ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಬಳ್ಳಾಪುರ : ಠಾಣೆ ಆವರಣದಲ್ಲೇ ಪೇದೆ ಬಂಧನ!

|
Google Oneindia Kannada News

ದೊಡ್ಡಬಳ್ಳಾಪುರ, ಡಿ.10 : ಪೊಲೀಸ್ ಠಾಣೆ ಅವರಣದಲ್ಲಿಯೇ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಾಹನ ಅಪಘಾತ ಪ್ರಕರಣವನ್ನು ಇತ್ಯರ್ಥ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಪೊಲೀಸ್ ಪೇದೆ 3,500 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ದೊಡ್ಡಬಳ್ಳಾಪುರ ನಗರ ಠಾಣೆಯ ಕಾನ್ಸ್‌ಟೇಬಲ್ ಕೃಷ್ಣಮೂರ್ತಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಪೇದೆ. ಪೊಲೀಸ್ ಠಾಣೆ ಆವರಣದಲ್ಲಿಯೇ ಅಂಜನಮೂರ್ತಿ ಎಂಬುವವರಿಂದ ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ. [ಪೊಲೀಸ್ ಪೇದೆ ನೇಮಕಾತಿ : ಮತ್ತೆ ಪರೀಕ್ಷೆ]

money

ಅಂಜನಮೂರ್ತಿ ಅವರ ಬೈಕ್ ಕೆಲವು ದಿನಗಳ ಹಿಂದೆ ಅಪಘಾತಕ್ಕೀಡಾಗಿತ್ತು. ಈ ಬಗ್ಗೆ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನು ಇತ್ಯರ್ಥ ಮಾಡಿಕೊಡುವುದಾಗಿ ಮೊದಲು ಕೃಷ್ಣಮೂರ್ತಿ 5000 ರೂ.ಲಂಚ ಸ್ವೀಕರಿಸಿದ್ದರು.

ನಂತರ ಇನ್ನೂ 5000 ರೂ. ತೆಗೆದುಕೊಂಡು ಬರುವಂತೆ ಅಂಜನಮೂರ್ತಿಗೆ ತಿಳಿಸಿದ್ದರು. 3,500 ರೂ. ತೆಗೆದುಕೊಂಡು ಬಂದಿದ್ದ ಅವರು, ಅದನ್ನು ಠಾಣೆಯ ಅವರಣದಲ್ಲಿಯೇ ಕೃಷ್ಣಮೂರ್ತಿಗಳಿಗೆ ನೀಡುತ್ತಿದ್ದರು. ಈ ವೇಳೆ ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ದಿವಾಕರ್ ನೇತೃತ್ವದ ತಂಡ ದಾಳಿ ನಡೆಸಿ, ಬಂಧಿಸಿದೆ.

ದೂರು ನೀಡಿದ್ದರು : ಪೊಲೀಸ್ ಪೇದೆ ಕೃಷ್ಣಮೂರ್ತಿ ಎರಡನೇ ಬಾರಿ 500 ರೂ. ಕೇಳಿದಾಗ ಅಂಜನಮೂರ್ತಿ ಏಕೆ ಎಂದು ವಿಚಾರಿಸಿದ್ದರು. ಅದಕ್ಕೆ ಅವರು ದಂಡ, ವಕೀಲರಿಗೆ ಕೊಡಬೇಕು ಎಂದು ಹೇಳಿದ್ದರು. ಇದರಿಂದ ಅನುಮಾನಗೊಂಡ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.

English summary
Karnataka Lokayukta police arrested Doddaballapur police station constable Krishnamurthy for allegedly taking a bribe. According to a complaint filed by Anjanamurthy constable demanded Rs 10,000 bribe from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X