ಎರಿಕ್‌ಸನ್ ಇಂಡಿಯಾ, ಸೇವ್ ದಿ ಚಿಲ್ಡ್ರನ್ ಸಂಸ್ಥೆಗಳಿಂದ 6 ಆಂಬ್ಯುಲೆನ್ಸ್ ಹಸ್ತಾಂತರ
ಬೆಂಗಳೂರು, ಆ. 29: ನಗರಗಳಿಂದ ದೂರದಲ್ಲಿರುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಕೋವಿಡ್ ನಂತರದ ತುರ್ತು ಅಗತ್ಯ ಸೇವೆಗಳ ಮಹತ್ವದ ಬಗ್ಗೆ ಗಮನವಹಿಸಿ, ಎರಿಕ್ ಸನ್ ಇಂಡಿಯಾ ಮತ್ತು ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಸಹಯೋಗದೊಂದಿಗೆ 6 ಅಂಬುಲ್ಯೆನ್ಸ್‌ಗಳು ಹಸ್ತಾಂತರಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆ , ಉತ್ತರ ಕನ್ನಡ ಜಿಲ್ಲೆಯ ಗೊಕರ್ಣ ಸರ್ಕಾರಿ ಆಸ್ಪತ್ರೆ, ಕೋಲಾರ ಜಿಲ್ಲೆಯ ಕ್ಯಾಲನೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಯಾದಗಿರಿ ಜಿಲ್ಲೆಯ ಗುರುಮಿಠ್‌ಕಲ್ ಸಮುದಾಯ ಆರೋಗ್ಯ ಕೇಂದ್ರ, ದೊಡ್ಡಬಳ್ಳಾಪುರ ತಾಲ್ಲೂಕು ಆಸ್ಪತ್ರೆ, ಮತ್ತು ಮೈಸೂರಿನ ಸೇಂಟ್ ಆನ್ನಿ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ನೀಡಲಾಗಿದೆ.
ಗ್ರಾಮೀಣ ಭಾಗದ ಜನ ತುರ್ತು ಸಂದರ್ಭಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳನ್ನು ತಲುಪಲು ಈ ಆಂಬ್ಯುಲೆನ್ಸ್‌ಗಳು ಸಹಾಯಕವಾಗುತ್ತವೆ.

ಬೆಂಗಳೂರು ಗ್ರಾಂಮಾಂತರ ಜಿಲ್ಲೆ ಸಿಇಓ ರಮೇಶ ರೆಡ್ಡಿ, ತಹಶೀಲ್ದಾರ್ ಹೆಚ್ ಬಾಲಕೃಷ್ಣ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ಶ್ರೀ ಪ್ರಾದೇಶಿಕ ಆರೋಗ್ಯಾಧಿಕಾರಿ ಗಂಗಾಧರ್ ಇತರರು ಹಸಿರು ನಿಶಾನೆ ತೋರಿಸುವುದುರ ಮೂಲಕ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎರಿಕ್‌ಸನ್ ಇಂಡಿಯಾ ಗ್ಲೋಬಲ್ ಸರ್ವೀಸ್ ಎಂ.ಡಿ. ಅಮಿತಾಬ್ ರಾಯ್, "ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಜೀವ ಉಳಿಸಲು ಅಂಬ್ಯಲೇನ್ಸ್‌ಗಳು ಸಹಾಯಕವಾಗಬಲ್ಲದು ಎಂದು ಬಾವಿಸುತ್ತಾ, ಸಾರಿಗೆ ವ್ಯವಸ್ಥೆಯಲ್ಲಿನ ತೊಡಕುಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳು ಕರ್ನಾಟಕದಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪೂರಕವಾಗಿದೆ.

ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಮುಖ್ಯ ಕಾರ್ಯಕ್ರಮ ಅಧಿಕಾರಿಗಳಾದ ಅನಂದಿತ್ ರಾಯ್ ಚೌದರಿ, "ಭಾರತದಲ್ಲಿ ಕೋವಿಡ್ 19ರ ಎರಡನೇ ಅಲೇ ಬಂದುಹೊದ ಮೇಲೆ ಆರೋಗ್ಯ ಇಲಾಖೆಗಳ ಮೂಲಸೌಕರ್ಯಗಳನ್ನು ಸುಧಾರಿಸುವ ಅವಶ್ಯಕತೆ ಹೆಚ್ಚಾಗಿದೆ. ಇಂದಿರಿಂದಾಗಿ ದೂರದ ಸ್ಥಳಗಳಲ್ಲಿ ವಾಸಿಸುವ, ಅಂಚಿನ ಬಾಗದಲ್ಲಿರುವ ಸಮುದಾಯಗಳಿಗೂ ಸೇವಾ ಸೌಲಭ್ಯಗಳೂ ದೊರಕಬೇಕು. ಕೋವಿಡ್ ಸಾಂಕ್ರಾಮಿಕ ರೋಗವು ಆರೋಗ್ಯ ವ್ಯವಸ್ಥೆಯ ಮೇಲೆ ಅಗಾಧವಾದ ಮತ್ತು ನಿರಂತರವಾದ ಪರಿಣಾಮ ಬೀರಿದೆ. ಅನೇಕ ಇತರೆ ಕ್ಷೇತ್ರಗಳೂ ಸುಧಾರಿಸುವಲ್ಲಿ ಇನ್ನು ಹೆಣಗಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ಸೇವೆಯು ಅತ್ಯಂತ ಸವಾಲಿನದಾಯಕವಾಗಿದೆ. ಇದರ ನಿವಾರಣೆಗಾಗಿ ನಮ್ಮ ಸಂಸ್ಥೆ ಪಾಲುದಾರರಾಗಲು ಹರ್ಷವೆನಿಸುತ್ತದೆ," ಎಂದರು.
ಕರ್ನಾಟಕದ ಜೊತೆಗೆ ಜಾರ್ಖಂಡ್, ಆಸ್ಸಾಂ, ತೆಲಂಗಾಣ, ಬಿಹಾರ, ಪಶ್ಚಿಮ ಬಂಗಾಳ, ತಮಿಳನಾಡು, ರಾಜಸ್ಥಾನ್ ಉತ್ತರಪ್ರದೇಶಗಳಲ್ಲಿ ಎರಿಕ್‌ಸನ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ 30 ಅಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗಳಿಗೆ ನೀಡಲಾಗಿದೆ ಎಂದರು.












Click it and Unblock the Notifications