ಟಿಕೆಟ್ ಗಾಗಿ ಹಾತೊರೆಯುತ್ತಿರುವ ಎಂಎಲ್ಸಿ, ಸಂಸದರು

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವೈವಿಧ್ಯಮಯ ಅಭ್ಯರ್ಥಿಗಳನ್ನು ಕಣದಲ್ಲಿ ಕಾಣುವ ಸಾಧ್ಯತೆ ಹೆಚ್ಚಾಗುತ್ತಿದೆ. ಹಾಲಿ ಶಾಸಕರ ಜತೆಗೆ ಕಾರ್ಪೊರೇಟರ್ ಗಳು, ಎಂಎಲ್ಸಿಗಳು, ಸಂಸದರು ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಸಂಸದರ ಪೈಕಿ ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಪಟ್ಟಿಯಲ್ಲಿ ಮೊದಲಿಗೆ ಬರುತ್ತದೆ. ಬಿಎಸ್ವೈ ಬೆನ್ನಲ್ಲೇ ಬಳ್ಳಾರಿಯ ಸಂಸದ ಬಿ. ಶ್ರೀರಾಮುಲು ಹಾಗೂ ಕಡೂರು-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಅಸೆಂಬ್ಲಿ ಕಣಕ್ಕೆ ಇಳಿಯುವ ಉತ್ಸಾಹ ತೋರಿದ್ದಾರೆ.

ಚಿತ್ರಗಳು : ಬಿಜೆಪಿ ಚುನಾವಣಾ ಪ್ರಚಾರದ ಅಬ್ಬರ

ಕೊಡಗು-ಚಿಕ್ಕಮಗಳೂರು ಸಂಸದ ಪ್ರತಾಪ್ ಸಿಂಹ ಅವರು ಅಸೆಂಬ್ಲಿ ಪ್ರವೇಶಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ತೀವ್ರ ಒತ್ತಾಯವಾಗಿದೆ. ಆದರೆ, ಈ ಬಗ್ಗೆ ಪ್ರತಾಪ್ ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ವಿಧಾನಸಭೆ ಟಿಕೆಟ್ ಬಯಸಿರುವ ಪರಿಷತ್ ಸದಸ್ಯರ ಪಟ್ಟಿ!

ಎಂಎಲ್ಸಿಗಳು: ಬಿಜೆಪಿ ಎಂಎಲ್ಸಿ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಅಸೆಂಬ್ಲಿಗೆ ಪ್ರವೇಶ ಬಯಸಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ಅವರು ಈ ಬಾರಿ ಗೋವಿಂದರಾಜನಗರ ಬದಲಿಗೆ ಚಾಮರಾಜನಗರದ ಹನೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ಚಿಕ್ಕೋಡಿಯ ಸಂಸದ ಪ್ರಕಾಶ್ ಹುಕ್ಕೇರಿ

ಚಿಕ್ಕೋಡಿಯ ಸಂಸದ ಪ್ರಕಾಶ್ ಹುಕ್ಕೇರಿ

ಕಾಂಗ್ರೆಸ್ ಪೈಕಿ ಚಿಕ್ಕೋಡಿಯ ಸಂಸದ ಪ್ರಕಾಶ್ ಹುಕ್ಕೇರಿ ಅವರು ತಮ್ಮ ಪುತ್ರ ಗಣೇಶ್ ಅವರನ್ನು 2019ರ ಲೋಕಸಭೆಗೆ ಕಳಿಸಲು ತಯಾರಿ ನಡೆಸಿದ್ದಾರೆ. ಹೀಗಾಗಿ, ತಾವು ಇದೇ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಹೈಕಮಾಂಡ್ ಆಗಲಿ ಗ್ರೀನ್ ಸಿಗ್ನಲ್ ನೀಡಿದಂತೆ ಕಾಣುವುದಿಲ್ಲ.

ಅಸೆಂಬ್ಲಿ ಸೇರಲು ಹಾತೊರೆಯುತ್ತಿರುವ ಮೋಟಮ್ಮ

ಅಸೆಂಬ್ಲಿ ಸೇರಲು ಹಾತೊರೆಯುತ್ತಿರುವ ಮೋಟಮ್ಮ

ಉಳಿದಂತೆ, ಮೋಟಮ್ಮ(ಮೂಡಿಗೆರೆ), ಸಚಿವ ಎಂ.ಆರ್ ಸೀತಾರಾಮ್(ಮಲ್ಲೇಶ್ವರ), ಜಿ ರಘು ಆಚಾರ್ (ಚಿತ್ರದುರ್ಗ) ಅಲ್ಲದೆ ವಿ. ಎಸ್ ಉಗ್ರಪ್ಪ, ರಿಜ್ವಾನ್ ಅರ್ಷದ್ ಹಾಗೂ ಆರ್ ಬಿ ತಿಮ್ಮಾಪುರ್ ಪಟ್ಟಿಯಲ್ಲಿದ್ದಾರೆ. ಮೋಟಮ್ಮ ಅವರು ಸಿದ್ದರಾಮಯ್ಯ ಸಚಿವ ಸಂಪುಟ ಸೇರಲು ಹಾತೊರೆಯುತ್ತಿದ್ದರು. ಆದರೆ, ಅದೃಷ್ಟ ಕೈಗೂಡಲಿಲ್ಲ. ಈಗ

ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳು

ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳು

ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳ ಪೈಕಿ ಎಂಎಲ್ಸಿ ಬೈರತಿ ಸುರೇಶ್ ಹಾಗೂ ಸಾರಿಗೆ ಸಚಿವ ಎಚ್ಎಂ ರೇವಣ್ಣ ನಡುವೆ ಪೈಪೋಟಿ ಏರ್ಪಟ್ಟಿದೆ. 2008ರಲ್ಲಿ ಈ ಕ್ಷೇತ್ರದಿಂದ ಸೋಲು ಕಂಡಿರುವ ರೇವಣ್ಣ ಅವರಿಗೆ ಇಲ್ಲಿ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದೆ. ಬೈರತಿ ಸುರೇಶ್ ಅವರಿಗೆ ಇಲ್ಲಿ ಟಿಕೆಟ್ ನೀಡಲಾಗುತ್ತಿದ್ದು, ಮಹಾಲಕ್ಷ್ಮಿ ಲೇಔಟಿನಿಂದ ಸ್ಪರ್ಧಿಸಲಿದ್ದಾರೆ.

ರಿಜ್ವಾನ್ ಅರ್ಷದ್

ರಿಜ್ವಾನ್ ಅರ್ಷದ್

2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸುಲಭವಾಗಿ ಸಿಗುವ ಸಾಧ್ಯತೆಯಿದೆ. 2014ರಲ್ಲಿ ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ, ಪಕ್ಷ ಬಯಸಿದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲಾಬಲ

ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲಾಬಲ

ಕರ್ನಾಟಕ ವಿಧಾನಪರಿಷತ್ತಿನಲ್ಲಿ 75 ಸ್ಥಾನಗಳಿದ್ದು, ಈ ಪೈಕಿ 34 ಸ್ಥಾನಗಳನ್ನು ಆಡಳಿತಾರೂಢ ಕಾಂಗ್ರೆಸ್ ಹೊಂದಿದೆ. 34 ಜನ ಶಾಸಕರ ಪೈಕಿ ಅರ್ಧದಷ್ಟು ಮಂದಿ ಅಸೆಂಬ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಟಿಕೆಟ್ ಸಿಕ್ಕರೆ ಮೇಲ್ಮನೆಯಲ್ಲಿ ಕಾಂಗ್ರೆಸ್ ನ ಬಲ ತಗ್ಗಲಿದೆ. ಈ ಬಗ್ಗೆ ಯೋಚಿಸಿ, ಎಚ್ಚರಿಕೆಯ ನಡೆಯನ್ನು ಇಡಲು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018: MPs, MLCs from all parties especially from BJP are aspiring to enter Assembly poll fray

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ