ಪ್ರಯಾಣಿಕರ ಗಮನಕ್ಕೆ: ಕೆಲವು ರೈಲು ಸೇವೆ ರದ್ದು, ಪಟ್ಟಿ
ಬೆಂಗಳೂರು, ಜೂನ್ 13; ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ನಡೆದ ರೈಲ್ವೆ ಅಪಘಾತ ಸ್ಥಳದ ಕಾಮಗಾರಿ, ಗುಂತಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ನಿರ್ವಹಣಾ ಕಾಮಗಾರಿಯ ಕಾರಣಕ್ಕೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ವಿವಿಧ ಕಾಮಗಾರಿ ಮತ್ತು ವಿವಿಧ ರಾಜ್ಯಗಳಲ್ಲಿ 'ಬಿಪೊರ್ ಜಾಯ್' ಚಂಡಮಾರುತ ಅಬ್ಬರ ಜೋರಾಗಿರುವುದರಿಂದ ರೈಲು ಸಂಪರ್ಕ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಕೆಎಸ್ಆರ್ ಬೆಂಗಳೂರು, ಎಸ್. ಎಸ್. ಎಸ್. ಹುಬ್ಬಳ್ಳಿ, ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸುವ ವಿವಿಧ ರೈಲುಗಳು ಸೇವೆ ಭಾಗಶಃ ರದ್ದು/ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ರೈಲು ಪ್ರಯಾಣ ಮಾಡುವವರು ಈ ಬಗ್ಗೆ ತಿಳಿದಿರುವುದು ಉತ್ತಮ.
ಕೆಲವು ರೈಲು ಭಾಗಶಃ ರದ್ದು; ಗುಂತಕಲ್ ವಿಭಾಗದಲ್ಲಿ ಇಂಜಿಯರಿಂಗ್ ನಿರ್ವಹಣಾ ಕಾಮಗಾರಿ ಜೂನ್ 12 ರಿಂದ 18 ರವರೆಗೆ ನಡೆಯುವುದರಿಂದ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಹೇಳಿದೆ.
ರೈಲು ಸಂಖ್ಯೆ 07337 ಎಸ್. ಎಸ್. ಎಸ್ ಹುಬ್ಬಳ್ಳಿ ಮತ್ತು ಗುಂತಕಲ್ ನಡುವೆ ಸಂಚರಿಸುವ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲನ್ನು ಜೂನ್ 12 ರಿಂದ 18 ರವರೆಗೆ ಬಳ್ಳಾರಿ ಮತ್ತು ಗುಂತಕಲ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ರೈಲು ಸಂಖ್ಯೆ 07338 ಗುಂತಕಲ್ ಮತ್ತು ಎಸ್. ಎಸ್. ಎಸ್ ಹುಬ್ಬಳ್ಳಿ ನಡುವೆ ಸಂಚರಿಸುವ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲನ್ನು ಜೂನ್ 12 ರಿಂದ 18 ರವರೆಗೆ ಗುಂತಕಲ್ ಮತ್ತು ಬಳ್ಳಾರಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ 'ಬಿಪೊರ್ ಜಾಯ್' ಚಂಡಮಾರುತದ ಹಿನ್ನಲೆಯಲ್ಲಿ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ. ರೈಲು ಸಂಖ್ಯೆ 19568 ಓಖಾ ಮತ್ತು ಟುಟಿಕೋರಿನ್ ವಿವೇಕ್ ಎಕ್ಸ್‌ಪ್ರೆಸ್ ರೈಲನ್ನು ಜೂನ್ 16 ರಂದು ಓಖಾ ಮತ್ತು ಅಹಮದಾಬಾದ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ರೈಲು ಸಂಖ್ಯೆ 16505 ಗಾಂಧಿಧಾಮ ಮತ್ತು ಕೆ. ಎಸ್. ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಜೂನ್ 13 ರಂದು ಗಾಂಧಿಧಾಮ ಮತ್ತು ಅಹಮದಾಬಾದ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಕೆಲವು ರೈಲುಗಳು ರದ್ದು; ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಕೆಲವು ದಿನಗಳ ಹಿಂದೆ ನಡೆದ ರೈಲು ದುರಂತದ ಸ್ಥಳದಲ್ಲಿನ ಕಾಮಗಾರಿಯ ಸಲುವಾಗಿ ಕೆಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಆಗ್ನೇಯ ರೈಲ್ವೆಯು ಹೇಳಿದೆ.
ಹೌರಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22887 ಹೌರಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಮ್ಸಫರ್ ಎಕ್ಸ್‌ಪ್ರೆಸ್ ರೈಲನ್ನು ಜೂನ್ 13 ರಂದು ರದ್ದುಗೊಳಿಸಲಾಗುತ್ತಿದೆ.
ಬೆಂಗಳೂರಿನಂದ ಪ್ರಾರಂಭವಾಗುವ ರೈಲು ಸಂಖ್ಯೆ 22888 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಹೌರಾ ಹಮ್ಸಫರ್ ಎಕ್ಸ್‌ಪ್ರೆಸ್ ರೈಲನ್ನು ಜೂನ್ 15 ರಂದು ರದ್ದುಗೊಳಿಸಲಾಗುತ್ತಿದೆ.
ಹೌರಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22831 ಹೌರಾ - ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಎಕ್ಸ್‌ಪ್ರೆಸ್ ರೈಲನ್ನು ಜೂನ್ 14 ರಂದು ರದ್ದುಗೊಳಿಸಲಾಗುತ್ತಿದೆ.
ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22832 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ - ಹೌರಾ ಎಕ್ಸ್‌ಪ್ರೆಸ್ ರೈಲನ್ನು ಜೂನ್ 16 ರಂದು ರದ್ದುಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications