ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ಟಿಂಗ್' ವಿಡಿಯೋ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ಸೂಚನೆ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 11: ಕುಟುಕು ಕಾರ್ಯಾಚರಣೆಯ ವಿಡಿಯೋವನ್ನು ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗಳಿಗೆ ರಾಜ್ಯ ಚುನಾವಣಾ ಆಯೋಗ ಗುರುವಾರ ಸಂಜೆ ಸೂಚನೆ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಜಿ. ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಅಳಿಯನ ಜೊತೆ ಬಿಜೆಪಿ ನಾಯಕ ಶ್ರೀರಾಮುಲು ನಡೆಸುತ್ತಿದ್ದ ಡೀಲ್ ನ ವಿಡಿಯೋ ಇದು ಎನ್ನಲಾಗಿದೆ.

ಅದಾಗಲೇ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿ ಈ ಸ್ಟಿಂಗ್ ವಿಡಿಯೋ ಗುರುವಾರ ಮಧ್ಯಾಹ್ನದಿಂದ ಪ್ರಸಾರವಾಗುತ್ತಿತ್ತು.

ರೆಡ್ಡಿ ಬೇಲ್ ಗಾಗಿ ಡೀಲ್ : ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್ರೆಡ್ಡಿ ಬೇಲ್ ಗಾಗಿ ಡೀಲ್ : ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್

ನಂತರ ಸಂಜೆ ವೇಳೆಗೆ ಈ ವಿಡಿಯೋ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ ನಡೆಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗ ಈ ಸೂಚನೆ ನೀಡಿದೆ.

Electoral authorities ask TV channels not to air sting

ಚುನಾವಣಾ ಆಯೋಗ ಸೂಚನೆ ನೀಡುವ ಹೊತ್ತಿಗೆ ಹಲವು ವಾಹಿನಿಗಳು ಈ ಕುಟುಕು ಕಾರ್ಯಾಚರಣೆಯ ವಿಡಿಯೋವನ್ನು ಪ್ರಸಾರ ಮಾಡುತ್ತಿದ್ದವು. ಮತ್ತು ಕೆಲವು ವಾಹಿನಿಗಳು ಚರ್ಚೆಯನ್ನೂ ನಡೆಸುತ್ತಿದ್ದವು.

ನಂತರ ಆಯೋಗದ ಸೂಚನೆ ಮೇರೆಗೆ ವಾಹಿನಿಗಳು ವಿಡಿಯೋ ಪ್ರಸಾರವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದವು.

ಮತದಾನದ ಮುನ್ನಾ 48 ಗಂಟೆಯಲ್ಲಿ ಏನು ಮಾಡಬಹುದು ಏನು ಮಾಡುವಂತಿಲ್ಲಮತದಾನದ ಮುನ್ನಾ 48 ಗಂಟೆಯಲ್ಲಿ ಏನು ಮಾಡಬಹುದು ಏನು ಮಾಡುವಂತಿಲ್ಲ

ಎಲ್ಲಾ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ಈ ರೀತಿಯ ವಸ್ತುಗಳಿರುವ ಸುದ್ದಿಗಳನ್ನು ಕೊನೆಯ 24 ಗಂಟೆಯಲ್ಲಿ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದಾಗಿ ಚಾನಲ್ ಒಂದರ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

English summary
State electoral authorities today directed TV news channels not to air a "sting" video showing a state BJP leader allegedly trying to bribe a kin of a former Chief Justice of India to get a favourable verdict for mining baron G Janardhana Reddy in an illegal mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X