Breaking: ಯುಗಾದಿಗೆ ಡಬಲ್ ಶಾಕ್- ಹಾಲಿನ ದರ ಜೊತೆಗೆ ವಿದ್ಯುತ್ ಬಿಲ್ ಹೆಚ್ಚಳ

ಬೆಂಗಳೂರು ಮಾರ್ಚ್ 26: ಈ ಬಾರಿ ಯುಗಾದಿ ಹಬ್ಬ ರಾಜ್ಯದ ಜನತೆಗೆ ಸಿಹಿಗಿಂತ ಕಹಿ ನೀಡುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ. ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಹಾಲಿ ದರದಲ್ಲಿ ನಾಲ್ಕು ರೂಪಾಯಿ ಏರಿಕೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ್ದು ಇದರೊಂದಿಗೆ ವಿದ್ಯುತ್ ದರ ಕೂಡ ಹೆಚ್ಚಾಗಲಿದೆ.

ಹೌದು.. ಇಂದು ಸಂಜೆ ಈ ಬಗ್ಗೆ ಚರ್ಚೆ ನಡೆಯಲಿದ್ದು ನಂತರ ವಿದ್ಯುತ್ ದರ ಹೆಚ್ಚಳದ ಬಗ್ಗೆ ಪ್ರಕಟಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮೆಟ್ರೋ, ಸಾರಿಗೆ ಬಸ್ ಪ್ರಯಾಣದ ದರ ಹೆಚ್ಚಳದಿಂದಾಗಿ ರಾಜ್ಯದ ಜನತೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಬಿಸಿ ಮುಟ್ಟಿಸುವುದನ್ನು ಮಾತ್ರ ನಿಲ್ಲಿಸುವಂತೆ ಕಾಣಿಸುತ್ತಿಲ್ಲ.

Electricity bill hike in Karnataka likely to be announced this evening after the discussion

ಇಂದು ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಇದರಿಂದ ಕಾಫಿ, ಟೀ, ಹಾಲಿನ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಇನ್ನೂ ವಿದ್ಯುತ್ ದರ ಏರಿಕೆಯಾದರೆ ಜನರ ಪಾಲಿಗೆ ಈ ಯುಗಾದಿ ಹಬ್ಬ ಸಂತೋಷ ತರುವುದಕ್ಕಿಂತ ಸಂಕಷ್ಟ ತರುವುದೇ ಹೆಚ್ಚಾಗಿದೆ.

ಇನ್ನೂ ಹಾಲಿನ ದರ ಏರಿಕೆಯಾಗುತ್ತಿದ್ದಂತೆ ವಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಳಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿ ಹಂತಕ್ಕೆ ಬಂದು ತಲುಪಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸವನ್ನ ಬರಿದಾಗಿಸಿ, ಆ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕುತ್ತಿದ್ದಾರೆಂದು ದೂರಿದ್ದಾರೆ.

ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ

ವಿದ್ಯುತ್ ದರ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರ ದರ ಏರಿಕೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಏಪ್ರಿಲ್ 1ರಿಂದ ನೂತನ ದರ ಜಾರಿಗೆ ಬರಲಿದೆ. ದರ ಏರಿಕೆ ಮಾಡಿ ಕೆಇಆರ್‌ಸಿ ಆದೇಶ ನೀಡಿದೆ. ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಾಗಿದ್ದು ಗ್ರಾಹಕರಿಗೆ ಆರ್ಥಿಕ ಹೊರೆ ಹೆಚ್ಚಾಗುವುದು ಪಕ್ಕಾ ಆಗಿದೆ.

ಬೆಲೆ ಏರಿಕೆ ನಿಲ್ಲಿಸಿ- ಎನ್‌ ರವಿಕುಮಾರ್ ಒತ್ತಾಯ

'ಗ್ಯಾರಂಟಿ ಯೋಜನೆಗಳಿಗಾಗಿ ಸಾರಿಗೆ, ಮೆಟ್ರೋ, ಹಾಲಿನ ದರ ಹೆಚ್ಚು ಮಾಡುತ್ತಾ ಕುಳಿತಿದ್ದಾರೆ. ಕೂಡಲೆ ರಾಜ್ಯದಲ್ಲಿ ಬೆಲೆ ಏರಿಕೆ ಮಾಡುವುದನ್ನು ನಿಲ್ಲಿಸಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಬೆಲೆ ಏರಿಕೆಯನ್ನು ನಿಲ್ಲಿಸಿ' ಎಂದು ರಾಜ್ಯ ಸರ್ಕಾರಕ್ಕೆ ಪರಿಷತ್ ಸದಸ್ಯ ಎನ್‌ ರವಿಕುಮಾರ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+