ಚುನಾವಣಾ ಕಾಲದಲ್ಲಿ ವಲಸೆ ಬಂದವರು ಇವರು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 04: ಕಾಂಗ್ರೆಸ್ಸಿನ ಮಾಜಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್ಎಂ ಕೃಷ್ಣರಿಂದ ಮೊದಲುಗೊಂಡು ಮಲ್ಲಿಕಾರ್ಜುನ ಖೂಬಾ ತನಕ ಚುನಾವಣಾ ಕಾಲದಲ್ಲಿ ವಲಸೆ ಸರ್ವೇಸಾಮಾನ್ಯ.

ರಾಜಕಾರಣಿಗಳ ವಲಸೆಗೆ ಕಾರಣಗಳು ಅನೇಕ. ಮೂಲ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ, ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುತ್ತಿಲ್ಲ ಹೀಗೆ ಕಾರಣಗಳಿರುತ್ತವೆ. ಕೆಲವೊಮ್ಮೆ ಹಿರಿಯ ಮುಖಂಡರ ಜತೆ ಕಿತ್ತಾಟವೂ ವಲಸೆಗೆ ಕಾರಣವಾಗಬಹುದು.

ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ತೊರೆದು, ಬಿಜೆಪಿಗೆ ಬಂದ ಬೆನ್ನಲ್ಲೇ ಅಫಜಲ್​ಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ವೈ. ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಮಾಲೀಕಯ್ಯ ಆಗಮನದಿಂದ ಬೇಸರವಾಗಿಲ್ಲ, ಟಿಕೆಟ್ ಮಾತ್ರ ತಮಗೇ ಬೇಕೆಂದು ಪಟ್ಟುಹಿಡಿದಿದ್ದಾರೆ. ವಲಸಿಗರಿಗೆ ಟಿಕೆಟ್ ಖಾತ್ರಿ ಎಂದು ಬಿಜೆಪಿ ಹೇಳಿದೆ. ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮೂಲಕ ಎಂ.ವೈ.ಪಾಟೀಲರನ್ನು ಕಾಂಗ್ರೆಸ್​ಗೆ ಸೆಳೆಯುವ ಪ್ರಯತ್ನ ನಡೆದಿರುವ ಮಾಹಿತಿಯಿದೆ.

ವಲಸಿಗರ ಲಾಭ : 5 ವರ್ಷಗಳ ಆಡಳಿತಾವಧಿಯಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಳ್ಳಾರಿ ಗ್ರಾಮೀಣ, ನಂಜನಗೂಡು, ಗುಂಡ್ಲುಪೇಟೆ, ಚಿಕ್ಕೋಡಿ-ಸದಲಗಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಅಭಿವೃದ್ಧಿ ಯೋಜನೆಗಳಿಗೆ ಸಂದ ಫಲವೇ ಆಗಿದೆ ಎಂದು ಕಾಂಗ್ರೆಸ್ ತನ್ನ ಸಾಧನೆಗಳನ್ನು ಎಲ್ಲೆಡೆ ಸಾರುತ್ತಿದೆ.

ಬಸವಕಲ್ಯಾಣದ ಮಲ್ಲಿಕಾರ್ಜುನ ಖೂಬಾ

ಬಸವಕಲ್ಯಾಣದ ಮಲ್ಲಿಕಾರ್ಜುನ ಖೂಬಾ

ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆಗಮನದಿಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಗರಮ್ ಆಗಿದ್ದಾರೆ, ಪ್ರತಿಭಟನೆಯ ಸ್ವಾಗತ ನೀಡಿದ್ದಾರೆ. ರವೀಂದ್ರ ಕೊಳಕೋಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಖೂಬಾಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಐದನೇ ಸ್ಥಾನ ಗಳಿಸಿದ್ದರು. ಆದರೆ, ಮೂರು ಹಾಗೂ ನಾಲ್ಕನೇ ಸ್ಥಾನ ಬಿಎಸ್ ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಪಾಲಾಗಿತ್ತು. ಹೀಗಾಗಿ ಈ ಬಾರಿ ಬಿಜೆಪಿಗೆ ವಲಸಿಗರು ಬೇಡ ಎಂದು ಆಗ್ರಹಿಸಲಾಗಿದೆ.

ಹರತಾಳು ಹಾಲಪ್ಪಗೆ ಟಿಕೆಟ್ ಕಷ್ಟ

ಹರತಾಳು ಹಾಲಪ್ಪಗೆ ಟಿಕೆಟ್ ಕಷ್ಟ

ಶಿವಮೊಗ್ಗದ ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲೃಷ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಖಚಿತವಾಗುತ್ತಿದೆ. ಅತ್ಯಾಚಾರದ ಆರೋಪ ಹೊತ್ತಿದ್ದು ಹರತಾಳು ಹಾಲಪ್ಪ ಅವರಿಗೆ ಮುಳುವಾಗುತ್ತಿದೆ. ಕಾಂಗ್ರೆಸ್ ಸೇರುವ ಸಾಧ್ಯತೆ ಹೊರಹಾಕಿದ್ದರು. ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಎಂದಿರುವ ಸಿದ್ದರಾಮಯ್ಯ, ಆದರ ಬೆನ್ನಲ್ಲೇ ಕೋರ್ಟಿನಲ್ಲಿ ಹಾಲಪ್ಪ ಮೇಲಿನ ಕೇಸುಗಳ ಸ್ಥಿತಿಗತಿ ಪರಿಶೀಲಿಸಲು ಸೂಚಿಸಿದ್ದಾರೆ. ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿರುವ ಹಾಲಪ್ಪ ಅವರಿಗೆ ಟಿಕೆಟ್ ಸಿಗುವುದೇ ಖಾತ್ರಿಯಿಲ್ಲ.

ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬಂದವರು

ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬಂದವರು

* ಹುಣಸೂರು: ಸಿ.ಎಚ್.ವಿಜಯಶಂಕರ್
* ವಿಜಯನಗರ : ಆನಂದ್ ಸಿಂಗ್
* ಕೂಡ್ಲಿಗಿ: ನಾಗೇಂದ್ರ

***
ಕರ್ನಾಟಕ ಜನತಾ ಪಕ್ಷ (ಕೆಜೆಪಿ)
* ಆಳಂದ ಕ್ಷೇತ್ರ - ಬಿ.ಆರ್.ಪಾಟೀಲ್
***ಕನ್ನಡ ಮಕ್ಕಳ ಪಕ್ಷ(ಕೆಎಂಪಿ)
* ಬೀದರ್ ದಕ್ಷಿಣ - ಅಶೋಕ್ ಖೇಣಿ

ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಬಂದವರು

ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಬಂದವರು

* ಕೊಡಗು-ಎಂ.ಸಿ.ನಾಣಯ್ಯ
* ನಂಜನಗೂಡು-ಕಳಲೆ ಕೃಷ್ಣಮೂರ್ತಿ
* ಗಂಗಾವತಿ-ಇಕ್ಬಾಲ್ ಅನ್ಸಾರಿ
* ಚಾಮರಾಜಪೇಟೆ -ಜಮೀರ್ ಅಹಮದ್ ಖಾನ್
* ಪುಲಿಕೇಶಿನಗರ- ಅಖಂಡ ಶ್ರೀನಿವಾಸ ಮೂರ್ತಿ
* ಮಾಗಡಿ - ಎಚ್.ಸಿ. ಬಾಲಕೃಷ್ಣ
* ನಾಗಮಂಗಲ -ಚೆಲುವರಾಯಸ್ವಾಮಿ
* ಶ್ರೀರಂಗಪಟ್ಟಣ-ರಮೇಶ್ ಬಂಡಿಸಿದ್ದೇಗೌಡ
* ಹಗರಿಬೊಮ್ಮನಹಳ್ಳಿ-ಭೀಮಾ ನಾಯ್ಕ
* ಲಿಂಗಸಗೂರು-ಮಾನಪ್ಪ ವಜ್ಜಲ್
* ರಾಯಚೂರು ನಗರ - ಡಾ.ಶಿವರಾಜ್ ಪಾಟೀಲ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018: Many politicians migrating from one party from one party to another. Here are the list of Netas who recently flipped the parties and joined Indian National Congress, BJP. List includes Kudligi Nagendra, Anand Singh and So on.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ