ಮಹಾಂತೇಶ್ ಬೀಳಗಿ ಹೇಳಿದ್ದೇನು?

ಮಹಾಂತೇಶ್ ಬೀಳಗಿ ಹೇಳಿದ್ದೇನು?

ಬೇಸಿಗೆಯಲ್ಲಿ ವಿದ್ಯುತ್ ಖರೀದಿಗೆ ಬೇಕಾಗುವ ಹಣಕಾಸಿನ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲು ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಈಗಾಗಲೇ ಸೂಚನೆ ನೀಡಿದೆ. ಹಾಗೆಯೇ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

 ಯಾವ ತಿಂಗಳಿನಲ್ಲಿ ಎಷ್ಟು ಬೇಡಿಕೆ?

ಯಾವ ತಿಂಗಳಿನಲ್ಲಿ ಎಷ್ಟು ಬೇಡಿಕೆ?

ಮಾರ್ಚ್ ತಿಂಗಳಿನಿಂದ ಮೇ ವರೆಗೆ ವಿದ್ಯುತ್ ಬೇಡಿಕೆ ಮತ್ತು ಬಳಕೆಯನ್ನು ಬೆಸ್ಕಾಂ ಈಗಾಗಲೇ ಅಂದಾಜಿಸಿದೆ. ಮಾರ್ಚ್ ತಿಂಗಳಿನಲ್ಲಿ ದಿನದ ಗರಿಷ್ಠ ಬೇಡಿಕೆ 7,600 ಮೆಗಾ ವ್ಯಾಟ್ ತಲುಪುವ ಸಾಧ್ಯತೆಯಿದೆ. ಕಳೆದ 12 ದಿನಗಳಿಂದ ಸರಾಸರಿ ದಿನದ ವಿದ್ಯುತ್ ಬೇಡಿಕೆ 7400 ಮೆಗಾ ವ್ಯಾಟ್ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾರ್ಚ್‌ನಲ್ಲಿ ದಿನದ ವಿದ್ಯುತ್ ಸರಾಸರಿ 132 ಮಿಲಿಯನ್ ಯೂನಿಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಏಪ್ರಿಲ್‌ನಲ್ಲಿ ದಿನದ ವಿದ್ಯುತ್ ಬೇಡಿಕೆ 7650 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ಇದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 135 ಮಿಲಿಯನ್ ಯೂನಿಟ್ ಆಗುವ ಸಾಧ್ಯತೆ ಇದೆ. ಇನ್ನು ಮೇ ತಿಂಗಳ ದಿನದ ವಿದ್ಯುತ್ ಬೇಡಿಕೆ 6800 ಮೆಗಾ ವ್ಯಾಟ್‍ಗೆ ಇಳಿಕೆ ಆಗಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 124 ಮಿಲಿಯನ್ ಯೂನಿಟ್ ಆಗಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+