ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 09: ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ ಈಗ ಅಭ್ಯರ್ಥಿಗಳ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ನಾಲ್ಕು ತಿಂಗಳ ಬಳಿಕ, ಕೆಪಿಸಿಸಿ ಬಳಿ ಈಗ 1,004 ಅರ್ಜಿಗಳು ಬಂದಿದೆ

ಕಳೆದ ನಾಲ್ಕೈದು ತಿಂಗಳಿನಿಂದ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿರುವ ಕಾಂಗ್ರೆಸ್ ಪಕ್ಷ ಕೊನೆಗೂ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಪಡಿಸಿರುವ ಸುದ್ದಿ ಬಂದಿದೆ. ಬಹುತೇಕ 123 ಕಾಂಗ್ರೆಸ್ ಶಾಸಕರು ಮತ್ತೊಮ್ಮೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ.

ವಿಧಾನಸಭೆ ಚುನಾವಣೆ : ಕಾಂಗ್ರೆಸ್‌ನ 80 ಅಭ್ಯರ್ಥಿಗಳ ಪಟ್ಟಿ!ವಿಧಾನಸಭೆ ಚುನಾವಣೆ : ಕಾಂಗ್ರೆಸ್‌ನ 80 ಅಭ್ಯರ್ಥಿಗಳ ಪಟ್ಟಿ!

ಆದರೆ, ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಹಾಗೂ ತಂಡ ನಡೆಸಿರುವ ಮೌಖಿಕ ಪರೀಕ್ಷೆಯಲ್ಲಿ ಅನೇಕ ಶಾಸಕರು ನಪಾಸಾಗುತ್ತಿರುವುದು ಆಭ್ಯರ್ಥಿಗಳ ಆಯ್ಕೆ ಗೊಂದಲವನ್ನು ಇನ್ನಷ್ಟು ಜಟಿಲಗೊಳಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದಲ್ಲದೆ, ಈ ಹಿಂದೆ ಪ್ರಕಟಿಸಿದಂತೆ ಕೆಪಿಸಿಸಿ ಸಾವಿರಾರು ಅಭ್ಯರ್ಥಿಗಳ ಅರ್ಜಿಯನ್ನು ಇಟ್ಟುಕೊಂಡು ಪರಿಶೀಲನೆ ನಡೆಸುತ್ತಿದೆ. ಈ ನಡುವೆ ಲಭ್ಯ ಮಾಹಿತಿಯಂತೆ ಸಂಭಾವ್ಯ ಪಟ್ಟಿಯಲ್ಲಿರಬಹುದಾದ ಅಭ್ಯರ್ಥಿಗಳ ಪಟ್ಟಿ ಇಂತಿದೆ.

Elections 2018: Congress probable candidates 123 list

ಸೂಚನೆ: 2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಇನ್ನೂ ಅಂತಿಮಗೊಳಿಸಿಲ್ಲ. ಇಲ್ಲಿ ಪ್ರಕಟಿಸಿರುವುದು ಸಂಭಾವ್ಯ ಪಟ್ಟಿ ಮಾತ್ರ. ಸದ್ಯ ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಯುಗಾದಿ ಕಳೆದ ಬಳಿಕದ ಮಿಕ್ಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ ತಿಂಗಳ ನಂತರ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

ಜೆಡಿಎಸ್ ಮೊದಲ ಪಟ್ಟಿ : ರೆಬಲ್ ಶಾಸಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ!ಜೆಡಿಎಸ್ ಮೊದಲ ಪಟ್ಟಿ : ರೆಬಲ್ ಶಾಸಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ!

ಲೆಕ್ಕಾಚಾರ ಹೇಗಿದೆ?: 123 ಹಾಲಿ ಶಾಸಕರಿದ್ದಾರೆ ಅವರ ಕಾರ್ಯಕ್ಷಮತೆ, ಅವರ ಮೌಲ್ಯಮಾಪನ ಮಾಡಿ, ಟಿಕೆಟ್ ನೀಡಲಾಗುತ್ತದೆ. 123 ಹಾಲಿ ಶಾಸಕರು ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ.

2013 ರಲ್ಲಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಇವರು:

ಕ್ರಮ ಸಂಖ್ಯೆ ಕ್ಷೇತ್ರ ಗೆದ್ದವರು
1 ಚಿಕ್ಕೋಡಿ ಪ್ರಕಾಶ್ ಬಾಬಣ್ಣ ಹುಕ್ಕೇರಿ
2 ಗೋಕಾಕ್ ರಮೇಶ್ ಜಾರಕಿಹೊಳಿ
3 ಯಮಕನಮರಡಿ ಸತೀಶ್ ಜಾರಕಿಹೊಳಿ
4 ಬೆಳಗಾವಿ ಉತ್ತರ ಫಿರೋಜ್ ನೂರುದ್ದಿನ್ ಸೇಠ್
5 ಕಿತ್ತೂರು ಡಿಬಿ ಇನಾಂದಾರ
6 ರಾಮದುರ್ಗ ಅಶೋಕ್ ಮಹದೇವಪ್ಪ ಪಟ್ಟಣ
7
ತೇರದಾಳ ಉಮಾಶ್ರೀ
8 ಜಮಖಂಡಿ ಸಿದ್ದು ಬಿ. ನ್ಯಾಮಗೌಡ
9 ಬೀಳಗಿ ಜೆ.ಟಿ. ಪಾಟೀಲ
10 ಬದಾಮಿ ಚಿಮ್ಮನಕಟ್ಟಿ ಬಾಲಪ್ಪ ಭೀಮಪ್ಪ
11 ಬಾಗಲಕೋಟೆ ಎಚ್. ವೈ ಮೇಟಿ
12 ಹುನಗುಂದ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ
13 ಮುದ್ದೇಬಿಹಾಳ ಅಪ್ಪಾಜಿ ಉರ್ಫ್ ಚನ್ನಬಸವರಾಜ ಶಂಕರರಾವ ನಾಡಗೌಡ
14 ದೇವರ ಹಿಪ್ಪರಿಗಿ ಅಮೀನಪ್ಪಗೌಡ ಸಂಗನಗೌಡ ಪಾಟೀಲ
15 ಬಸವನ ಬಾಗೇವಾಡಿ ಶಿವಾನಂದ ಎಸ್. ಪಾಟೀಲ
16 ಬಬಲೇಶ್ವರ ಎಂ.ಬಿ. ಪಾಟೀಲ
17 ವಿಜಾಪುರ ನಗರ ಮಕ್ಬುಲ್ ಎಸ್. ಭಗವಾನ್
18 ನಾಗಠಾಣ ರಾಜು ಅಲಗೂರ್
19 ಇಂಡಿ ಯಶವಂತರಾಯಗೌಡ ವಿಟ್ಠಲಗೌಡ ಪಾಟೀಲ
20 ಅಫಜಲಪುರ ಮಾಲಿಕಯ್ಯ ವೆಂಕಯ್ಯ ಗುತ್ತೇದಾರ
21 ಜೇವರ್ಗಿ ಅಜಯ್ ಧರ್ಮಸಿಂಗ್
22 ಶೋರಾಪುರ ರಾಜ ವೆಂಕಟಪ್ಪ ನಾಯಕ
23 ಯಾದಗಿರಿ ಡಾ. ಎ.ಬಿ. ಮಾಲಕರೆಡ್ಡಿ
24 ಗುರುಮಠಕಲ್ ಬಾಬುರಾವ್ ಚಿಂಚಸನೂರ
25 ಚಿತ್ತಾಪುರ ಪ್ರಿಯಾಂಕ ಎಂ. ಖರ್ಗೆ
26 ಸೇಡಂ ಡಾ. ಶರಣಪ್ರಕಾಶ ಪಾಟೀಲ
27 ಚಿಂಚೋಳಿ ಉಮೇಶ ಜಿ. ಜಾದವ
28 ಕಲಬುರಗಿ ಗ್ರಾಮೀಣ ಜಿ.ರಾಮಕೃಷ್ಣ
29 ಕಲಬುರಗಿ ಉತ್ತರ -ನಿರ್ಧಾರವಾಗಿಲ್ಲ
30
ಹುಮ್ನಾಬಾದ್ ರಾಜಶೇಖರ ಬಸವರಾಜ ಪಾಟೀಲ
31
ಭಾಲ್ಕಿ ಈಶ್ವರ ಖಂಡ್ರೆ
32
ಮಾನ್ವಿ ಜಿ. ಹಂಪಯ್ಯ ಸಾಹುಕಾರ ಬಲ್ಲಟಿಗಿ
33
ದೇವದುರ್ಗ ಎ. ವೆಂಕಟೇಶ ನಾಯಕ
34
ಸಿಂದನೂರು ಬಾದರ್ಲಿ ಹಂಪನಗೌಡ
35
ಮಸ್ಕಿ ಪ್ರತಾಪಗೌಡ ಪಾಟೀಲ
36
ಕನಕಗಿರಿ ಶಿವರಾಜ ಸಂಗಪ್ಪ ತಂಗಡಿಗಿ
37
ಯಲಬುರ್ಗ ಬಸವರಾಜ ರಾಯರೆಡ್ಡಿ
38
ಕೊಪ್ಪಳ ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ
39
ಶಿರಹಟ್ಟಿ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ
40 ಗದಗ ಹೆಚ್. ಕೆ ಪಾಟೀಲ
English summary
Congress has decided to delay the announcement of the names of its candidates till the end of April. But, it is confirmed that 123 sitting MLAs likely to get ticket. Here are the list of Probable confirmed list of candidates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X