Prajwal Revanna: ಅಂದು ಪ್ರಜ್ವಲ್ ರೇವಣ್ಣರ ರಾಜಕೀಯ ಎಂಟ್ರಿ ಹೇಗಿತ್ತು ಗೊತ್ತಾ..?

ಬೆಂಗಳೂರು, ಮೇ 10 : ರಾಜ್ಯವ್ಯಾಪಿ ಓಡಾಡುತ್ತಾ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಟಕ್ಕರ್ ನೀಡುತ್ತಿದ್ದ ಪ್ರಜ್ವಲ್ ರೇವಣ್ಣ ಜನ ಅಂದು ಕೊಂಡಂತೆ ಚಿಕ್ಕ ವಯಸ್ಸಿಗೆ ದೊಡ್ಡ ನಾಯಕನಾಗಿ ಬೆಳೆದಿದ್ದು ಇತಿಹಾಸ.. ಪ್ರಜ್ವಲ್ ರೇವಣ್ಣರ ರಾಜಕೀಯ ಎಂಟ್ರಿಯ ಆ ದಿನಗಳನ್ನು ಮೆಲುಕು ಹಾಕಿದರೆ ಒಂದಷ್ಟು ಅಚ್ಚರಿಯ ವಿಚಾರಗಳು ಹೊರಬರುತ್ತವೆ.

ರಾಜಕೀಯಕ್ಕೆ ಪ್ರಜ್ವಲ್ ರೇವಣ್ಣ ಎಂಟ್ರಿ ಕೊಟ್ಟಿದ್ದು, ಪಕ್ಷದಲ್ಲಿ ಆಶಾಭಾವನೆ ಮೂಡಿಸಿತ್ತು. 2017ರ ಸಮಯದಲ್ಲಿ ಪ್ರಜ್ವಲ್ ರೇವಣ್ಣ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರೆ. ಹುಣಸೂರಿನಿಂದ ಸ್ಪರ್ಧಿಸುತ್ತಾರೆ ಎಂಬೆಲ್ಲ ಮಾತುಗಳು ಆಗ ಕೇಳಿ ಬಂದಿದ್ದವು. ಆದರೆ ಅವರು ರಾಜ್ಯರಾಜಕಾರಣಕ್ಕಿಂತ ರಾಷ್ಟ್ರರಾಜಕಾರಣದತ್ತ ಮುಖ ಮಾಡಿದ್ದರು. ಜೆಡಿಎಸ್‌ನ ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಕಾ ಅನುಭವಿ ರಾಜಕಾರಣಿಯಂತೆ ಭಾಷಣ ಬಿಗಿಯುತ್ತಿದ್ದುದನ್ನು ನೋಡಿದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿತ್ತು.

Do You Know How Prajwal Revanna s Political Entry Was

2017ರಲ್ಲಿನ ಮಾತಿನ ವೈಖರಿ ಹೇಗಿತ್ತು?

ಹಿರಿಯ ನಾಯಕರೇ ಬೆಚ್ಚಿಬೀಳುವಂತೆ ಮಾತನಾಡುತ್ತಿರುವುದನ್ನು ನೋಡಿದ ಜನ ಮುಂದಿನ ದಿನಗಳಲ್ಲಿ ಪ್ರಮುಖ ನಾಯಕನಾಗಿ ಬೆಳೆಯುತ್ತಾರೆ ಎಂದುಕೊಂಡಿದ್ದರು. ಅಷ್ಟೇ ಅಲ್ಲದೆ ಜೆಡಿಎಸ್ ನಲ್ಲಿದ್ದ ಯುವ ನಾಯಕರ ಕೊರತೆಯನ್ನು ನೀಗಿಸುತ್ತಾರೆಂದು ಖುಷಿಪಟ್ಟಿದ್ದರು. ಅಷ್ಟೇ ಅಲ್ಲದೆ ಅವರಿಗೆ ರಾಜಕೀಯದಲ್ಲಿ ವಿಫುಲ ಅವಕಾಶವಿದ್ದು ಭರವಸೆಯ ನಾಯಕನಾಗಿ ಬೆಳೆಯುತ್ತಾರೆಂದು ನಂಬಿದ್ದರು.

2017ರಲ್ಲಿ ಮದ್ದೂರಿನಲ್ಲಿ ನಡೆದ ಯುವಕರ ನಡಿಗೆ ಕುಮಾರಣ್ಣನ ಕಡೆಗೆ ಎಂಬ ಯುವ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಆಡಿದ ಮಾತಿನ ಪರಿ ನೋಡಿ ಹಿರಿಯ ಮುಖಂಡರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಅವತ್ತು ಬಿಜೆಪಿಯನ್ನು ಕಟುಕಿದ ರೀತಿಯೂ ಅಚ್ಚರಿ ಮೂಡಿಸುವಂತಿತ್ತು. ಅವರ ಮಾತಿನ ವಾಗ್ಝರಿ ಹೇಗಿತ್ತೆಂದರೆ, ರಾಷ್ಟ್ರೀಕೃತ ಬ್ಯಾಂಕ್‌ಳಲ್ಲಿನ ರೈತರ ಸಾಲ ಮನ್ನಾ ಮಾಡದ, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡ ಬಿಜೆಪಿಯವರಿಗೆ ರೈತರನ್ನು ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅಬ್ಬರಿಸಿದ್ದರು.

ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶದ ಮಾತು

ಬಿಜೆಪಿಯಿಂದ ಸಂಸದರನ್ನು ಆರಿಸಿ ಕಳುಹಿಸಲಾಗಿದ್ದರೂ ಎರಡು ವರ್ಷಗಳಿಂದ ಬರಗಾಲ ಎದುರಾಗಿ ನೀರಿಗೆ ಸಂಕಷ್ಟ ಎದುರಾಗಿದ್ದಾಗ ಕಾವೇರಿ ನೀರನ್ನು ಉಳಿಸಿಕೊಡಲು ಇವರಿಂದ ಸಾಧ್ಯವಾಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸಲಾಗಲಿಲ್ಲ. ಇವರೆಲ್ಲಾ ರೈತ ಪರ ನಾಯಕರೇ?, ಇವರಿಂದ ರೈತರ ರಕ್ಷಣೆ ಸಾಧ್ಯವೇ? ಎಂದು ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

Do You Know How Prajwal Revanna s Political Entry Was

ಇನ್ನು ಕಾಂಗ್ರೆಸ್ ಪಕ್ಷವನ್ನು ಬಿಡದೆ ಟೀಕಿಸಿದ್ದ ಪ್ರಜ್ವಲ್ ರೇವಣ್ಣ ಅವತ್ತು ಕೂಡ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಬಾಸುಂಡೆ ಬರುವಂತೆ ಹೊಡೆದಿದೆ ಎಂದು ಆರೋಪ ಮಾಡಿದಲ್ಲದೆ, ರೈತರಿಗೆ ಶಕ್ತಿ ಕೊಡುವ ಭರವಸೆ ನೀಡಿದ್ದರು. ನಮಗೆ ರೈತರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಾಯಕ ಬೇಕು ಎಂದು ಅಬ್ಬರಿಸಿದ್ದರು.

ತೇಲಿ ಹೋದ ಪ್ರಜ್ವಲ್ ಮೇಲಿನ ಭರವಸೆಗಳು

ಅವತ್ತಿನ ಅವರ ಮಾತಿನ ವೈಖರಿ, ನಡೆ ನುಡಿ ಎಲ್ಲವೂ ಮುಂದೆ ನಾಯಕನಾಗಿ ಬೆಳೆಯುತ್ತಾನೆ. ಜೆಡಿಎಸ್ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಆಸರೆಯಾಗಿ ನಿಲ್ಲುತ್ತಾರೆ ಎಂದೆಲ್ಲ ಕನಸುಗಳನ್ನು ಜೆಡಿಎಸ್ ಕಾರ್ಯಕರು ಕಂಡಿದ್ದರು. ಅದಕ್ಕೆ ತಕ್ಕಂತೆ ಮಾತಿನಲ್ಲೇ ಮೋಡಿ ಮಾಡುವ ಕಲೆ ಹೊಂದಿದ್ದ ಪ್ರಜ್ವಲ್ ಪ್ರಬಲ ರಾಷ್ಟ್ರೀಯ ಪಕ್ಷಗಳ ಹಿರಿಯ ನಾಯಕರನ್ನೇ ಟೀಕೆ ಮಾಡಿ, ಆಡಳಿತ ಪಕ್ಷದ ವೈಫಲ್ಯಗಳನ್ನು ಬೊಟ್ಟು ಮಾಡಿ, ತಮ್ಮ ಪಕ್ಷದತ್ತ ಒಲವು ಗಳಿಸಿಕೊಳ್ಳುವ ಮೂಲಕ ಜೆಡಿಎಸ್ ನ ಐಕಾನ್ ಆಗಿ ಕಂಗೊಳಿಸಿದ್ದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದ ಅವರು 2019ರ ವೇಳೆಗೆ ಯುವ ನಾಯಕನಾಗಿ ಹೊರ ಹೊಮ್ಮಿದ್ದರು.

ಅವತ್ತು ಲೋಕಸಭಾ ಚುನಾವಣೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿತ್ತು. ಹೀಗಾಗಿ ಹಾಸನ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿತ್ತು. ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶಿಸಿದ್ದರು. ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಕಾಣಲೇ ಇಲ್ಲ. ಸಂಸದನಾಗಿ ಹಾಸನ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷಕ್ಕೆ ಭರವಸೆಯ ನಾಯಕ, ಯೂತ್ ಐಕಾನ್ ಬೆಳೆದು ಪಕ್ಷಕ್ಕೆ ಆಸರೆ ಆಗುತ್ತಾರೆಂದುಕೊಂಡಿದ್ದ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರ ನಿರೀಕ್ಷೆಗಳಿಗೆ ತಣ್ಣೀರು ಎರಚಿದಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+