ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಆಜಾನ್ ಕುರಿತು ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಲೇ ನಿರ್ನಾಮವಾಗುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ಮಂಗಳೂರು,ಮಾರ್ಚ್13: ಚುನಾವಣೆ ಹತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಅಬ್ಬರ ಪ್ರಚಾರವನ್ನ ನಡೆಸುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದೀಗ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದದಲ್ಲಿ ವಿಜಯ ಸಂಕಲ್ಪ ಯಾತ್ರೆ ಯಲ್ಲಿ ಮಾಜಿ ಸಚಿವ ಈಶ್ವರಪ್ಪ ಭಾಷಣ ಸಂದರ್ಭದಲ್ಲಿ ಮಸೀದಿಯ ಆಜಾನ್ ಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ ಎಲ್ಲಿ ಹೋದ್ರು ಇದೊಂದು ತಲೆನೋವು ನನಗೆ, ಸುಪ್ರಿಂ ಕೋರ್ಟ್ ಆದೇಶ ಇದೆ ಇವತ್ತಲ್ಲಾ ನಾಳೆ ಇದು ಖತಂ ಆಗುತ್ತೆ ಅನುಮಾನ ಬೇಡ ಎಲ್ಲಾ ಧರ್ಮಕ್ಕೂ ಗೌರವ ಕೊಡಿ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.

ನಮ್ಮ ದೇವಸ್ಥಾನ ದಲ್ಲೂ ಪೂಜೆ ಮಾಡುತ್ತೇವೆ ಅಲ್ಲೂ ಶ್ಲೋಕ ಹೇಳ್ತೆವೆ, ಭಜನೆ ಮಾಡ್ತೇವೆ. ಅವರಿಗಿಂತ ಜಾಸ್ತಿ ಭಕ್ತಿ ಪ್ರಪಂಚದಲ್ಲಿ ಧರ್ಮವನ್ನು ಉಳಿಸುತ್ತಿರುವಂತ ದೇಶ ಭಾರತ ಮಾತ್ರ. ಮೈಕಲ್ಲಿ ಜೋರಾಗಿ ಕೂಗಿದ್ರೆ ಮಾತ್ರ ಅಲ್ಲಾನಿಗೆ ಹೇಳಿದ್ರೆ ಅವನಿಗೆ ಕಿವುಡಾ ಅಂತ ಹೇಳ್ಬೆಕಾಗುತ್ತೆ,ಆದಷ್ಟು ಬೇಗ ಈ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಹೇಳಿದರು.
ದೇಶದ ಪ್ರತಿಯೋಂದು ಕ್ಷೇತ್ರದಲ್ಲಿ ಅಭಿವೃದ್ದಿ ಆಗುತ್ತಿದೆ. ಪ್ರಧಾನಿ ಮೋದಿ ಮಂಡ್ಯದಲ್ಲಿ ಬಂದು ಮೈಸೂರು - ಬೆಂಗಳೂರು ವಿಶೇಷ ರಸ್ತೆಯನ್ನ ಉದ್ಘಾಟನೆ ಮಾಡಿದ್ದಾರೆ. ಇಡೀ ರಾಜ್ಯ ಸಂತೋಷ ಪಡುತ್ತಿದೆ 950 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರೆ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ ಹೇಳ್ತಾರೆ ಇದು ನಮ್ಮ ಕೂಸು ಅಂತ, ಬಿಜೆಪಿ ಸರಕಾರ ಮಾಡಿದ ಪ್ರತಿಯೊಂದು ಅಭಿವೃದ್ಧಿ ಕೆಲಸ ತಾವೇ ಮಾಡ್ಡಿದ್ದು ಅಂತ ಸಿದ್ದರಾಮಯ್ಯ ಹೇಳ್ತಾನೆ, ನಿಮ್ಮ ಮಕ್ಕಳು ನಿಮ್ಮ ಕೂಸು ಯಾರ್ದೋ ಮಕ್ಕಳು ನಿಮ್ಮ ಕೂಸು ಆಗಕ್ಕೆ ಆಗಲ್ಲ ಎಂದು ಕಿಡಿಕಾರಿದರು.

ಮೈಸೂರು - ಬೆಂಗಳೂರು ರಸ್ತೆಗೆ ಇವರು ಒಂದ್ ರೂಪಾಯಿ ಹಾಕಿಲ್ಲ. ಯಾಕೆ ಹೀಗೆ ಸುಮ್ಮನೆ ಅಪಪ್ರಚಾರ ಮಾಡುತ್ತೀರಿ, ಅಪ ಪ್ರಚಾರ ಮಾಡಿ ಮಾಡಿ ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಅಗಿದೆ. ಕರ್ನಾಟಕ ದಲ್ಲಿ ಮಾತ್ರ ಕಾಂಗ್ರೆಸ್ ಕುಟು ಕುಟು ಅಂತಾಯಿದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಜೀವ ಹೋಗುತ್ತೇ, ಕಾಂಗ್ರೆಸ್ ಕಾರ್ಯಕ್ರಮ ದಲ್ಲಿ 500 ರೂಪಾಯಿ ಕೊಟ್ಟು ಕರ್ಕೊಂಡು ಬರಪ್ಪಾ ಅಂತ ಸಿದ್ದರಾಮಯ್ಯ ಹೇಳುತ್ತಾರೆ.
ಸಿದ್ದರಾಮಯ್ಯ ಬಾಯ್ ಬಿಟ್ರೆ ಬರೀ ಸುಳ್ಳು ಮೋಸ. ಸಿದ್ದರಾಮಯ್ಯ ರನ್ನು ಯಾರೂ ನಂಬಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಯ್ತು. ಬಾದಾಮಿ ಬಿಟ್ಟು ಈಗ ಕೋಲಾರ ಅಂತೆ. ರಾಜ್ಯದ 224 ಕ್ಷೇತ್ರದಲ್ಲಿ ನೀವು ಎಲ್ಲೇ ನಿಂತ್ರು ಈ ಬಾರಿ ಸಿದ್ದರಾಮಯ್ಯ ಸೋಲುತ್ತಾರೆ ಬರೆದು ಕೊಡುತ್ತೇನೆ. ಸಿದ್ದರಾಮಯ್ಯ ಗೆ ರಾಷ್ಟ್ರ ಭಕ್ತರು ಬೇಡ . ಜಿನ್ನಾ ಸಂಸ್ಕೃತಿ ಯ ಜನ ಬೇಕು ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರು.
ನೀವು ಹೇಳಿ ನೋಡೋಣಾ ನಾನು ಮುಸ್ಲಿಮರ ಪರವಾಗಿ ಅಂತ ಪ್ರಣಾಳಿಕೆಯಲ್ಲಿ ಹೇಳಲಿ ನೋಡೋಣ. ಎಲ್ಲ ಮುಸ್ಲಿಂಮರ ರಕ್ಷಣೆ ಮಾಡುತ್ತೇವೆ ಹಿಂದೂ ಗಳ ಓಟ್ ಬೇಡ ಅಂತ? ನಾನ್ ಹೇಳುತ್ತೇನೆ ಮುಸ್ಲಿಮರ ಓಟ್ ನಮಗೆ ಬೇಡ ಹಿಂದೂ ಗಳ ಓಟಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಎಲ್ಲ ಮುಸ್ಲಿಮರು ದೇಶ ದ್ರೋಹಿಗಳೆಂದು ನಾನು ಕರೆಯಲ್ಲ ಇವ್ರು ಕದ್ದು ಮುಚ್ಚಿ ದೇವಸ್ಥಾನ ಕ್ಕೆ ಹೋಗುತ್ತಾರೆ ಹಣೆಗೆ ಕುಂಕುಮ ಇಡಲ್ಲ ಅಂತ ಹೇಳಿದರು. ಇತ್ತೀಚೆಗೆ ಚುನಾವಣೆ ಬಂದಾಗ ಡಬಲ್ ಕುಂಕುಮ ಹಾಕಲು ಆರಂಭಿಸಿದ್ದಾರೆ. ಈಗ ನಾನು ಹಿಂದೂ ಆಂತ ಹೇಳುತಿದ್ದಾರೆ . ನಾನು ಹಿಂದು ಅಂತ ಹೇಳಿದ್ರೆ ಬಾಯಲ್ಲಿ ಹುಳಾ ಬೀಳುತ್ತೆ. ರಾಜ್ಯದಲ್ಲಿ ಇವರ ಸರಕಾರ ಇರಬೇಕಾದ್ರೆ ಹಿಂದೂ ಯುವಕರ ಕಗ್ಗೊಲೆ ಯಾದವು. ನೀವು ಚಾಮುಂಡೇಶ್ವರಿಯಲ್ಲಿ ಸೋತು ಕಾಂಗ್ರೆಸ್ ನಿರ್ನಾಮ ಆಗಲು ಕೊಲೆಯಾದ ಹಿಂದೂ ಯುವಕರ ತಾಯಂದಿರ ಕಣ್ಣಿರಿನ ಶಾಪದಿಂದ ಕರ್ನಾಟಕ ದಲ್ಲಿ ಕಾಂಗ್ರೆಸ್ ನಿರ್ನಾಮ ಆಯ್ತು ಎಂದು ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications