Sa Ra Govindu: ನಟ ದರ್ಶನ್‌ ಯಾರ ಆದರ್ಶಗಳನ್ನು ಪಾಲಿಸಬೇಕಿತ್ತು.?, ಸಾ.ರಾ.ಗೋವಿಂದು ಹೇಳಿದ್ದೇನು?

Sa Ra Govindu: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾನೆ. ಈ ಬಗ್ಗೆ ಈಗಾಗಲೇ ಹಲವರು ಸಿನಿ ತಾರೆಯರು, ರಾಜಕೀಯ ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇದೀಗ ನಿರ್ಮಾಪಕ ಸಾ.ರಾ.ಗೋವಿಂದು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ದರ್ಶನ್‌ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಲಾತಾಣಗಳಲ್ಲಿ ನಡೆಯುತ್ತಿವೆ. ಇನ್ನು ಫಿಲ್ಮ್‌ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿದ್ದು, ಸಿನಿಮಾ ರಂಗದಲ್ಲಿ ನಟ ದರ್ಶನ್ ಅವರು ನಡೆದುಬಂದ ಹಾದಿ, ಅವರ ಹಿಂದಿನ ವಿವಾದಗಳು, ಇದೀಗ ನಡೆದಿರುವ ಘಟನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

Do you know what did Sa Ra Govindu Say about actor Darshan

"ರಾಜ್‌​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಹಲವು ಮಹಾನ್ ನಟರ ಆದರ್ಶಗಳನ್ನು ನಟ ದರ್ಶನಗ್ ಪಾಲಬೆ ಮಾಡಬೇಕಿತ್ತು. ಅದೂ ಇಷ್ಟ ಇಲ್ಲ ಅಂದರೆ ಅವರ ತಂದೆಯ ಆದರ್ಶಗಳನ್ನಾದರೂ ಪಾಲನೆ ಮಾಡಬೇಕಿತ್ತು," ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಜುಲೈ 4ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸಮಯ ದೂಡಬೇಕಿದೆ. ಆ ಬಳಿಕವೂ ಅವರಿಗೆ ಜಾಮೀನು ಸಿಗುವುದು ಅನುಮಾನ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಏಕೆಂದರೆ ಈಗಾಗಲೇ ಪೊಲೀಸರು ಸುಮಾರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

"ದರ್ಶನ-ಪವಿತ್ರಾ" ಯಕ್ಷಗಾನಕ್ಕೂ ಎಂಟ್ರಿ: ದರ್ಶನ್‌, ಪವಿತ್ರಾ ಗೌಡ ವಿಚಾರ ಯಕ್ಷಗಾನಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋ ಸಹ ಸಖತ್‌ ಸದ್ದು ಮಾಡುತ್ತಿವೆ.

ಈ ಪ್ರಕರಣ ಬರೀ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಹರಡಿಬಿಟ್ಟಿದೆ. ಸುದ್ದಿ ಮಾಧ್ಯಮ, ಟ್ರೋಲ್‌ ಪೇಜ್‌, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯದ್ದೇ ಚರ್ಚೆಯಾಗುತ್ತಿದದೆ. ಅಷ್ಟೇ ಅಲ್ಲದೆ ಇದೀಗ ನಟ ದರ್ಶನ್‌ ಮತ್ತು ಪವಿತ್ರಾ ವಿಚಾರ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಈ ವಿಡಿಯೋದಲ್ಲೆ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

‌ಯಕ್ಷಗಾನ ಅಂದರೆ ಅದರದ್ದೇ ಆದ ಪ್ರಮುಖ ಶೈಲಿಗಳಿವೆ ಅಲ್ಲದೆ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಯಕ್ಷಗಾನ ಪ್ರಸಂಗದಲ್ಲಿ ಕೆಲವು ಬಾರಿ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳನ್ನು ಕೂಡ ಮಾಡಲಾಗುತ್ತದೆ. ಈ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುತ್ತವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಯಕ್ಷಗಾನ ಪ್ರಸಂಗವೊಂದರಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಸಹ ಪ್ರಸ್ತಾಪ ಆಗಿತ್ತು. ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ತುಳು ಯಕ್ಷಗಾನ ಬಯಲಾಟವೊಂದರಲ್ಲಿ ರಂಗಸ್ಥಳದಲ್ಲಿ ಹಾಸ್ಯಕಲಾವಿದರ ನಡುವೆ ನಡೆದ ಸಂಭಾಷಣೆಯಲ್ಲಿ ದರ್ಶನ್‌-ಪವಿತ್ರಾ ಹೆಸರು ಪ್ರಸ್ತಾಪ ಆಗಿದ್ದು, ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನು ಈ ವಿಡಿಯೋವನ್ನು ಸ್ವಸ್ತಿಕ್‌ ಕನ್ಯಾಡಿ (@swasthik_kanyadi) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, "ಯಕ್ಷಗಾನದಲ್ಲಿ ದರ್ಶನ್-ಪವಿತ್ರ ಮ್ಯಾಟರ್‌" ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇನ್ನು ಈ ಯಕ್ಷಗಾನ ಬಯಲಾಟದ ವಿಡಿಯೋದಲ್ಲಿ ಹಾಸ್ಯಕಲಾವಿದರು ದರ್ಶನ್‌ ಮತ್ತು ಪವಿತ್ರ ಹೆಸರನ್ನು ಹೇಳಿದ ದೃಶ್ಯವನ್ನು ಕಾಣಬಹುದು. ಅದರಲ್ಲಿ ಒಬ್ಬ ಕಲಾವಿದ ಶನಿವಾರ ದರ್ಶನ್‌ ಬೇಕೇ ಬೇಕು ಎಂದು ಹೇಳುತ್ತಾರೆ. ಆ ವೇಳೆ ದರ್ಶನ್‌ ಬೇಡ, ದರ್ಶನದ ವ್ಯವಸ್ಥೆ ಮಾಡಿದರೆ, ನಾವು ಸಹ ಒಳಗೆ ಇರಬೇಕಾಗುತ್ತದೆ. ದರ್ಶನವೂ ಬೇಡ.. ಪವಿತ್ರವೂ ಬೇಡ ಅಂತಾ ಹೇಳುವ ಹಾಸ್ಯ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹಾಸ್ಯಮಯ ದೃಶ್ಯ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+