ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳರಿಂದ ಹತ್ಯೆಯಾದ ಎಸ್‌ಐ ಜಗದೀಶ್ ಪರಿಚಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16 : ಬೈಕ್ ಕದ್ದು ಪರಾರಿಯಾಗುತ್ತಿದ್ದ ಅಪ್ಪ-ಮಗನನ್ನು ಹಿಡಿಯಲು ಹೋದ ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರನ್ನು ಹತ್ಯೆ ಮಾಡಲಾಗಿದೆ. ನೆಲಮಂಗಲದ ಗ್ರಾಫೈಟ್ ಫ್ಯಾಕ್ಟರಿ ಬಳಿ ಶುಕ್ರವಾರ ಈ ಘಟನೆ ನಡೆದಿದೆ.

'ಮನೆಗೆ ಊಟಕ್ಕೆ ಬರುತ್ತೇನೆ' ಎಂದು ಅಮ್ಮನಿಗೆ ಕರೆ ಮಾಡಿದ್ದ ಜಗದೀಶ್ (33) ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪ್ಪ-ಮಗ ಸೇರಿ ಡ್ರ್ಯಾಗರ್‌ನಿಂದ ಜಗದೀಶ್ ಅವರ ಎದೆಗೆ ಚುಚ್ಚಿ ಹತ್ಯೆ ಮಾಡಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಕಳ್ಳರನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಜಗದೀಶ್ ವೀರ ಮರಣವನ್ನಪ್ಪಿದ್ದಾರೆ. [ದೊಡ್ಡಬಳ್ಳಾಪುರ ಎಸ್ ಐ ಹತ್ಯೆ]

ಪೇದೆಯಾಗಿ ಪೊಲೀಸ್ ಇಲಾಖೆಗೆ ಸೇರಿದ್ದ ಜಗದೀಶ್ ಅವರು ಸೂಲಿಬೆಲೆ ಠಾಣೆಯಲ್ಲಿ ಕರ್ತವ್ಯವನ್ನು ಆರಂಭಿಸಿದ್ದರು. 2009ರಲ್ಲಿ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಜಗದೀಶ್ ಅವರ ಕಿರು ಪರಿಚಯ ಇಲ್ಲಿದೆ.

police

* 1982 ಫೆಬ್ರವರಿ 10ರಂದು ಜನನ
* ನೆಲಮಂಗಲ ತಾಲೂಕಿನ ಮಲ್ಲಾಪುರದವರು
* ಪೊಲೀಸ್ ಪೇದೆಯಾಗಿ ಇಲಾಖೆಗೆ ಸೇರ್ಪಡೆ
* ಸೂಲಿಬೆಲೆ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಣೆ
* 2009ರಲ್ಲಿ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಬರೆದು ಉತ್ತೀರ್ಣ
* 2012ರಲ್ಲಿ ಕೋಲಾರ ಮೂಲದ ರಮ್ಯಾ ಅವರೊಂದಿಗೆ ವಿವಾಹ
* ಜಗದೀಶ್, ರಮ್ಯಾ ದಂಪತಿಗೆ ಇಬ್ಬರು ಮಕ್ಕಳು
* ಪೀಣ್ಯ ದಾಸರಹಳ್ಳಿಯಲ್ಲಿ ವಾಸವಾಗಿದ್ದ ಜಗದೀಶ್

English summary
Doddaballapur police station sub inspector Jagadeesh (33) murdered On Friday, October 16th 2015. Here is a profile of Jagadeesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X