• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಕಾರ್ಯಕರ್ತರ ನಿಗಮ-ಮಂಡಳಿ ಕನಸಿಗೆ ಎಳ್ಳು-ನೀರು!

|
   ಕಾಂಗ್ರೆಸ್ ಕಾರ್ಯಕರ್ತರ ನಿಗಮ-ಮಂಡಳಿ ಕನಸಿಗೆ ಹೈ ಕಮಾಂಡ್ ತಡೆ | Oneindia Kannada

   ಬೆಂಗಳೂರು, ಸೆ.28: ಕಳೆದ ಮೂರು ತಿಂಗಳಿನಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ನಿಗಮ ಮಂಡಳಿ ಆಸೆಗೆ ಎಳ್ಳು-ನೀರು ಬಿಡುವುದು ಬಹುತೇಕ ಖಚಿತವಾಗಿದೆ.

   ಇದಕ್ಕೆ ಪ್ರಮುಖ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ನೆನಗುದಿಗೆ ಬಿದ್ದಿರುವುದು, ಈಗಾಗಲೇ ಗೊತ್ತಿರುವಂತೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಹುದ್ದೆ ಖಾಲಿ ಇರುವುದು ಕೇವಲ ಏಳು ಸ್ಥಾನ ಮಾತ್ರ ಆ ಪೈಕಿ ಒಂದು ಜೆಡಿಎಸ್ ಗೆ ಆರು ಕಾಂಗ್ರೆಸ್ ಗೆ ಮೀಸಲಾಗಿದೆ.

   ಚಾಮರಾಜನಗರದ ಸಚಿವದ್ವಯರ ಮುಸುಕಿನ ಗುದ್ದಾಟ ಬೀದಿಗೆ ಬಂತು!

   ಕಾಂಗ್ರೆಸ್ ಗೆ ಲಭ್ಯವಿರುವ ಆರರಲ್ಲಿ ಐದನ್ನು ಮಾತ್ರ ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದ್ದು, ಒಂದನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ. ಖಾಲಿ ಇರುವ ಐದು ಸ್ಥಾನಗಳ ಪೈಕಿ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಎಚ್‌ಕೆ ಪಾಟೀಲ್ ಹಾಗೂ ಎಂಬಿ ಪಾಟೀಲ್ ಈಗಾಗಲೇ ಭಾರಿ ಪೈಪೋಟಿ ನಡೆಸಿದ್ದಾರೆ.

   ಇರುವುದು ಸಚಿವ ಸ್ಥಾನ ಆರು, ಅತೃಪ್ತರಿಗೆ ಉಳಿವುದು ಮೂರು

   ಇರುವುದು ಸಚಿವ ಸ್ಥಾನ ಆರು, ಅತೃಪ್ತರಿಗೆ ಉಳಿವುದು ಮೂರು

   ಆ ಮೂವರಲ್ಲಿ ಇಬ್ಬರಿಗೆ ಸ್ಥಾನ ದಕ್ಕುವುದು ಖಚಿತ, ಹೀಗಾಗಿ ಈಗಾಗಲೇ ಬಂಡೆದ್ದಿರುವ 18 ಕಾಂಗ್ರೆಸ್ ಶಾಸಕರಿಗೆ ಉಳಿಯುವುದು ಕೇವಲ ಎರಡು ಸ್ಥಾನಗಳು, 17-18 ಜನ ಭಿನ್ನಮತೀಯ ಶಾಸಕರ ಪೈಕಿ ಎರಡು ಸ್ಥಾನಗಳನ್ನು ಕೊಟ್ಟರೆ 16 ಶಾಸಕರು ಅತೃಪ್ತರಾಗಿಯೇ ಉಳಿಯುತ್ತಾರೆ.ಆ ಎಲ್ಲಾ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಉಳಿಯುವುದು ಕೇವಲ ನಿರ್ದೇಶಕ ಸ್ಥಾನಗಳು ಮಾತ್ರ.

   ಎಲ್ಲಾ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದು

   ಅತೃಪ್ತ ಶಾಸಕರಿಗೆ ಮಣೆ, ಕಾರ್ಯಕರ್ತರ ನೋವಿಗಿಲ್ಲ ಕೊನೆ

   ಅತೃಪ್ತ ಶಾಸಕರಿಗೆ ಮಣೆ, ಕಾರ್ಯಕರ್ತರ ನೋವಿಗಿಲ್ಲ ಕೊನೆ

   ಈಗ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟವಾಗಿದೆ, ಈ ಸಂದರ್ಭದಲ್ಲಿ ಶಾಸಕರ ಕಣ್ಣೊರೆಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.ಇರುವ ಐದು ಸ್ಥಾನಗಳ ಪೈಕಿ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಎಚ್‌ಕೆ ಪಾಟೀಲ್ ಹಾಗೂ ಎಂಬಿ ಪಾಟೀಲ್ ಈಗಾಗಲೇ ಭಾರಿ ಪೈಪೋಟಿ ನಡೆಸಿದ್ದಾರೆ.

   ನಿಗಮ-ಮಂಡಳಿ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ!

   ಕಾಂಗ್ರೆಸ್ ಹೈಕಮಾಂಡ್ ಗೆ ಕಾರ್ಯಕರ್ತರ ಚಿತಾವಣೆ

   ಕಾಂಗ್ರೆಸ್ ಹೈಕಮಾಂಡ್ ಗೆ ಕಾರ್ಯಕರ್ತರ ಚಿತಾವಣೆ

   ಹೀಗಾಗಿ ಯಾವುದೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ನಾಯಕರಿಗೆ ದಕ್ಕುವುದಿಲ್ಲ, ಈ ಎಲ್ಲಾ ಕಾರಣಗಳನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಾವುದೇ ನಿಗಮ ಮಂಡಳಿಗೆ ನೇಮಕವನ್ನು ಮಾಡದೇ ಇರಲು ನಿರ್ಧರಿಸಿದೆ.

   ಇತ್ತೀಚೆಗೆ ನಡೆದ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷ ಸಭೆಯಲ್ಲಿ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧವೇ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಗುಟ್ಟಾಗಿ ಉಳಿದಿಲ್ಲ, ಈ ಕಾರಣಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಪ್ಪುಗಟ್ಟುತ್ತಿರುವ ಅಸಮಾಧಾನ ನಿಗಮ ಮಂಡಳಿ ನೇಮಕಾತಿ ಬಳಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

   ಒಂದು ವೇಳೆ ನಿಗಮ ಮಂಡಳಿಗಳಿಗೆ ನೇಮಕ ಮಾಡಿದರೆ ಶಾಸಕರನ್ನು ಹೊರತುಪಡಿಸಿ ಕೇವಲ 15 ಮಂದಿ ಕಾರ್ಯಕರ್ತರಿಗೆ ಮಾತ್ರ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಬಹುದು.

   ಸರ್ಕಾರದಲ್ಲಿ ಇರುವುದು ಕಾಂಗ್ರೆಸ್, ಅಧಿಕಾರ ನಡೆಸೋದು ಜೆಡಿಎಸ್

   ಸರ್ಕಾರದಲ್ಲಿ ಇರುವುದು ಕಾಂಗ್ರೆಸ್, ಅಧಿಕಾರ ನಡೆಸೋದು ಜೆಡಿಎಸ್

   ಅಂತಹ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಸಮಾಧಾನಪಡಿಸುವುದು ಪಕ್ಷಕ್ಕೆ ಕಷ್ಟವಾಗಬಹುದು, ಹೀಗೆ ನೇಮಕಾತಿ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆ ವೇಳೆ ಕಾರ್ಯಕರ್ತರು ಅಸಮಾಧಾನಗೊಂಡು ಪಕ್ಷದ ಪರವಾಗಿ ಕೆಲಸ ಮಾಡದೇ ಇರಬಹುದು, ಅಷ್ಟೇ ಅಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನೂ ಮಾಡಬಹುದು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಧ್ಯಕ್ಕೆ ನಿಗಮ-ಮಂಡಳಿ ಗೆ ಕಾರ್ಯಕರ್ತರನ್ನು ನೇಮಕ ಮಾಡದೆ ಅಸಮಾಧಾನಗೊಂಡ ಕಾರ್ಯಕರ್ತರನ್ನು ಮಾತ್ರ ಸಮಾಧಾನಪಡಿಸಿ ಕೈತೊಳೆದುಕೊಳ್ಳುವ ಆಲೋಚನೆಯಲ್ಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ಹೇಳುತ್ತಿವೆ.

   English summary
   As many Congress workers expecting their nomination for various boards and corporations. But party high command still busy with dissident MLAs and trying to console them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X