ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಂದ ಸಂಚರಿಸುವ ರೈಲ್ವೆ ಪ್ರಯಾಣಿಕರೇ ಗಮನಿಸಿ

|
Google Oneindia Kannada News

ಬೆಂಗಳೂರು, ಆಗಸ್ಟ್, 23: ಪ್ರಯಾಣಿಕರೇ ಗಮನಿಸಿ,,, ನಿಮಗೆ ಬೇಕಾದ ಆಹಾರ ಮತ್ತು ಬೆಡ್ ಶೀಟ್ ನ್ನು ಆನ್ ಲೈನ್ ಮೂಲಕ ಬುಕ್ ಮಾಡಿಕೊಂಡು ನಿಲ್ದಾಣದಲ್ಲೇ ಪಡೆದುಕೊಳ್ಳಬಹುದು. ಹೌದು ಐಆರ್‌ಸಿಟಿಸಿ ಹೊಸ ಸೌಲಭ್ಯ ಇನ್ನು ಮುಂದೆ ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವವರಿಗೂ ಲಭ್ಯವಾಗಲಿದೆ.

ಆಧುನಿಕ ಜಗತ್ತಿಗೆ ಒಗ್ಗಿಕೊಂಡಿರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರಾವಸೋದ್ಯಮ ನಿಗಮ (ಐಆರ್‌ಸಿಟಿಸಿ) ಪ್ರಯಾಣಿಕರೇ ನೇರವಾಗಿ ಆಹಾರ, ಬೆಡ್ ರೋಲ್ ಮತ್ತು ಬೆಡ್‌ಶೀಟ್‌ಗಳನ್ನು ಬುಕ್ಕಿಂಗ್ ಮಾಡುವ ನೂತನ ಆನ್‌ಲೈನ್ ವ್ಯವಸ್ಥೆ ಆರಂಭಿಸಿದ್ದು ಗೊತ್ತೆ ಇದೆ. ಇದೀಗ ರಾಜಧಾನಿ ಬೆಂಗಳೂರಿನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

E-bed roll hub inaugurated at Bengaluru city railway station

ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ್ ಅಗರ್ವಾಲ್ ನೂತನ ಸೇವೆಗೆ ಚಾಲನೆ ನೀಡಿದ್ದಾರೆ. ಬೆಡ್‌ಶೀಟ್‌ಗೆ 110 ರೂ. ಶುಲ್ಕ ನಿಗದಿಯಾಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಬೆಡ್‌ಶೀಟ್ ಬುಕ್ ಮಾಡುವ ಪ್ರಯಾಣಿಕರು ಪ್ರಯಾಣದ ನಂತರ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಹೊಸ ಕುಡಿಯುವ ನೀರಿನ ಘಟಕಕ್ಕೂ ಚಾಲನೆ ರೈಲ್ವೆ ಇಲಾಖೆ ಇದೆ ಸಂದರ್ಭ ಚಾಲನೆ ನೀಡಿದೆ.

English summary
Bengaluru: Good news for Indian Railway passengers. The Indian Railway Catering and Tourism Corporation (IRCTC) and the Bangalore division of the South Western Railways (SWR) launched an e-bedroll facility and water-vending machines at the Krantiveera Sangolli Rayanna Station (City Railway Station) on August 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X