ಡಾ.ಎಸ್.ಚಿನ್ನಸ್ವಾಮಿ ಅವರಿಗೆ ಡಾ.ಅಂಬೇಡ್ಕರ್ ಪ್ರಶಸ್ತಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : 'ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಸಾಲಿನ ಡಾ. ಅಂಬೇಡ್ಕರ್ ಪ್ರಶಸ್ತಿಯನ್ನು ಡಾ.ಎಸ್.ಚಿನ್ನಸ್ವಾಮಿ ಮಾಂಬಳ್ಳಿ ಅವರಿಗೆ ನೀಡಲಾಗುತ್ತದೆ' ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, 'ಡಾ. ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಚಾಮರಾಜನಗರ ಜಿಲ್ಲೆಯ ಡಾ.ಎಸ್. ಚಿನ್ನಸ್ವಾಮಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆಮಾಡಿದೆ' ಎಂದರು. [ಉತ್ಥಾನ ಪತ್ರಿಕೆ: ಅಂಬೇಡ್ಕರ್ 125' ವಿಶೇಷ ಸಂಚಿಕೆ ಕೊಳ್ಳಿರಿ]

h anjaneya

'ಸಂವಿಧಾನ ಶಿಲ್ಪಿ ಭಾರತರತ್ನ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಅಂಬೇಡ್ಕರ್ ಅವರ ಕುರಿತಂತೆ ನಾಟಕ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನಗಳು, ಸಾಮಾಜಿಕ ಕಳಕಳಿ ಇರುವಂತಹ ಮನುಷ್ಯ ಜಾತಿ ತಾನೋಂದೇವಲಂ ನಾಟಕವನ್ನು ಪ್ರದರ್ಶಿಸಲಾಗುವುದು' ಎಂದು ತಿಳಿಸಿದರು. [ಸಂವಿಧಾನ ಮತ್ತು ಮೀಸಲಾತಿ ಬಗ್ಗೆ ಯಾರು, ಏನು ಹೇಳಿದರು?]

'ಡಾ.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸರಳವಾಗಿ ಮುದುವೆಯಾಗುವ ಪರಿಶಿಷ್ಟ ಜಾತಿ/ಪಂಗಡಗಳ ವಧೂವರರಿಗೆ ಸರ್ಕಾರ ರೂ. 50 ಸಾವಿರ ಪ್ರೋತ್ಸಾಹ ಧನ ನೀಡಲಿದ್ದು, ಪರಿಶಿಷ್ಟ ಜಾತಿ ಹೆಣ್ಣು ಮಗಳು ಅನ್ಯ ಜಾತಿಯವರನ್ನು ಮದುವೆಯಾದಲ್ಲಿ 3 ಲಕ್ಷ ರೂ. ಪ್ರೋತ್ಸಾಹ ಧನ ಹಣ ನೀಡಲಾಗುವುದು. ಅನ್ಯ ಜಾತಿಯನ್ನು ಪರಿಶಿಷ್ಟ, ಪರಿಶಿಷ್ಟ ಪಂಗಡದವರನ್ನು ಮದುವೆಯಾದಲ್ಲಿ ರೂ. 2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು' ಎಂದು ಸಚಿವರು ತಿಳಿಸಿದರು. [ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದ ನರೇಂದ್ರ ಮೋದಿ]

ಡಾ.ಎಸ್.ಚಿನ್ನಸ್ವಾಮಿ ಮಾಂಬಳ್ಳಿ ಪರಿಚಯ : ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ದಲಿತ ಕುಟುಂಬದಲ್ಲಿ ಎಂ.ಸೋಮಣ್ಣ ಹಾಗೂ ಸರೋಜಮ್ಮ ಇವರ ಮಗನಾಗಿ, ಆಗಸ್ಟ್ 5, 1948ರಂದು ಡಾ.ಎಸ್.ಚಿನ್ನಸ್ವಾಮಿ ಜನಿಸಿದರು.

ತಂದೆ ಎಂ.ಸೋಮಣ್ಣರವರು ಪರಿಶಿಷ್ಟ ಜಾತಿಯವರಲ್ಲಿಯೇ ಪ್ರಥಮ ಸಿವಿಲ್ ಇಂಜಿನಿಯರ್‍ ಆಗಿ ಸೇವೆ ಸಲ್ಲಿಸಿದವರು. ಇಂತಹ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದ ಡಾ.ಎಸ್.ಚಿನ್ನಸ್ವಾಮಿ ಅವರಿಗೆ ದಲಿತರ ಮೇಲಿನ ಶೋಷಣೆ, ಅಸಮಾನತೆ ಇವರನ್ನು ದಲಿತಪರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡಿದವು.

chinna samy

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಇವರು ಎಚ್.ಡಿ.ಕೋಟೆ ತಾಲೂಕಿನಲ್ಲಿ ಪಡೆದಿದ್ದು, ಬಿ.ಇ.(ಸಿವಿಲ್) ಹಾಗೂ ಎಂ.ಇ. (ಸ್ಟ್ರಕ್ಚರಲ್‍ಇಂಜಿನಿಯರಿಂಗ್), ಸಿ.ಇ., ಎಂ.ಐ.ಸಿ.ಐ., ಎಂ.ಎ.ಸಿ.ಐ, ಎಂ.ಐ.ಬಿಸಿ., ಮುಂತಾದ ಉನ್ನತ ಶಿಕ್ಷಣವನ್ನು ಪಡೆದಿರುತ್ತಾರೆ.

1975ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಮೂಲಕ ಸಹಾಯಕ ಕಾರ್ಯಪಾಲಕಅಭಿಯಂತರರಾಗಿ ಕೇಂದ್ರ ಲೋಕೋಪಯೋಗಿ ಇಲಾಖೆಗೆ ನೇಮಕಗೊಂಡು, ಕಾರ್ಯ ನಿರ್ವಾಹಕ ಅಭಿಯಂತರರಾಗಿ, ಅಧೀಕ್ಷಕ ಅಭಿಯಂತರರಾಗಿ ಹಾಗೂ ಮುಖ್ಯ ಅಭಿಯಂತರರ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಮುಖ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸೇತುವೆ ನಿರ್ಮಾಣಕಾರ್ಯದಲ್ಲಿ ಗುತ್ತಿಗೆದಾರರ ಅಗತ್ಯವಿದ್ದು, ಅಲ್ಲಿನ ನೂರಾರು ಬುಡಕಟ್ಟು ಜನಾಂಗದವರನ್ನು ಗುತ್ತಿಗೆದಾರರನ್ನಾಗಿ ರೂಪಿಸಿ ಆರ್ಥಿಕ ಸ್ವಾವಲಂಬನೆಯನ್ನು ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪಾಂಡಿಚೇರಿಯಲ್ಲಿ ಮುಖ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 5000ಕ್ಕೂ ಹೆಚ್ಚು ಜನ ದಿನಗೂಲಿ ಆಧಾರದ ಮೇಲೆ ರೂ. 500ವೇತನಕ್ಕಾಗಿ ದುಡಿಯುತ್ತಿದ್ದ ದಿನಗೂಲಿ ದಲಿತ ಬಡ ನೌಕರರ ಸೇವೆಯನ್ನು ಖಾಯಂಗೊಳಿಸಿ ರೂ.6000 ವೇತನ ಪಡೆಯುವಂತೆ ಮಾಡಿರುವುದು ಅವರ ಶೋಷಿತ ವರ್ಗದ ನೌಕರರ ಮೇಲಿನ ಕಾಳಜಿಗೆ ಸಾಕ್ಷಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social welfare minister H. Anjaneya said, Karnataka government has chosen Dr.S.Chinna Samy for its Ambedkar award this year.
Please Wait while comments are loading...