ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಕ್ ಫಂಗಸ್ ರೋಗದ ಬಗ್ಗೆ ಸಾರ್ವಜನಿಕರಿಗೆ ಡಾ. ಆಂಜಿನಪ್ಪ ಕೊಟ್ಟ ತುರ್ತು ಸಲಹೆಗಳು!

|
Google Oneindia Kannada News

ಬೆಂಗಳೂರು, ಮೇ. 18: ಕೊರೊನಾ ನಡುವೆ ಇದೀಗ ಜನರಲ್ಲಿ ಭೀತಿ ಹುಟ್ಟಿಸಿರುವುದು ಬ್ಲಾಕ್ ಫಂಗಸ್. ಈ ಕಪ್ಪು ಶಿಲೀಂದ್ರದ ಕಾಯಿಲೆಗೆ ತುತ್ತಾಗಿ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಬ್ಲಾಕ್ ಫಂಗಸ್ ಕೊರೊನಾ ಮಹಾಮಾರಿಗಿಂತಲೂ ಅಪಾಯಕಾರಿ. ಇದರ ಚಿಕಿತ್ಸೆ ವೆಚ್ಚ ಬಡವರಿಗೆ ಎಟಕುವಂತದ್ದಲ್ಲ. ಈ ಬ್ಲಾಕ್ ಫಂಗಸ್ ಬಾರದಂತೆ ವಹಿಸಬೇಕಾದ ಎಚ್ಚರಿಕೆ ಕುರಿತು ತಜ್ಞ ವೈದ್ಯರಾದ ಡಾ. ಟಿ.ಎಂ. ಆಂಜನಪ್ಪ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಜನರಲ್ಲಿ ಹುಟ್ಟಿರುವ ಭೀತಿ ಕುರಿತು ತಜ್ಞ ವೈದ್ಯರು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

Recommended Video

ಬ್ಲಾಕ್ ಫಂಗಸ್ ಬಗ್ಗೆ ಎಲ್ಲರೂ ಭಯ ಪಡಬೇಕಾಗಿಲ್ಲ | Oneindia Kannada
ಬ್ಲಾಕ್ ಫಂಗಸ್ ಅಂದ್ರೆ ಏನು ?

ಬ್ಲಾಕ್ ಫಂಗಸ್ ಅಂದ್ರೆ ಏನು ?

ಫಂಗಸ್ ಅಂದ್ರೆ ಕನ್ನಡ ಭಾಷೆಯಲ್ಲಿ ಶಿಲೀಂದ್ರ ಎಂದು ಕರೆಯುತ್ತೇವೆ. ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಬ್ಯಾಕ್ಟೀರಿಯಾ, ವೈರಸ್ ಹಾಗೂ ಫಂಗಸ್. ಕಾಲರಾ, ಮಲೇರಿಯಾ ಕಾಯಿಲೆಗಳಿಂದ ನಾವು ಬ್ಯಾಕ್ಟೀರಿಯಾ ನೋಡಿದ್ವಿ. ವೈರಸ್ ನನ್ನು ಕೊರೊನಾದಿಂದ ಅನುಭವಿಸುತ್ತಿದ್ದೇವೆ. ಇನ್ನು ಫಂಗಸ್ ಅನ್ನುವುದು ಶಿಲೀಂದ್ರ. ನಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ಅದು ಇರುತ್ತದೆ. ತೆಂಗಿನ ಚಿಪ್ ನಲ್ಲಿ ಕಪ್ಪು ಬೂಸ್ಟ್ ಬೆಳೆಯುತ್ತದೆ ಅದೇ ತರ ನಮ್ಮ ಸುತ್ತ ಮುತ್ತ ಇರುತ್ತದೆ. ಸಾಕಷ್ಟು ಜನರಿಗೆ ಇನ್‌ಫಕ್ಷನ್ ಆಗುತ್ತದೆ. ತೊಡೆ ಸಂದಿ, ಬಾಯಿಯಲ್ಲಿ ಫಂಗಸ್ ಆಗುವುದನ್ನು ಸೂಪರ್ ಅಫಿಷಿಯಲ್ ಫಂಗಸ್ ಅನ್ನುತ್ತೇವೆ. ಕೆಲವೊಮ್ಮೆ ಕರುಳಿನಲ್ಲಿ, ಶ್ವಾಶಕೋಶಗಳಲ್ಲಿ ಕಾಣಿಸಿಕೊಳ್ಳುವುದನ್ನು ಡಿ ಫಂಗಸ್ ಅಂತ ಕರೆಯುತ್ತೇವೆ. ಬ್ಲಾಕ್ ಫಂಗಸ್ ಮ್ಯೂಕೋ ಮೈಕೋಸಿಸ್ ಎಂಬ ಶಿಲೀಂದ್ರದಿಂದ ಬರುತ್ತದೆ.

ಬ್ಲಾಕ್ ಫಂಗಸ್ ಯಾರು ಹೆದರಬೇಕು

ಬ್ಲಾಕ್ ಫಂಗಸ್ ಯಾರು ಹೆದರಬೇಕು

ಬ್ಲಾಕ್ ಫಂಗಸ್ ಗೆ ಎಲ್ಲರೂ ಭಯ ಪಡುವ ಅಗತ್ಯವಿಲ್ಲ. ಇದು ಅವಕಾಶವಾದಿ ಶಿಲೀಂದ್ರ. ನಮ್ಮ ಸುತ್ತ ಮುತ್ತ ವಾತಾವರಣದಲ್ಲಿಯೇ ಇರುತ್ತದೆ. ಸಾಮಾನ್ಯವಾಗಿ ಯಾರನ್ನು ಟಾರ್ಗೆಟ್ ಮಾಡುವುದಿಲ್ಲ. ಆದರೆ, ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರರನ್ನು ಈ ಶಿಲೀಂದ್ರ ಟಾರ್ಗೆಟ್ ಮಾಡುತ್ತದೆ. ಮೂಗು, ಬಾಯಿ, ಕಣ್ಣಿನಿಂದ ಈ ಕಪ್ಪು ಶಿಲೀಂದ್ರ ಮೈ ಹೊಕ್ಕುತ್ತದೆ. ಹೀಗಾಗಿ ಕೊರೊನಾ ಸೋಂಕಿಗೆ ಒಳಗಾಗಿ ಆಕ್ಸಿಜನ್ ಮತ್ತು ಹೋಮ್ ಕ್ವಾರೆಂಟೈನ್ ಗೆ ಒಳಗಾಗಿರುವರು ಭಯ ಪಡುವ ಅಗತ್ಯವಿಲ್ಲ. ಉಳಿದಂತೆ ಸಾಮಾನ್ಯರು ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಯಾರೂ ಕೊರೊನಾ ಸೋಂಕಿಗೆ ಒಳಗಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದು ಬಂದಿರುತ್ತಾರೋ ಅಂತಹವರು ಮಾತ್ರ ಈ ಫಂಗಸ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗಿಗಳು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಬ್ಲಾಕ್ ಫಂಗಸ್ ಬಂದ್ರೆ ಏನಾಗುತ್ತದೆ

ಬ್ಲಾಕ್ ಫಂಗಸ್ ಬಂದ್ರೆ ಏನಾಗುತ್ತದೆ

ಬ್ಲಾಕ್ ಫಂಗಸ್ ತುಂಬಾ ಅಪಾಯಕಾರಿ ಕಾಯಿಲೆ. ಇದು ಕೊರೊನಾ ಸೋಂಕಿಗಿಂತಲೂ ಅಪಾಯಕಾರಿ. ಒಂದು ಸಲ ಬ್ಲಾಕ್ ಫಂಗಸ್ ಮೈಗೆ ಹೊಕ್ಕಿದರೆ, ಕಣ್ಣು ತೆಗೆಯುವ, ದವಡೆ ತೆಗೆಯಬೇಕಾಗತ್ತದೆ. ದೇಹದ ಭಾಗಗಳನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗಬೇಕಾಗುತ್ತದೆ. ಬ್ರೈನ್ ಓಪನ್ ಮಾಡಬೇಕಾಗುತ್ತದೆ. ಇದರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಲಭ್ಯವಿದೆ. ಜ್ವರ, ಮೈಕೈ ನೋವು, ಮುಖದಲ್ಲಿ ಊತ ಕಾಣಿಸಿಕೊಳ್ಳುವುದು, ಕಣ್ಣು ಕೆಂಪಾಗುವುದು, ಕಿವಿಯಲ್ಲಿ ರಕ್ತ ಬರುವುದು ಈ ರೋಗದ ಲಕ್ಷಣ. ಈ ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಕೈ ಮೀರಿದರೆ ಬದುಕು ಬರುವುದೇ ಕಷ್ಟ. ಬಡವರಿಗೆ ಬಂದರೆ ಈ ಕಾಯಿಲೆಯಿಂದ ಉಳಿದು ಬರುವುದು ಕಷ್ಟ. ಉಳಿಸಿಕೊಂಡರೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.

ಬ್ಲಾಕ್ ಫಂಗಸ್ ಚಿಕಿತ್ಸೆ ವೆಚ್ಚ

ಬ್ಲಾಕ್ ಫಂಗಸ್ ಚಿಕಿತ್ಸೆ ವೆಚ್ಚ

ಬ್ಲಾಕ್ ಫಂಗಸ್ ಲಕ್ಷಣ ಆರಂಭದಲ್ಲಿಯೇ ಗೊತ್ತಾದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಲಿಪೊಸೋಮಲ್ ಅಪೋಂಟೆರಿಸನ್ ಎಂಬ ಇಂಜೆಕ್ಷನ್ ನೀಡಿ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಒಂದು ಚುಚ್ಚು ಮದ್ದಿನ ಬೆಲೆ 7 ಸಾವಿರ. ಆದರೆ, ಕೊರೊನಾ ದಿಂದ ಬ್ಲಾಕ್ ಫಂಗಸ್ ಬರುತ್ತಿರುವ ಹಿನ್ನೆಲೆಯಲ್ಲಿ ಈ ಚುಚ್ಚು ಮದ್ದು ಕೂಡ ರೆಮ್ ಡಿಸಿವಿಆರ್ ಮಾದರಿ ಕಾಳಸಂತೆಯಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಅತಿ ಹೆಚ್ಚಾಗಿ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಒಂದು ಲಿಪಸೋಮಲ್ ವಯಲ್ ಬೆಲೆ ಕಾಳ ಸಂತೆಯಲ್ಲಿ 60 ಸಾವಿರಕ್ಕೆ ಬಿಕರಿಯಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಒಬ್ಬ ವ್ಯಕ್ತಿಗೆ ಕನಿಷ್ಠ 60 ವಯಲ್ ಬೇಕಾಗುತ್ತದೆ. ಅಂದರೆ ಇವತ್ತಿನ ಕಾಳ ಸಂತೆಯ ಮಾರುಕಟ್ಟೆ ಬೆಲೆ ಪರಿಗಣಿಸಿದರೆ, ತಲಾ 20 ಸಾವಿರ ರೂ. ಅಂದರೆ ಕೇವಲ ಚುಚ್ಚು ಮದ್ದಿಗೆ 12 ಲಕ್ಷ ರೂ. ಬೇಕಾಗುತ್ತದೆ. ಹೀಗಾಗಿ ಇದು ಬಡವರಿಗೆ ಬಂದರೆ ತುಂಬ ಅಪಾಯಕಾರಿ ಎಂದು ಡಾ. ಆಂಜಿನಪ್ಪ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಈ ಚುಚ್ಚುಮದ್ದಿಗೆ ಬಹು ಬೇಡಿಕೆ ಹೆಚ್ಚಾಗಿದ್ದು, ಇಲ್ಲೂ ಸಹ ಲಭ್ಯವಾಗುತ್ತಿಲ್ಲ. ಇತ್ತೀಚೆಗೆ ಕೊರೊನಾ ಸೋಂಕಿತರಿಗೆ ಅತಿ ಹೆಚ್ಚಾಗಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಸರ್ಕಾರದ ವತಿಯಿಂದಲೇ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದಾರೆ.

 ಪರಿಹಾರ ಮಾರ್ಗ

ಪರಿಹಾರ ಮಾರ್ಗ

ಕೊರೊನಾ ಸೋಂಕಿಗೆ ಒಗಾಗಿ ಐಸಿಯು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದವರ ರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಇಂತಹವರು ಶ್ನಾನ ಕೋಣೆ ಸ್ವಚ್ಛಗೊಳಿಸಿವುದು, ಗಾರ್ಡನಿಂಗ್ ಮಾಡುವುದು, ಮಣ್ಣಿನಲ್ಲಿ ಕೆಲಸ ಮಾಡುವುದು, ಕಸ ವಿಲೇವಾರಿಯಂತಹ ಕೆಲಸ ಮಾಡಬಾರದು. ಒಂದು ವೇಳೆ ಮಾಡಿದರೂ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಪ್ಪಿ ತಪ್ಪಿ ಕೈಗಳಿಂದ ಮೂಗು, ಕಣ್ಣು , ಕಿವಿ ಮುಟ್ಟಬಾರದು. ಪದೇ ಪದೇ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ಕ್ಯಾನ್ಸರ್ ಪೀಡಿತರು, ಸಕ್ಕರೆ ಕಾಯಿಲೆ ಇರುವರು ಈ ಬ್ಲಾಕ್ ಫಂಗಸ್ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ಡಾ. ಆಂಜಿನಪ್ಪ ಸಲಹೆ ಮಾಡಿದ್ದಾರೆ.

English summary
Expert Dr Anjanappa has given tips to people about Black Fungus Disease
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X