ಜೆಡಿಯುನ 15 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Posted By: ಜಿಎಂ ರೋಹಿಣಿ, ಬಳ್ಳಾರಿ
Subscribe to Oneindia Kannada

ಬಳ್ಳಾರಿ, ಏಪ್ರಿಲ್. 16 : ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯುನ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟ ಮಾಡಿದೆ. ಎರಡನೇ ಪಟ್ಟಿ ಏಪ್ರಿಲ್ 22 ರಂದು ಬಿಡುಗಡೆ ಆಗಲಿದೆ.

ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಅವರು ಪಟ್ಟಿಯನ್ನು ಪ್ರಕಟಿಸಿದ್ದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಟಪಾಲ್ ಗಣೇಶ್, ಕೂಡ್ಲಿಗಿ ಎಸ್ಟಿ ವಿಧಾನಸಭಾ ಕ್ಷೇತ್ರದಿಂದ ಜಿ. ಈಶಪ್ಪ ಸ್ಪರ್ಧಿಸುತ್ತಿದ್ದಾರೆ.

ಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನ

ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ನೇತೃತ್ವದ ಜೆಡಿಯು ನೇತೃತ್ವದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮಾಜಮುಖಿ ಚಿಂತನೆ ಉಳ್ಳವರಾಗಿದ್ದಾರೆ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವ ದೂರದೃಷ್ಟಿ ಉಳ್ಳವರು ಆಗಿದ್ದು, ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಬಿಹಾರದಂತೆ ಕರ್ನಾಟಕದಲ್ಲೂ ಜೆ.ಡಿ.ಯು ವಿಭಜನೆ

ನಮ್ಮ ಪಕ್ಷದ ತತ್ವ, ಸಿದ್ಧಾಂತ ಮತ್ತು ನೀತಿಗಳನ್ನು ಮೆಚ್ಚಿಕೊಂಡಿರುವ ವಿವಿಧ ಪಕ್ಷಗಳ ಮುಖಂಡರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಮಹಿಮಾ ಜೆ. ಪಟೇಲ್ ತಿಳಿಸಿದ್ದಾರೆ.

Elections 2018: Janata Dal (United) announces first list of 15 candidates
 • ಅರುಣಕುಮಾರ ಸಿ.ಪಾಟೀಲ- ಆಳಂದ,
 • ಹಜರತ್ ಅಲಿ ಶೇಖ್- ಕುಂದಗೋಳ,
 • ಟಪಾಲ್ ಗಣೇಶ್- ಬಳ್ಳಾರಿ ನಗರ,
 • ಜಿ.ಎನ್.ತೋಟದ್- ನವಲಗುಂದ,
 • ಡಿ.ಕೆ.ಹಿತ್ತಲಮನಿ- ರಾಣೆಬೆನ್ನೂರು,
 • ವಿಜಯೇಂದ್ರ ರೆಡ್ಡಿ- ಚಿಕ್ಕನಾಯಕನಹಳ್ಳಿ,
 • ಬಿ.ರಾಮಯ್ಯ- ನೆಲಮಂಗಲ,
 • ರಾಜು ನಾಯಕ ವಾಡಿ- ಹುಬ್ಬಳ್ಳಿ ಸೆಂಟ್ರಲ್,
 • ರಾಜೀವ್ ಕೋಟ್ಯಾನ್-ಕುಂದಾಪುರ
 • ಪುರುಷೋತ್ತಮ ಎಸ್- ದೊಡ್ಡಬಳ್ಳಾಪುರ,
 • ದೊಡ್ಡಪ್ಪ ಮಾಲಿ.ಪಾಟೀಲ್- ಗುರುಮಿಠಕಲ್
 • ಎಸ್.ಎಸ್.ರಡ್ಡೇರ- ಗದಗ,
 • ಎಚ್.ರಾಮಚಂದ್ರಪ್ಪ- ಹೊಳಲ್ಕೆರೆ
 • ಜಿ.ಈಶಪ್ಪ-ಕೂಡ್ಲಗಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018: Janata Dal (United) today(April 16) announced first list of 15 candidates. Mahima Patel to contest from Channagiri and Tapal Ganesh to contest from Ballari City.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ