Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹೆಚ್ಚಳ

ಬೆಂಗಳೂರು, ಜನವರಿ 3: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ ಇ-ವಾಹನ ನೋಂದಣಿಯಲ್ಲಿ ಸುಮಾರು 1,500% ಹೆಚ್ಚಳವನ್ನು ಕಂಡಿದೆ. ಇದು 2019ರಲ್ಲಿ 6,150 ಇ ವಾಹನಗಳನ್ನು ನೋಂದಾಯಿಸಿದ್ದರೆ, 2022ರಲ್ಲಿ ಸಂಖ್ಯೆ 95,856ಕ್ಕೆ ತಲುಪಿದೆ.

ಕಳೆದ ವರ್ಷ(2022) ಅಕ್ಟೋಬರ್ (10,787) ಮತ್ತು ನವೆಂಬರ್‌ನಲ್ಲಿ (10,960) ಇ ವಾಹನಗಳ ಮಾಸಿಕ ನೋಂದಣಿ 10,000 ದಾಟಿತ್ತು. ರಾಜ್ಯದಲ್ಲಿ 2.9 ಕೋಟಿ ವಾಹನಗಳಿದ್ದು, 1.3 ಲಕ್ಷ ದ್ವಿಚಕ್ರ ವಾಹನಗಳು ಮತ್ತು 9,831 ಕಾರುಗಳು ಸೇರಿದಂತೆ 1.5 ಲಕ್ಷ ಇವಿಗಳಾಗಿವೆ.

ಇ ವಾಹನಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವುದು ಒಳ್ಳೆಯ ಸಂಕೇತ. ಆದರೆ ಬ್ಯಾಟರಿಯಲ್ಲಿ ಚಲಿಸುವ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಮಾತ್ರ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ರಸ್ತೆ ಸಾರಿಗೆ ನಿಗಮಗಳು ಕಾರ್ಯಾಚರಣೆಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಇಂಧನ ತುಂಬುವ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಬದಲಾಯಿಸಬೇಕು.

ಇ ವಾಹನಗಳನ್ನು ಖರೀದಿಸಲು ಉತ್ಸುಕರಾಗಿರುವ ಆಟೋರಿಕ್ಷಾ ಚಾಲಕರಿಗೆ ನೆರವು ನೀಡಲು ಸರ್ಕಾರ ಗಮನಹರಿಸಬೇಕು. ಆದಾಗ್ಯೂ, ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಮಾತ್ರ ಪರಿವರ್ತನೆಯು ಸಮರ್ಥನೀಯವಾಗಿರುತ್ತದೆ. ಬ್ಯಾಟರಿಗಳ ವೈಜ್ಞಾನಿಕ ವಿಲೇವಾರಿ ಮತ್ತೊಂದು ಸವಾಲಾಗಿದ್ದು, ಅಧಿಕಾರಿಗಳು ಇದನ್ನು ಪರಿಹರಿಸಬೇಕಾಗಿದೆ ಎಂದು ಟಿಐಒ ವರದಿ ಮಾಡಿದೆ.

ಗಗನಕ್ಕೇರುತ್ತಿರುವ ಇಂಧನ ಬೆಲೆಗಳು, ಕಡಿಮೆ ನಿರ್ವಹಣಾ ವೆಚ್ಚ, ಹೆಚ್ಚಿದ ಅರಿವು ಮತ್ತು ವಿವಿಧ ತಯಾರಕರಿಂದ ಹೆಚ್ಚಿನ ಮಾದರಿಗಳ ಲಭ್ಯತೆ ಇ ವಾಹನ ನೋಂದಣಿಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಇಂಡಿಯಾ, ಎನ್‌ಜಿಒ ನಿರ್ದೇಶಕ (ಎನರ್ಜಿ ಟೆಕ್ನಾಲಜಿ ಮತ್ತು ಗ್ರೀನ್ ಮೊಬಿಲಿಟಿ) ಪವನ್ ಮುಲುಕುಟ್ಲ. "ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಯಾವಾಗಲೂ ಹೊಸ ತಂತ್ರಜ್ಞಾನದ ಆರಂಭಿಕ ಅಳವಡಿಕೆಯ ಪ್ರದೇಶವಾಗಿದೆ.

ಇ ಮೊಬಿಲಿಟಿ ಸಂಸ್ಥೆಗಳ ನೆಲೆ

ಇ ಮೊಬಿಲಿಟಿ ಸಂಸ್ಥೆಗಳ ನೆಲೆ

ವಾಸ್ತವವಾಗಿ ಬೆಂಗಳೂರು ಒಂದು ಸ್ಟಾರ್ಟಪ್ ಹಬ್ ಮತ್ತು ಹಲವಾರು ಉದ್ಯಮಗಳ, ಇ ಮೊಬಿಲಿಟಿ ಸಂಸ್ಥೆಗಳು ನೆಲೆಯಾಗಿದೆ. ಜನರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಪರಿಸರ ಪ್ರಜ್ಞೆ ಹೊಂದಿದ್ದಾರೆ. ಅಲ್ಲದೆ, ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ಈಗ ಪೆಟ್ರೋಲ್ ಚಾಲನೆಯಲ್ಲಿರುವ ಕಡಿಮೆ ದರದಲ್ಲಿ ಲಭ್ಯವಿವೆ. ಅನೇಕ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸಹ ಸ್ಥಾಪಿಸುತ್ತಿವೆ ಎಂದು ತಿಳಿಸಿದರು.

ಎಲ್ಲಾ ಇವಿಗಳಿಗೆ ರಸ್ತೆ ತೆರಿಗೆ

ಎಲ್ಲಾ ಇವಿಗಳಿಗೆ ರಸ್ತೆ ತೆರಿಗೆ

ಸರ್ಕಾರ ಈಗಲಾದರೂ ಆಟೋ ಚಾಲಕರು ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಪ್ರೋತ್ಸಾಹಿಸುವತ್ತ ಗಮನಹರಿಸಬೇಕು. ಮಾರ್ಚ್ 2016ರಲ್ಲಿ ರಾಜ್ಯ ಸರ್ಕಾರವು ಎಲ್ಲಾ ಇವಿಗಳಿಗೆ ರಸ್ತೆ ತೆರಿಗೆಯನ್ನು ಪಾವತಿಸುವುದರಿಂದ ವಿನಾಯಿತಿ ನೀಡಿತು. ಆದರೆ ಅನೇಕ ಇತರ ರಾಜ್ಯಗಳು ರಸ್ತೆ ತೆರಿಗೆ ವಿನಾಯಿತಿ ಜೊತೆಗೆ ಇ ವಾಹನಗಳಿಗೆ ಹಣಕಾಸಿನ ಸಬ್ಸಿಡಿಗಳನ್ನು ನೀಡುತ್ತವೆ. ಕರ್ನಾಟಕ ಸಾರಿಗೆ ಇಲಾಖೆಯು ಈಗ ಬ್ಯಾಟರಿ ಚಾಲಿತ ವಾಹನಗಳಿಗೆ ನೀಡಲಾಗಿದ್ದ 100% ರಸ್ತೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಲು ಚಿಂತನೆ ನಡೆಸುತ್ತಿದೆ. ಅನುಮೋದಿಸಿದರೆ, ಇವಿಗಳು ಇಲ್ಲಿ ದುಬಾರಿಯಾಗುತ್ತವೆ.

ರಸ್ತೆ ತೆರಿಗೆ ವಿನಾಯಿತಿಗೆ ಶೀಘ್ರ ತಡೆ

ರಸ್ತೆ ತೆರಿಗೆ ವಿನಾಯಿತಿಗೆ ಶೀಘ್ರ ತಡೆ

ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವಾಗುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ರಸ್ತೆ ತೆರಿಗೆ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಇವಿಗಳ ಮೇಲೆ ಸಣ್ಣ ಶೇಕಡಾವಾರು ರಸ್ತೆ ತೆರಿಗೆಯನ್ನು ವಿಧಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಹನ ನೋಂದಣಿ ಆದಾಯದಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಂದಣಿ ಪ್ರಮಾಣಪತ್ರದ ವಿತರಣೆ

ನೋಂದಣಿ ಪ್ರಮಾಣಪತ್ರದ ವಿತರಣೆ

ದೇಶಾದ್ಯಂತ ಎಲ್ಲಾ ಇ ವಾಹನಗಳಿಗೆ ಈಗಾಗಲೇ ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಆಗಸ್ಟ್ 2021ರಲ್ಲಿ ಎಲ್ಲಾ ಬ್ಯಾಟರಿ ಚಾಲಿತ ವಾಹನಗಳನ್ನು ನೋಂದಣಿ ಪ್ರಮಾಣಪತ್ರದ ವಿತರಣೆ ಅಥವಾ ನವೀಕರಣದ ಉದ್ದೇಶಕ್ಕಾಗಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಘೋಷಿಸಿತು. 2017 ರಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಪಾಲಿಸಿಯೊಂದಿಗೆ ಬಂದ ಮೊದಲ ರಾಜ್ಯ ಕರ್ನಾಟಕ. ಇ ಹಾವನಗಳ ಮೇಲೆ ತೆರಿಗೆಯನ್ನು ವಿಧಿಸುವ ಕ್ರಮವು ನಿರೀಕ್ಷಿತ ಖರೀದಿದಾರರನ್ನು ನಿರುತ್ಸಾಹಗೊಳಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+