Get Updates
Get notified of breaking news, exclusive insights, and must-see stories!

ಉಪ ಚುನಾವಣೆ ಗೆಲ್ಲಲು ಪ್ರಯತ್ನ ಸಾಲದು ಅಮಿತ್ ಶಾ ಚಾಟಿ

ಪ್ರತಿಷ್ಠೆಯ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಗೆಲ್ಲಲ್ಲು ಈಗ ಪಡುತ್ತಿರುವ ಪ್ರಯತ್ನ ಸಾಲದು ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪರಿಗೆ ಅಮಿತ್ ಶಾ ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು, ಏಪ್ರಿಲ್ 2 : ಬಿಜೆಪಿ ನಾಯಕರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಟಿ ಏಟು ಬೀಸಿದ್ದಾರೆ. ಪ್ರತಿಷ್ಠೆಯ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಗೆಲ್ಲಲ್ಲು ಈಗ ಪಡುತ್ತಿರುವ ಪ್ರಯತ್ನ ಸಾಲದು ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪರಿಗೆ ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಷ್ಟಕ್ಕೂ ಅಮಿತ್ ಷಾ ಹೇಳಿದ್ದೇನು?

ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಡುವೆ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. ಆದರೆ ಈ ಯತ್ನ ಸಾಲದು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.[ಉಪ ಚುನಾವಣೆಯಲ್ಲಿ 'ಮತ' ಖಚಿತ ಪಡಿಸಲು ಅತ್ಯಾಧುನಿಕ ಮತಯಂತ್ರ]

ಪಕ್ಷದ ಉನ್ನತ ಮೂಲಗಳು ಈ ವಿಷಯವನ್ನು ಬಹಿರಂಗಪಡಿಸಿವೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನಿರಂಜನ್ ಪರವಾಗಿ ನಡೆಯುತ್ತಿರುವ ಪ್ರಚಾರ ಸಮರ್ಪಕವಾಗಿದೆ. ಆದರೆ ನಂಜನಗೂಡು ಕ್ಷೇತ್ರವನ್ನು ಗೆಲ್ಲಲು ಈಗ ನಡೆಸುತ್ತಿರುವ ಪ್ರಯತ್ನ ಸಾಲದು ಎಂದು ಅಮಿತ್ ಷಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಗುಪ್ತ ಪಡೆ ರಿಪೋರ್ಟ್

ಗುಪ್ತ ಪಡೆ ರಿಪೋರ್ಟ್

ಚುನಾವಣಾ ಪ್ರಚಾರದ ಮೇಲೆ ತಮ್ಮಮ ಗುಪ್ತ ಪಡೆಯ ಮೂಲಕ ಅಮಿತ್ ಶಾ ಕಣ್ಗಾವಲು ಇಟ್ಟಿದ್ದಾರೆ. ಈ ಪಡೆಯ ಮೂಲಕ ತಮಗೆ ದಕ್ಕಿರುವ ಸಂದೇಶವನ್ನು ಗಮನಿಸಿ, ರಾಜ್ಯ ಬಿಜೆಪಿ ನಾಯಕರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಜಾತಿವಾರು ಮತಗಳನ್ನು ಆಧರಿಸಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದು ಭಾವಿಸಬೇಡಿ. ಕೇವಲ ಜಾತಿಯ ಆಧಾರದ ಮೇಲೆ ಗೆಲುವು ನಿರ್ಧಾರವಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ನೀವು ಎದುರಾಳಿಯ ವಿರುದ್ಧ ನಿಮ್ಮ ಶಕ್ತಿಯನ್ನು ತೋರಿಸುವುದು ಮಾತ್ರವೇ ಗೆಲುವಿಗೆ ಸಾಲುವುದಿಲ್ಲ .ಬದಲಿಗೆ ಎದುರಾಳಿ ಪಾಳೆಯವನ್ನು ಆಂತರಿಕವಾಗಿ ಎಷ್ಟು ದುರ್ಬಲಗೊಳಿಸುತ್ತೀರಿ ಎಂಬುದರ ಆಧಾರದ ಮೇಲೆ ಗೆಲುವು ನಿರ್ಣಯವಾಗುತ್ತದೆ ಎಂದಿದ್ದಾರೆ.

ಶಕ್ತಿ ಕ್ರೋಢೀಕರಿಸಿಕೊಳ್ಳಿ

ಶಕ್ತಿ ಕ್ರೋಢೀಕರಿಸಿಕೊಳ್ಳಿ

ನಿಮ್ಮ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಿ. ಅದೇ ರೀತಿ ಎದುರಾಳಿ ಕಾಂಗ್ರೆಸ್‍ನ ಶಕ್ತಿ ಕಡಿಮೆ ಮಾಡಿ. ಇಲ್ಲದೇ ಹೋದರೆ ಅವರೇ ಈ ಕೆಲಸ ಮಾಡಿ ನಿಮ್ಮನ್ನು ಅಚ್ಚರಿಗೊಳಪಡಿಸಬಹುದು ಎಂದು ಅಮಿತ್ ಷಾ ಎಚ್ಚರಿಕೆ ನೀಡಿದ್ದಾರೆ. ತಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ.ಆದರೆ ನಂಜನಗೂಡಿನಲ್ಲಿ ಅತಿಯಾದ ಆತ್ಮವಿಶ್ವಾಸದ ಕಾರಣದಿಂದಾಗಿ ಗೆಲುವಿಗೆ ನೀಡಬೇಕಾದ ಗಮನವನ್ನು ನೀವು ಕೊಡುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.[ಜೆಡಿಎಸ್ ಮುಖಂಡರ ಮನೆಗೆ ಸಿದ್ದರಾಮಯ್ಯ ಭೇಟಿನೀಡಿದ್ದೇಕೆ?]

ಗೆಲ್ಲಲ್ಲು ಪ್ರತಿತಂತ್ರ ರೂಪಿಸಿ

ಗೆಲ್ಲಲ್ಲು ಪ್ರತಿತಂತ್ರ ರೂಪಿಸಿ

ಸಿದ್ಧರಾಮಯ್ಯ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸ್ವಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ್ದಾರೆ. ಗೆಲುವಿಗಾಗಿ ಸಕಲ ತಂತ್ರಗಳನ್ನು ಬಳಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎದುರಾಳಿಯನ್ನು ಸೋಲಿಸಲು ರಣತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಶಾ ವಿವರಿಸಿದ್ದಾರೆ. ಅಮಿತ್ ಶಾ ಸಂದೇಶ ರಾಜ್ಯ ಬಿಜೆಪಿಯ ಉನ್ನತ ನಾಯಕರಿಗೆ ತಲುಪಿದ್ದು, ರಣತಂತ್ರವನ್ನು ಹೇಗೆ ಬದಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 ಮೋದಿ ಆಡಳಿತ ವಿಶ್ವಕ್ಕೆ ಮಾದರಿ

ಮೋದಿ ಆಡಳಿತ ವಿಶ್ವಕ್ಕೆ ಮಾದರಿ

ಮೋದಿಯವರ ಆಡಳಿತ ಇಡೀ ವಿಶ್ವಕ್ಕೆ ಮಾದರಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಬಣ್ಣಿಸಿದ್ದಾರೆ. ನಂಜನಗೂಡಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಂಜನಗೂಡು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆಇದೆ. ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಜಗ್ಗೇಶ್ ಪ್ರಚಾರಕ್ಕೂ ಮೊದಲು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ]

ಸರಕಾರದ ಕೈಗೊಂಬೆ

ಸರಕಾರದ ಕೈಗೊಂಬೆ

ಚುನಾವಣಾಧಿಕಾರಿಗಳು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಪ್ರಜಾತಂತ್ರ ವ್ಯವಸ್ಥೆ ವಿರುದ್ಧವಾಗಿ ಕೆಲಸ ನಿರ್ವಹಿಸುತ್ತಿದ್ದು.ತಕ್ಷಣ ಕೇಂದ್ರದ ಅರೆಸೇನಾ ಪಡೆ ನಂಜನಗೂಡಿಗೆ ಬರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

 ನಿಯಮ ಮುರಿದ್ರಾ ಖರ್ಗೆ?

ನಿಯಮ ಮುರಿದ್ರಾ ಖರ್ಗೆ?

ನಂಜನಗೂಡು ಉಪಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂಸದ ಮಲ್ಲಿಕಾರ್ಜುನ್ ಖರ್ಗೆ ವಾಪಸ್ ತೆರಳುವಾಗ ನಿಯಮ ಮುರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜನಗೂಡು ಚೆಕ್ ಪೋಸ್ಟ್ ಬಳಿ ಕಾರನ್ನು ತಪಾಸಣೆ ನಡೆಸಲು ಅಧಿಕಾರಿಗಳು ಕೈ ಮುಂದೆ ಮಾಡಿದಾಗ ಅಧಿಕಾರಿಗಳ ಮಾತಿಗೆ ಬೆಲೆ ನೀಡದೆ ಕಾರನ್ನು ಮುನ್ನುಗ್ಗಿಸಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+