ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗದಲ್ಲಿ ಕಣದಲ್ಲಿದ್ದಾರೆ ವಿವಿಧ ಪಕ್ಷಗಳ 14 ಅಭ್ಯರ್ಥಿಗಳು

By ಸಾಗರ್ ದೇಸಾಯಿ, ಯಾದಗಿರಿ
|
Google Oneindia Kannada News

ಗುಲ್ಬರ್ಗ, ಮಾ.28 : ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಅಂತ್ಯಗೊಂಡಿದ್ದು, 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ್ ಹೇಳಿದ್ದಾರೆ. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ನಂತರ ಕನದಲ್ಲಿ ಉಳಿಯುವ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟಚಿತ್ರಣ ಲಭ್ಯವಾಗಲಿದೆ.

ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ್, ಗುಲ್ಬರ್ಗ ಪ.ಜಾ ಮೀಸಲು ಕ್ಷೇತ್ರದಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ತಿಳಿಸಿದರು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಗೋಪಿ, ಸೈಯದ್ ಸೋಫಿ, ಕುಪಾವತ್ ವೆಂಕಟೇಶ್ವರ ರಾವ್ ಅವರ ನಾಮಪತ್ರಗಳು ಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು. [553 ಅಭ್ಯರ್ಥಿಳು ಕಣದಲ್ಲಿದ್ದಾರೆ]

Gulbarga

ಮಾರ್ಚ್ 29ರ ಶನಿವಾರ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಶನಿವಾರ ಸಂಜೆಯ ವೇಳೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಕುರಿತು ಅಂತಿಮ ಚಿತ್ರಣ ಲಭ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಜಿಲ್ಲೆಯಲ್ಲಿ ಇದುವರೆಗೂ 57 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. [ಮೋದಿ ಮಾತನ್ನ ಕನ್ನಡದಲ್ಲಿ ಕೇಳಿರಿ]

ಕಣದಲ್ಲಿರುವ ಅಭ್ಯರ್ಥಿಗಳು : ಡಿಜಿ ಸಾಗರ (ಜೆಡಿಎಸ್), ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್), ಧನ್ನಿ ಮಹಾದೇವ ಬಿ. (ಬಿಎಸ್ಪಿ), ರೇವು ನಾಯಕ್ ಬೆಳಮಗಿ (ಬಿಜೆಪಿ), ತಿಪ್ಪಣ್ಣ ಒಡೆಯರಾಜ (ಜೆಡಿಯು), ಬಿಟಿ ಲಲಿತಾ ನಾಯಕ್ (ಆಮ್ ಆದ್ಮಿ ಪಕ್ಷ), ಎಸ್.ಎಂ.ಶರ್ಮಾ (ಸೋಷಿಯಲ್ ಯೂನಿಟಿ ಸೆಂಟರ್ ಆಫ್ ಇಂಡಿಯಾ), ಶಂಕರ ಜಾಧವ (ಭಾರತೀಯ ಪೀಪಲ್ಸ್ ಪಾರ್ಟಿ), ಗುರುಶಾಂತ ಪಟ್ಟೇದಾರ (ಪಕ್ಷೇತರ), ನರೇಶಕುಮಾರ ಕೋಲಿ (ಪಕ್ಷೇತರ), ಬಾಬುರಾವ (ಪಕ್ಷೇತರ), ರಮೇಶ್ (ಪಕ್ಷೇತರ), ರಾಮು (ಪಕ್ಷೇತರ), ಸೀತಾರಾಮ (ಪಕ್ಷೇತರ).

ಚುನಾವಣಾ ಅಕ್ರಮಗಳು : ಗುಲ್ಬರ್ಗ ಜಿಲ್ಲೆಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ನೀತಿ ಸಂಹಿತೆ ಉಲ್ಲಂಘಿಷಿದ ಒಟ್ಟು 57 ಪ್ರಕರಣಗಳಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು. ಇದುವರೆಗೂ ಒಟ್ಟು 725.85 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 3.60 ಕೆಜಿ ಗಾಂಜಾ, ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Elections 2014 : As many as 14 candidates of various political parties and independents are contesting from Gulbarga Lok Sabha constituency and Saturday, March 29 is the last date for withdrawal the nominations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X