KSPCB: ಅರ್ಹತೆ ಇಲ್ಲದವರ ನೇಮಕ, ವಜಾ: ಎಚ್‌ಡಿಕೆ ವರ್ಗಾವಣೆ ಆರೋಪ ನಿಜವಾಯಿತೇ?

ಬೆಂಗಳೂರು, ಜುಲೈ 16: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿದ್ದ ವರ್ಗಾವಣೆ ಧಂದೆ ನಿಜವಾಯಿತೇ ಎಂಬ ಅನುಮಾನ ಮೂಡಿದೆ. ಅಂಥದೊಂದು ರಾಜಕೀಯ ಡ್ರಾಮಾ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದಿದೆ.

ಅರ್ಹತೆಯೆ ಇಲ್ಲದ ವ್ಯಕ್ತಿಯೊಬ್ಬರನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಈ ವ್ಯಕ್ತಿಯನ್ನು ಮಂಡಳಿಯ ಅಧ್ಯಕ್ಷ ಇದೀಗ ಮಂಡಳಿ ಪ್ರಭಾರ ಸದಸ್ಯ ಕಾರ್ಯದರ್ಶಿ ಅವರನ್ನು ವಜಾಗೊಳಿಸಿದ ಅಧ್ಯಕ್ಷ ಡಾ.ಶಾಂತ್ ತಮ್ಮಯ್ಯ ಅವರು ವಜಾಗೊಳಿಸಿದ್ದಾರೆ. ಈ ಮೂಲಕ ವರ್ಗಾವಣೆ ದಂಧೆ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

Environment Pollution Control Board President Dismiss Suri Payal Who Ilegal Appointed For Board

ಸೂರಿ ಪಾಯಲ್ ಎಂಬುವವರು ಈ ಮಂಡಳಿಯ ಪ್ರಭಾರ ಸದಸ್ಯರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಆದರೆ ಇವರಿಗೆ ಹುದ್ದೆಗೆ ತಕ್ಕ ಅರ್ಹತೆ ಇರಲಿಲ್ಲ. ಕೆಲವೇ ತಿಂಗಳ ಹಿಂದಷ್ಟೆ ಈ ಹುದ್ದೆಗೆ ವರ್ಗಾವಣೆಯಾಗಿದ್ದರು ಎಂದು ತಿಳಿದು ಬಂದಿದೆ.

ಅರ್ಹತೆ ಏನಿರಬೇಕು?

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದರಿ ಪ್ರಭಾರ ಸದಸ್ಯ ಕಾರ್ಯದರ್ಶಿಯಾಗಲು ಎರಡು ವರ್ಷ ವೃತ್ತಿ ಅನುಭವ ಹೊಂದಿರಬೇಕು. ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಆದರೆ ಸದ್ಯ ವಜಾಗೊಂಡ ಸೂರಿ ಪಾಯಲ್ ಅವರು ಕೇವಲ ಬಿಟೆಕ್ ನಲ್ಲಿ ಮಾತ್ರ ಪದವಿ ಪಡೆದಿದ್ದರು.

ಇನ್ನೂ ಇವರ ನೇಮಕ ಕಾನೂನು ಬಾಹಿರವಾಗಿ ನಡೆದಿದೆ. ಜಲ ನೀತಿ ನಿಯಮ ಪ್ರಕಾರ ಅಧ್ಯಕ್ಷರ ಗಮನಕ್ಕೆ ತರದೇ ನಿಯಮ ಮೀರಿ ನೇಮಕ ಮಾಡಿ ಸುತ್ತೋಲೆ ಹೊರಡಿಸಲಾಗಿತ್ತು. ಈ ಪ್ರಕ್ರಿಯೆ ನಾಲ್ಕು ತಿಂಗಳ ಹಿಂದಷ್ಟೇ ನಡೆದಿತ್ತು ಎನ್ನಲಾಗಿದೆ.

ಈ ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷ ಡಾ.ಶಾಂತ್ ತಮ್ಮಯ್ಯ ಅವರು ಕೂಲಂಕುಷವಾಗಿ ಪರಿಶೀಲಿಸಿ ಭಾನುವಾರ ಸೂರಿ ಪಾಯಲ್ ಅವರನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ.

ಎಚ್‌ಡಿಕೆ ಆರೋಪವೇನು?

ಇತ್ತೀಚೆಗೆ ವರ್ಗಾವಣೆ ದಂಧೆ, ಸಿಎಂ ಕಚೇರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. 'ವೈಎಸ್‌ಟಿ' ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. 'ವೈಎಸ್‌ಟಿ' ನೀಡದಿದ್ದರೆ ವರ್ಗಾವಣೆ ಪಟ್ಟಿ ಕಸದ ಬುಟ್ಟಿಗೆ ಎಂದು ಹೇಳಿದ್ದರು.

ಇನ್ನೂ ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರನ್ನು ಅರ್ಹತೆ ಇಲ್ಲದ ನೇಮಕ ಮಾಡಿದ್ದಾರೆ. ಇದೆಲ್ಲವು ಸಿಎಂ ಸಿದ್ದರಾಮಯ್ಯ ಅವರ ಮೂಗಿನ ನೇರದಲ್ಲೇ ನಡೆಯುತ್ತಿದೆ ಎಂದು ಅವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದರು.

ಕುಮಾರಸ್ವಾಮಿ ಅವರ ಆರೋಪಗಳು ಇದೀಗ ನಿಜವಾಯ್ತಾ? ಎಂಬ ಅನುಮಾನ ಮೂಡಿದೆ. ಇನ್ನೂ ಅರ್ಹತೆ ಇಲ್ಲದಿದ್ದರೂ ನೇಮಕಗೊಂಡ ಸೂರಿ ಪಾಯಲ್ ಹಿಂದಿನ ಪ್ರಭಾವವೇನು?. ಅವರ ಹಿಂದೆ ಯಾರಿದ್ದಾರೆ ಎಂಬೆಲ್ಲವು ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+