ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಡಾ.ಮಂಜುನಾಥ್ ಗೆಲುವಿಗೆ ಕಾರಣವಾದ ಆ ಮೂರು ಅಂಶಗಳು ಯಾವುವು ಗೊತ್ತಾ?
ಬಹು ನಿರೀಕ್ಷಿತ ಲೋಕಸಭಾ ಚುನಾವಣೆಗಳು ಮುಗಿದಿವೆ. ಸೋತ ಅಭ್ಯರ್ಥಿಗಳ ಆತ್ಮಾವಲೋಕನ ಆರಂಭವಾಗಿದೆ. ಗೆದ್ದ ಅಭ್ಯರ್ಥಿ ಸೆಲೆಬ್ರಿಷನ್ ಜೋರಾಗಿದೆ. ದೇಶದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿ ಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ತಾನು ಅಂದುಕೊಂಡ ಸಾಧನೆ ಮಾಡದೆ ಇರುವು ನೋವು ಎನ್‌ಡಿಎ ಮೈತ್ರಿ ಕೂಟದಲ್ಲಿ ಎದ್ದು ಕಾಣುತ್ತಿದೆ.
ಕರ್ನಾಟಕದಲ್ಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಕೆಲವು ಕ್ಷೇತ್ರಗಳು ಜನರ ಚಿತ್ತ ಕದ್ದಿವೆ. ಅದರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿಎನ್ ಮಂಜುನಾಥ್ ಹಾಗೂ ಡಿಕೆ ಸುರೇಶ್ ಅವರ ನಡುವಿನ ಕಾಳಗ ಎಲ್ಲರನ್ನು ತನ್ನತ್ತ ಸೆಳೆದಿತ್ತು. ಡಿಕೆ ಸುರೇಶ್, ಮತ್ತೊಮ್ಮೆ ಸಂಸದರಾಗಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಮಂಜುನಾಥ್ ಅವರ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಗೆಲುವು ದಾಖಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಜನಪ್ರಿಯತೆಗೆ ಸಂದ ಜಯವಾಗಿದೆ. ಮಂಜುನಾಥ್, ಡಿಕೆ ಕೋಟೆಯಲ್ಲಿ ತಮ್ಮ ಗೆಲುವಿನ ಬಾವುಟವನ್ನು ಹಾರಿಸಿದ್ದಾರೆ. ಈ ಗೆಲುವು ನಿಶ್ಚಿತವಾಗಿ ಸುಲಭದ್ದಾಗಿರಲಿಲ್ಲ. ಆದರೆ, ಬಿಜೆಪಿ ಈ ಕ್ಷೇತ್ರದಲ್ಲಿ ಪೋಕಸ್ ಮಾಡಿ ರಣ ತಂತ್ರವನ್ನು ಹೆಣೆದಿತ್ತು. ಈ ಗೆಲುವಿಗೆ ಬಿಜೆಪಿ ಹಾಕಿಕೊಂಡ ಪ್ರತಿ ತಂತ್ರವನ್ನು ಬೇಧಿಸುವಲ್ಲಿ ಡಿಕೆ ಬ್ರದರ್ಸ್ ನಿಶ್ಚಿತವಾಗಿ ವಿಫಲರಾಗಿದ್ದಾರೆ.
ಗ್ರೌಂಡ್ ಲೇವೆಲ್ ವರ್ಕ್
ಅಷ್ಟಕ್ಕೂ ಈ ಗೆಲುವು ರಾತ್ರೋ ರಾತ್ರಿ ಸಿಕ್ಕಿದಲ್ಲ. ಅದಕ್ಕಾಗಿ ಬಿಜೆಪಿ ವರ್ಕ್ ಮಾಡಿದೆ. ಮೊದಲಿನಿಂದಲೂ ಗ್ರೌಂಡ್ ಲೇವೆಲ್ ವರ್ಕ್‌ಗೆ ಹೆಸರುವಾಸಿಯಾಗಿರುವ ಬಿಜೆಪಿ ಈ ಬಾರಿ ಇದನ್ನೇ ತನ್ನ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಡೋರ್ ಟು ಡೋರ್ ಕ್ಯಾಪೇನ್ ಮಾಡಿ ಜನರಿಗೆ ಹತ್ತಿರವಾಗಿದೆ. ಬೂತ್ ಮಟ್ಟದಲ್ಲಿಯೂ ಬಿಜೆಪಿ ವರ್ಕ್ ಕೈ ಹಿಡಿದಿದೆ. ವಕ್ಕಲಿಗ ಪ್ರಭಾಲ್ಯದ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಸೋಲು ಕಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಫೇಸ್ ವ್ಯಾಲ್ಯು ಮಂಜುನಾಥ್ ಅವರ ಕೈ ಹಿಡಿದಿದೆ.

ಡಾಕ್ಟರ್ ಕೈಹಿಡಿದ ಫ್ಯಾಕ್ಟರ್ಸ್
ಇನ್ನು ಈ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಫ್ಯಾಕ್ಟರ್‌ಗಳು ಕೈ ಹಿಡಿದಿವೆ. ಪ್ರಧಾನಿ ಮೋದಿ ಅವರ ಹತ್ತು ವರ್ಷದ ಟ್ರ್ಯಾಕ್ ರೆಕಾರ್ಡ್, ದೇವೇಗೌಡ ಅವರ ಜನಪ್ರೀಯತೆ ಹಾಗೂ ವೈದ್ಯರಾಗಿ ಡಾ.ಮಂಜುನಾಥ್ ಮಾಡಿದ ಸೇವೆಗೆ ಜನ ಮನ್ನಣೆ ನೀಡಿದ್ದಾರೆ.
ಈ ಸೋಲು ಡಿಕೆ ಶಿವಕುಮಾರ್ ಅವರ ಸಿಎಂ ಗದ್ದುಗೆಗೆ ಏರುವ ಕನಸನ್ನು ದೂರ ಸರಿಸಿದೆ. ತಮ್ಮದೇ ಪ್ರಭಾವ ಇರುವ ಕ್ಷೇತ್ರದಲ್ಲಿ ತಮ್ಮ ಸಹೋದರನನ್ನು ಗೆಲ್ಲಿಸಲು ಶಿವಕುಮಾರ್ ಅವರಿಗೆ ಸಾಧ್ಯ ಆಗದೆ ಇರುವುದು, ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.












Click it and Unblock the Notifications