ಕಲ್ಲಪ್ಪ ಆತ್ಮಹತ್ಯೆ ಪ್ರಕರಣ, ಸಿಐಡಿಯಿಂದ ತೀವ್ರ ವಿಚಾರಣೆ

Posted By:
Subscribe to Oneindia Kannada

ಚಿಕ್ಕಮಗಳೂರು, ಜುಲೈ 07: ಡಿವೈಎಸ್ಪಿ ಕಲ್ಲಪ್ಪ ಅವರ ಮೇಲಿನ ಅಪಹರಣ ಆರೋಪ, ಆತ್ಮಹತ್ಯೆ ಹಿಂದಿನ ಸತ್ಯವನ್ನು ಶೋಧಿಸಲು ಸಿಐಡಿ ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ. ಕಲ್ಲಪ್ಪ ಅವರ ವಿರುದ್ಧ ಕಿಡ್ನಾಪ್ ದೂರು ನೀಡಿರುವ ತೇಜಸ್ ಗೌಡ ಸೇರಿದಂತೆ ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. [ಸಿಐಡಿಗೆ ಮಾಹಿತಿ ನೀಡುವುದು ಹೇಗೆ?]

ಚಿಕ್ಕಮಗಳೂರಿನ ಪೊಲೀಸ್ ಅತಿಥಿಗೃಹದಲ್ಲಿ ತೇಜಸ್ ಗೌಡ, ಪವನ್, ಶಿವು ಅವರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ರಾಜಪ್ಪ ನೇತೃತ್ವದ ಸಿಐಡಿ ತನಿಖಾ ತಂಡಕ್ಕೆ ಇನ್ಸ್ ಪೆಕ್ಟರ್ ರಾಕೇಶ್ ಅವರು ನೆರವಾಗುತ್ತಿದ್ದಾರೆ. [ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ ವ್ಯಕ್ತಿಚಿತ್ರ]

DySP Kallappa suicide - CID begins investigation

ಜೂನ್ 27ರಂದು ಮಾಧವ ಎಂಬುವವರಿಗೆ ಸೇರಿರುವ ತೋಟದಲ್ಲಿ ಚಿಕ್ಕೊಲಳೆ ಗ್ರಾಮದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಇನ್ಸ್ ಪೆಕ್ಟರ್ ರಾಕೇಶ್ ಅವರು ದಾಳಿ ಮಾಡಿ 26ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು. [ತೇಜಸ್ ಗೌಡ ಅಪಹರಣ, ಪ್ರಮುಖ ಆರೋಪಿ ಬಂಧನ]

ಈ ಪೈಕಿ ತೇಜಸ್ ಗೌಡ ಸೇರಿದಂತೆ 6 ಮಂದಿಗೆ ಅಂದಿನ ದಿನವೇ ಜಾಮೀನು ಸಿಕ್ಕಿತ್ತು. ಮರುದಿನ ತೇಜಸ್ ಕಿಡ್ನಾಪ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಬಿಜೆಪಿ ನಗರ ಸಭಾ ಸದಸ್ಯ ಸುಧೀರ್ ಅವರನ್ನು ಸಿಐಡಿ ತಂಡ ಪ್ರಶ್ನಿಸಿದೆ.[ಕಲ್ಲಪ್ಪ ಅವರ ತೇಜೋವಧೆ ಮಾಡಬೇಡಿ : ಪ್ರತಾಪ್ ಸಿಂಹ]

DySP Kallappa suicide - CID begins investigation

ಕಲ್ಲಪ್ಪ ಅವರ ಜತೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಾದ ರಂಗನಾಥ್, ಜಗದೀಶ್, ರಮೇಶ್ ಅವರಿಂದ ಕೂಡಾ ಸಿಐಡಿ ತಂಡ ಮಾಹಿತಿ ಪಡೆದುಕೊಂಡಿದೆ. [ಕಲ್ಲಪ್ಪ ಅವರಿಗೆ ಇಲಾಖೆ ಕಿರುಕುಳ ನೀಡಿಲ್ಲ: ಎಸ್ಪಿ ಸಂತೋಷ್]

ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಗಳು ಎನ್ನಲಾದ ಚಿಟ್ ಫಂಡ್ ಸಂಸ್ಥೆ ನಡೆಸುವ ನಟರಾಜ್ ಹಾಗೂ ಹಿಂದೂ ಸಂಘಟಕ ಪ್ರವೀಣ್ ಖಾಂಡ್ಯ ಅವರ ಬಂಧನವಾಗಿದೆ ಎಂಬ ಸುದ್ದಿಯನ್ನು ಸಿಐಡಿ ಐಜಿಪಿ ಪ್ರತಾಪ್ ರೆಡ್ಡಿ ತಳ್ಳಿ ಹಾಕಿದ್ದಾರೆ.[ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ ಕಥೆ]

ಡಿಐಜಿ ನಾರಂಗ್ ಎಂಟ್ರಿ: ಡಿಐಜಿ ಸೋನಿಯಾ ನಾರಂಗ್, ಎಸ್ಪಿ ಹೈದಿ ಮಾರ್ಟಿನ್ ಅವರು ಕಲ್ಲಪ್ಪ ಅವರ ಮಾವ ಸಿದ್ರಾಮಪ್ಪ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯಿಂದ ಕಿರುಕುಳವಾಗಿದೆ ಎಂದು ಕಲ್ಲಪ್ಪ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DySP Kallappa suicide: Criminal investigation department (CID) led by Rajappa began its investigation. Two separate teams arrived at the Chikkam agaluru and also Belagavi to pool details leading to the suicide.
Please Wait while comments are loading...