Get Updates
Get notified of breaking news, exclusive insights, and must-see stories!

ಬಳ್ಳಾರಿ ಅಪಘಾತ ಪ್ರಕರಣ: ವಿವಾದದ ಕೇಂದ್ರಕ್ಕೆ ಬಂದ ಶರತ್ ಅಶೋಕ್ ಯಾರು?

Recommended Video

      ಶೋಕಿ ಮಾಡೋಕೆ ನಿಮ್ಮಪ್ಪನ ಮನೆ ಜಾಗಕ್ಕೆ ಹೋಗಿ | Bellary | R Ashok | Sharath | Rahul | Ravikanth | Sachin

      ಬೆಂಗಳೂರು, ಫೆ. 13: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇದೀಗ ರಾಜ್ಯಾದ್ಯಂತ ಚರ್ಚೆಯಲ್ಲಿದೆ.

      ಹಂಪಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತ ನಡೆದಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳುತ್ತಿರುವುದಕ್ಕೂ, ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೂ ಸಾಮ್ಯತೆ ಆಗುತ್ತಿಲ್ಲ. ಇದರಿಂದಾಗಿಯೆ ವಿವಾದ ಹತ್ತಿಕೊಂಡಿದೆ.

      ಈ ಮಧ್ಯೆ ಶರತ್ ಅಶೋಕ್ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ. ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರ ಪುತ್ರ ಶರತ್ ಎನ್ನುವ ಕಾರಣಕ್ಕೆ ಪ್ರಕರಣ ಗಮನ ಸೆಳೆಯುತ್ತಿದೆ. ಯಾರು ಈ ಶರತ್ ಅಶೋಕ್? ಇಲ್ಲಿದೆ ಪೂರ್ಣ ಮಾಹಿತಿ.

      ಸಚಿವ ಆರ್. ಅಶೋಕ್ ಅವರ ಹಿರಿಯ ಮಗ ಈ ಶರತ್!

      ಸಚಿವ ಆರ್. ಅಶೋಕ್ ಅವರ ಹಿರಿಯ ಮಗ ಈ ಶರತ್!

      ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಶರತ್ ಹಿರಿಯ ಪುತ್ರ, ಕಿರಿಯ ಪುತ್ರ ಅಜಯ್. ಈಗ ಪ್ರಕರಣದ ಕೇಂದ್ರಬಿಂದು ಆಗಿರುವ ಶರತ್ ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಇದ್ದು ಬಂದಿದ್ದಾರೆ. ಶರತ್ ಅವರು ಯಾವುದೇ ನಿರ್ದಿಷ್ಟ ಕೆಲಸ ಮಾಡುತ್ತಿಲ್ಲ ಅಥವಾ ಉದ್ಯಮವನ್ನು ನಡೆಸುತ್ತಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಬಿಐಎಲ್ ಸಮೀಪ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದರು. ಆದರೆ ಅದನ್ನು ಮುಚ್ಚಿದ್ದರು. ಇತ್ತಿಚಿನ ದಿನಗಳಲ್ಲಿ ರಾಜಕೀಯದಲ್ಲಿ ಬೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ.

      ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಶರತ್, ಹೆಣ್ಣುಮಗುವಿನ ತಂದೆ

      ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಶರತ್, ಹೆಣ್ಣುಮಗುವಿನ ತಂದೆ

      ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಚಿಕ್ಕಜಾಲದ ಶ್ರೀನಿವಾಸ ಎಂಬುವರ ಪುತ್ರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಶರತ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಶರತ್ ದಂಪತಿಗೆ ಹೆಣ್ಣು ಮಗುವಿದೆ. ಇದೀಗ ಅಪಘಾತಕ್ಕೀಡಾಗಿರುವ ಐಷಾರಾಮಿ ಕಾರು ನ್ಯಾಷನಲ್ ಪಬ್ಲಿಕ್ ಸ್ಕೂಲ್ಗೆ ಸೇರಿದ್ದು ಎಂಬ ಮಾಹಿತಿಯಿದೆ.

      ಪದ್ಮನಾಭನಗರ, ಜಯನಗರದಲ್ಲಿ ಹುಟ್ಟುಹಬ್ಬ ಆಚರಣೆ

      ಪದ್ಮನಾಭನಗರ, ಜಯನಗರದಲ್ಲಿ ಹುಟ್ಟುಹಬ್ಬ ಆಚರಣೆ

      ಫೆಬ್ರವರಿ 5 ಶರತ್ ಅವರ ಜನ್ಮದಿನವಿತ್ತು. ಅದೇ ದಿನ ಪದ್ಮನಾಭನಗರ, ಜಯನಗರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯರ್ತರ ಸಮ್ಮುಖದಲ್ಲಿ ಶರತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೇ ದಿನ ಸ್ನೇಹಿತರಿಗೆ ಜಾಲಹಳ್ಳಿ ತೋಟದ ಮನೆಯಲ್ಲಿ ಔತಣಕೂಟ ಸಹ ಏರ್ಪಡಿಸಿದ್ದರು. ಹುಟ್ಟುಹಬ್ಬ ಸಂಭ್ರಮ ಮುಗಿಸಿದ ಬಳಿಕ ಅವರು ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಹೋಗಿರುವ ಸಾಧ್ಯತೆಗಳಿವೆ.

      ಕಾರಿನಲ್ಲಿ ಇದ್ದಿದ್ದು ಶರತ್ ಅಶೋಕ್ ಅವರ ಆತ್ಮೀಯ ಸ್ನೇಹಿತರು

      ಕಾರಿನಲ್ಲಿ ಇದ್ದಿದ್ದು ಶರತ್ ಅಶೋಕ್ ಅವರ ಆತ್ಮೀಯ ಸ್ನೇಹಿತರು

      ಸೋಮವಾರ (ಫೆಬ್ರವರಿ 10) ನಡೆದ ಅಪಘಾತದಲ್ಲಿ ಗಾಯಗೊಂಡಿರುವ ರತನ್, ರಾಕೇಶ್ ಹಾಗೂ ವರುಣ್ ಮೂವರು ಶರತ್ ಸ್ನೇಹಿತರೆ ಎನ್ನಲಾಗುತ್ತಿದೆ. ಜೊತೆಗೆ ಅಪಘಾತದಲ್ಲಿ ಮೃತಪಟ್ಟಿರುವ ಸಚಿನ್ ಕೂಡ ಶರತ್ ಅಶೋಕ್ ಅವರ ಆತ್ಮೀಯ ಸ್ನೇಹಿತ. ಮೃತ ಸಚಿನ್ ಈ ಮೊದಲು ಜಾಲಹಳ್ಳಿಯಲ್ಲಿಯೆ ವಾಸವಾಗಿದ್ದರು. ಇತ್ತಿಚಿಗೆ ಜಾಲಹಳ್ಳಿಯಿಂದ ಮನೆಯನ್ನು ಬದಲಿಸಿದ್ದರು. ಅಪಘಾತವಾದ ಕಾರನ್ನು ಓಡಿಸಿದ್ದು ಶರತ್, ಅವರು ಅಂದು ಕಾರಿನಲ್ಲಿದ್ದರು ಎಂದು ಕೆಲವು ಸ್ಥಳೀಯರು ಹೇಳಿದ್ದಾರೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಒಟ್ಟಾರೆ ತಮ್ಮದಲ್ಲದ ತಪ್ಪಿಗೆ ಕಂದಾಯ ಸಚಿವ ಆರ್. ಅಶೋಕ್ ಇದೀಗ ವಿವಾದಕ್ಕೆ ಈಡಾಗಿದ್ದಾರೆ. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದಂತೆ ರಾಜಕಾಣ ಮಾಡಿಕೊಂಡು ಬಂದಿದ್ದ ಅಶೋಕ್, 'ನಿಷ್ಪಕ್ಷಪಾತದ ತನಿಖೆ ನಡೆಯಲಿ' ಎಂದೇ ಹೇಳಿಕೆ ಕೊಟ್ಟಿದ್ದಾರೆ ಜೊತೆಗೆ 'ತಮ್ಮ ಮಗ ಕಾರಿನಲ್ಲಿರಲಿಲ್ಲವೆಂದೂ' ಹೇಳಿದ್ದಾರೆ. ತನಿಖೆಯೇ ಸತ್ಯವನ್ನು ಹೊರಗೆಡವಬೇಕಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+