ಜೆಡಿಎಸ್ ಬಲದಿಂದ ಎನ್ ಸಿಪಿಗೆ ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಜತೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಿರುವ ಜಾತ್ಯಾತೀಯ ಜನತಾ ದಳ(ಜೆಡಿಎಸ್) ಇಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಜತೆ ಮೈತ್ರಿ ಸಾಧಿಸಿದೆ. ಜೆಡಿಎಸ್ ಮೈತ್ರಿ ಮೂಲಕ ಎನ್ ಸಿಪಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಕರ್ನಾಟಕದಲ್ಲಿ ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಇನ್ನೂ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಿದೆ. 2008ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸದ ಎನ್ ಸಿಪಿ, 2013ರಲ್ಲಿ 224 ಸ್ಥಾನಗಳ ಪೈಕಿ 24ಸ್ಥಾನಕ್ಕೆ ಎನ್ ಸಿಪಿ ಸ್ಪರ್ಧಿಸಿತ್ತು. ಆದರೆ, ಬಿಎಸ್ಪಿಯಂತೆ ಎನ್ ಸಿಪಿ ಕೂಡಾ ಕರ್ನಾಟಕದಲ್ಲಿ ಗೆಲುವಿನ ಖಾತೆ ಆರಂಭಿಸುವ ಉತ್ಸಾಹದಲ್ಲಿದೆ.

Elections 2018: Where NCP stands in Karnataka electoral politics

2013ರ ಚುನಾವಣೆಯಲ್ಲಿ 24 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎನ್ ಸಿಪಿ 18,886 ಮತಗಳು ಶೇ 0.06 ಮತಪಾಲು ಗಳಿಸಿತ್ತು.

ಮರಾಠಿ ಮತಗಳೇ ಗುರಿ: ಉತ್ತರ ಕರ್ನಾಟಕದಲ್ಲಿರುವ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಆಘಾತ ನೀಡಲು ಎನ್ ಸಿಪಿ ಜತೆ ಜೆಡಿಎಸ್ ಕೈಜೋಡಿಸಿದೆ. ಮುಖ್ಯವಾಗಿ ಮುಂಬೈ ಕರ್ನಾಟಕ ಭಾಗವನ್ನು ಜೆಡಿಎಸ್ ಗುರಿಯನ್ನಾಗಿಸಿಕೊಂಡಿದೆ.

2013ರಲ್ಲಿ ಅಥಣಿ, ಕಾಗವಾಡ, ಸವದತ್ತಿ, ರಾಮದುರ್ಗ, ಸಿಂಧಗಿ, ಆಳಂದ, ಬೀದರ್, ಔರದ್, ಕೊಪ್ಪಳ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ- ಧಾರವಾಡ ಪಶ್ಚಿಮ, ಶಿಂಗ್ಗಾವಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಯಕೊಂಡ, ಚಿಕ್ಕಮಗಳೂರು, ಪಾವಗಡ, ಮಂಗಳೂರು, ರಾಜಾಜಿನಗರ, ಸರ್ವಜ್ಞನಗರ, ಹರಿಹರ, ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು.

ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಈ ಬಾರಿ ದಲಿತರ ಮತಗೆಲ್ಲಲು ಬಿಎಸ್ ಪಿ ಹಾಗೂ ಎನ್ ಸಿಪಿ ಜತೆ ಕೈಜೋಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The NCP barely has a presence in the Karnataka electoral political scenario. While the party did not contest in the 2008 assembly polls, it contested 24 seats out of 224 in 2013 assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ