ಮಾಧ್ಯಮದ ಮೇಲೆ ಗೂಬೆ ಕೂರಿಸಿ ಮಾತು ಬದಲಿಸಿದ ಪಾಟೀಲರು

Subscribe to Oneindia Kannada

ರಾಯಚೂರು, ಏಪ್ರಿಲ್, 28: "ರಾಜ್ಯದಲ್ಲಿ ಇರುವುದು ಬಿರು ಬೇಸಿಗೆ ಮಾತ್ರ, ಬರಗಾಲವಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ್ ತಮ್ಮ ಮಾತನ್ನು ಬದಲಾಯಿಸಿದ್ದಾರೆ. ಜತೆಗೆ ಮಾದ್ಯಮದವರ ಮೇಲೆ ಗೂಬೆ ಕೂರಿಸಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೇ ಜನ ತತ್ತರಿಸುತ್ತಿದ್ದರೆ ರಾಜ್ಯದಲ್ಲಿ ಸದ್ಯ ಬರಗಾಲವೇ ಇಲ್ಲ ಎಂದು ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದ ಸಚಿವರು ಇದೀಗ ಮಾತು ಬದಲಾಯಿಸಿದ್ದಾರೆ.[ಎಚ್ಕೆ ಪಾಟೀಲರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]

karnataka

ರಾಯಚೂರಿನಲ್ಲಿ ಪಾಟೀಲ್‌, ರಾಜ್ಯದಲ್ಲಿ ಬರ ಇಲ್ಲ ಎಂದು ಎಲ್ಲೂ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿದೆ ಎಂದು ಹೇಳಿದ್ದಾರೆ.

1972ರ ನಂತರ ರಾಜ್ಯ ಭೀಕರ ಬರ ಪರಿಸ್ಥಿತಿಗೆ ತಲುಪಿದ್ದು ಎಲ್ಲರೂ ಪರಿಹಾರ ಕಾರ್ಯಕ್ಕೆ ಕೈ ಜೋಡಿಸಬೇಕು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಪರಿಸ್ಥಿತಿ ಮೊದಲು ಸುಧಾರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.['ಸುಡುತ್ತಿರುವ ಪಶ್ಚಿಮ ಘಟ್ಟ ಮೊದಲು ಉಳಿಸಿಕೊಳ್ಳಿ']

ಯಾವಾಗ ಬಿತ್ತನೆ ಸಾಧ್ಯವಿಲ್ಲವೋ ಅಂತಹ ಸಮಯವನ್ನು ಬರಗಾಲವೆಂದು ಕರೆಯಬಹುದು ಎಂದು ಹೇಳಿದ್ದ ಪಾಟೀಲರು ಇದೀಗ ಉಲ್ಟಾ ಹೊಡೆದಿದ್ದಾರೆ. ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಸಾಕಷ್ಟು ಅನುದಾನವನ್ನು ನೀಡಿದ್ದು ಮುಖ್ಯಮಂತ್ರಿ ಬರ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raichur: After the controversial statement about Karnataka Drought Minister for Rural Development and Panchayat Raj H.K. Patil took U-turn. Media manipulated My statement Patil said at Raichur.
Please Wait while comments are loading...