• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 'ನನಗೆ ಲಂಚ ನೀಡಬೇಡಿ' ಬೋರ್ಡ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕದಲ್ಲಿ ಭ್ರಷ್ಟಾಚಾರ ಎಂಬ ವಿಷಯವೇ ರಾಜಕೀಯ ಪಕ್ಷಗಳು ಮತ್ತು ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿ ಬಿಟ್ಟಿದೆ. ಒಂದು ಕಡೆ ಪೇಸಿಎಂ ಅಭಿಯಾನ ನಡೆಯುತ್ತಿದ್ದಂತೆ ಇನ್ನೊಂದು ಕಡೆ ಪೇ ಟು ಕಾಂಗ್ರೆಸ್ ಮೇಡಂ ಅಭಿಯಾನ ಶುರುವಿಟ್ಟುಕೊಂಡಿದೆ. ಇದರ ಮಧ್ಯೆ ಇಲ್ಲೊಂದು ನಾಮಫಲಕ ಟ್ರೆಂಡ್ ಕ್ರಿಯೇಟ್ ಮಾಡಿದೆ.

"ನನಗೆ ಯಾರೂ ಲಂಚ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿ ಆಗಲಾರೆ," ಎಂಬ ಬೋರ್ಡ್ ಅನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಸರ್ಕಾರವೇ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಇಂಥದೊಂದು ನಾಮಫಲಕವು ರಾರಾಜಿಸುತ್ತದೆ.

ಕಾಂಗ್ರೆಸ್ಸಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡಲು ಹಕ್ಕಿಲ್ಲ: ತನಿಖೆ ಎದುರಿಸಲು ಬಿಜೆಪಿ ಸಿದ್ಧ:ಸಿಎಂಕಾಂಗ್ರೆಸ್ಸಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡಲು ಹಕ್ಕಿಲ್ಲ: ತನಿಖೆ ಎದುರಿಸಲು ಬಿಜೆಪಿ ಸಿದ್ಧ:ಸಿಎಂ

ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಈ ರೀತಿಯ ನಾಮಫಲಕಗಳನ್ನು ಹಾಕುವುದಕ್ಕೆ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದೆ. ನಾಮಫಲಕ ಹಾಕಿದಾಕ್ಷಣ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಇಲ್ಲಿಯೂ ಉದ್ಭವಿಸುತ್ತದೆ. ಹಾಗಿದ್ದರೆ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯಲ್ಲಿ ಏನಿದೆ ಎಂದು ಮುಂದೆ ತಿಳಿಯಿರಿ.

ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಏನಿದೆ?

"ನಾಗರಿಕ ವಿಚಾರಣೆ ಸಮಿತಿ( ಸಿಟಿಜನ್ ಎನ್ಕ್ವೇರಿ ಕೌನ್ಸಿಲ್) ಮತ್ತು ಸಿಇಸಿ ಟ್ರಸ್ಟ್ ವತಿಯಿಂದ ಸ್ವೀಕೃತವಾಗಿರುವ ಆಗಸ್ಟ್ 12, 2022ರ ಪತ್ರದಲ್ಲಿ ಸದರಿ ಸಂಸ್ಥೆಯ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ಅಕ್ಟೋಬರ್ 2, 2022ರಿಂದ ಅಕ್ಟೋಬರ್ 20, 2022ರವರೆಗೂ ನಡೆಸಲಾಗುತ್ತಿದೆ. ಈ ಹಿನ್ನೆಲೆ ಸದರಿ ಸಂಸ್ಥೆಯು ಸಿದ್ಧಪಡಿಸಿರುವ "ನನಗೆ ಯಾರು ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ," ಎಂಬ ಶೀರ್ಷಿಕೆಯ ನಾಮಫಲಕವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಮತ್ತು ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿರುತ್ತಾರೆ. ಸದನರಿ ಮನವಿ ಪತ್ರವು ಸ್ವಯಂವೇದ್ಯವಾಗಿದ್ದು, ಈ ಟಿಪ್ಪಣಿಯೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ," ಎಂದು ಆದೇಶ ಪ್ರತಿಯಲ್ಲಿ ಹೇಳಲಾಗಿದೆ.

English summary
"Don't give bribe, I don't want to become corrupt officer" to keep board at all govt offices orders Karnataka Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X