ಕರ್ನಾಟಕದ 11 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ

ಬೆಂಗಳೂರು, ಮೇ. 20: ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿಯು ಮುಂದಿನ ತಿಂಗಳು ಮುಗಿಯಲಿದೆ. ಇದರ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಮುಂದಿನ ತಿಂಗಳ ಜೂನ್ 13 ರಂದು ಚುಣಾವಣೆ ನಡೆಯಲಿದೆ.

17.06.2024 ರಂದು ನಿವೃತ್ತರಾಗುವ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ವಿಧಾನಸಭೆಯ ಸದಸ್ಯರು (ಎಂಎಲ್‌ಎ) ಆಯ್ಕೆ ಮಾಡುವ ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲಾಗುತ್ತಿದೆ. ಈ ಕೆಳಗಿನ ವಿವರಗಳ ಪ್ರಕಾರ ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರದ ಅವಧಿಯು 17.06.2024 ರಂದು ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

Election Commission Announces Karnataka Legislative Council Election for 11 Seats

ನಿವೃತ್ತಿಯಾಗಲಿರುವ ಕರ್ನಾಟಕ ವಿಧಾನ ಪರಿಷತ್ ಸದಸ್ಯರು

1. ಅರವಿಂದ್ ಕುಮಾರ್ ಅರಳಿ

2. ಎನ್.ಎಸ್. ಬೋಸರಾಜು

3. ಕೆ. ಗೋವಿಂದರಾಜ್

4. ಡಾ. ತೇಜಸ್ವಿನಿ ಗೌಡ

5. ಮುನಿರಾಜು ಗೌಡ ಪಿ.ಎಂ.

6. ಕೆ.ಪಿ. ನಂಜುಂಡಿ ವಿಶ್ವಕರ್ಮ

7. ಬಿ.ಎಂ. ಫಾರೂಕ್

8. ರಘುನಾಥ ರಾವ್ ಮಲ್ಕಾಪುರೆ

9. ಎನ್. ರವಿ ಕುಮಾರ್

10. ಎಸ್. ರುದ್ರೇಗೌಡ

11. ಕೆ ಹರೀಶ್ ಕುಮಾರ್

ಕರ್ನಾಟಕ ವಿಧಾನ ಪರಿಷತ್ ಚುನಾವಣೆ

1. ಅಧಿಸೂಚನೆ ಹೊರಡಿಸುವ ದಿನಾಂಕ: 27ನೇ ಮೇ, 2024 (ಸೋಮವಾರ)

2. ನಾಮಪತ್ರ ಸಲ್ಲಿಕೆ ಮಾಡುವ ಕೊನೆಯ ದಿನಾಂಕ: ಜೂನ್ 03, 2024 (ಸೋಮವಾರ)

3. ನಾಮಪತ್ರಗಳ ಪರಿಶೀಲನೆ: ಜೂನ್ 04, 2024 (ಮಂಗಳವಾರ)

4. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ: ಜೂನ್ 06, 2024 (ಗುರುವಾರ)

5. ಮತದಾನದ ದಿನಾಂಕ: 13ನೇ ಜೂನ್, 2024 (ಗುರುವಾರ)

6. ಮತದಾನದ ಸಮಯ- ಬೆಳಗ್ಗೆ 09:00 ರಿಂದ ಸಂಜೆ 04:00

7. ಮತಗಳ ಎಣಿಕೆ ನಡೆಯುವ ದಿನಾಂಕಾ: 13ನೇ ಜೂನ್, 2024 (ಗುರುವಾರ) ಸಂಜೆ 05:00 ಗಂಟೆಗೆ

8. ಚುನಾವಣೆ ಮುಗಿಯುವ ದಿನಾಂಕ: 15ನೇ ಜೂನ್, 2024 (ಶನಿವಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+