ಬಿಜೆಪಿ ಸುಳ್ಳಿನ ಯುನಿವರ್ಸಿಟಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ
ಹುಬ್ಬಳ್ಳಿ,ಜನವರಿ 2: ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಬಿಜೆಪಿ ಬರೀ ಸುಳ್ಳು ಹೇಳುತಿದ್ದು, ಇದೊಂದು ಸುಳ್ಳಿನ ಯುನಿವರ್ಸಿಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸೋಮವಾರ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಆವರಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು, ರಾಜ್ಯದ ಜನರಿಗೆ ಹಾಗೂ ಎಲ್ಲಾ ಪಕ್ಷದವರಿಗೂ ಒಳ್ಳೆಯದಾಗಲಿ, ಅಧಿಕಾರ ನಮಗೆ ಸಿಗಲಿ, ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡಲಿದೆ ಎಂದರು, ಇನ್ನೂ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಯಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡುತಿದ್ದು ಇದನ್ನು ಭಾರತೀಯ ಜನತಾ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತಿದ್ದು ಮೊದಲಿನಿಂದಲೂ ಇದನ್ನೇ ಅವರು ಮಾಡಿಕೊಂಡು ಬಂದಿದ್ದಾರೆ ಎಂದರು.
ಇಂದು (ಸೋಮವಾರ) ಹುಬ್ಬಳ್ಳಿಯಲ್ಲಿ ಸಂಜೆ ಕಾಂಗ್ರೆಸ್ ಪಕ್ಷದಿಂದ ಬೃಹತ್ ಸಮಾವೇಶ ನಡೆಯಲಿದ್ದು ಮಹದಾಯಿಗಾಗಿ ಜಲ- ಜನ ಆಂದೋಲನಲ್ಲಿ ಉತ್ತರ ಕೊಡುತ್ತೇವೆ. ಮಹದಾಯಿ ಯೋಜನೆ ಜಾರಿಯಲ್ಲಿ ಡಿಪಿಆರ್ ಅನುಮತಿ ಪತ್ರ ತೋರಿಸಿದ್ದು ಇದರಲ್ಲಿ ಯಾವುದೇ ದಿನಾಂಕ ಇಲ್ಲ ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಮೂರು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದರು ಯಾವುದೇ ಕೆಲಸ ಮಾಡಿಲ್ಲ ಈಗ ಮಹದಾಯಿ ಯೋಜನೆ ಜಾರಿಗೆ ಮುಂದಾಗಿದ್ದು ಬರೀ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮಹದಾಯಿ ಯೋಜನೆ ಜಾರಿಗೆ ಅನೇಕ ರೀತಿಯಾಗಿ ಹೋರಾಟ ನಡೆಸುತಿದ್ದು ಎಚ್.ಕೆ. ಪಾಟೀಲ್ ಹಾಗೂ ಅಂದು ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ ಅವರ ಕಾಲದಿಂದಲೂ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಈಗ ಕೇಂದ್ರದ ಮೇಲೆ ಕೈ ಮಾಡುತಿದ್ದ 26 ಲೋಕಸಭಾ ಸದಸ್ಯರು ಇದ್ದು ಭಾರತೀಯ ಜನತಾ ಪಕ್ಷದವರು ಒಂದು ದಿನ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಮಾತನಾಡಲ್ಲಿ ಎಂದರು.
ಮಲಪ್ರಭಾ ಜಲಾನಯನ ಪ್ರದೇಶದ ರೈತರಿಗೆ ಬಿಜೆಪಿಯವರು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆ ನೀಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಗೋವಾ ಸರ್ಕಾರದ ಸುಳ್ಳು ಪತ್ರ ತೋರಿಸಿ, ದ್ರೋಹ ಮಾಡಿದ್ದರು. 2018 ರಿಂದ ಇತ್ತೀಚಿನ ದಿನಗಳವರೆಗೆ ಬಿಜೆಪಿ ಏನೂ ಮಾಡಿಲ್ಲ. ನವೆಂಬರ್‌ನಲ್ಲಿಯೇ ಬಿಜೆಪಿಯವರು ಡಿಪಿಆರ್ ಸಲ್ಲಿಕೆ ಮಾಡಿದ್ದೇವೆ ಎಂದು ಕಾಗದ ತೋರಿಸುತ್ತಿದ್ದಾರೆ. ಕಾಂಗ್ರೆಸ್‌ನ ಮಹದಾಯಿ ಹೋರಾಟ ಸಮಾವೇಶದ ಬಗ್ಗೆ ಗೊತ್ತಾದ ಮೇಲೆ ಈ ಡಿಪಿಆರ್ ತೋರಿಸಿದ್ದಾರೆ ಎಂದು ಬಿಜೆಪಿ ನಡೆಯನ್ನು ಟೀಕಿಸುತ್ತಿದ್ದಾರೆ.

ಮುಗ್ದ ರೈತರನ್ನು ಮೋಸ ಮಾಡಲಾಗುತ್ತಿದೆ. ಡಿಪಿಆರ್‌ನ ಯಾವುದೇ ಪುಟದಲ್ಲಿ ದಿನಾಂಕ ಇಲ್ಲ, ಡಿಪಿಆರ್‌ಗೆ ಅನುಮೋದನೆ ಅನ್ನೋದು ನಿರ್ಗತಿಕರ ಕೂಸಾಗಿದೆ. ಕಳಸಾ ಕಾಮಗಾರಿಯದ್ದು ಈ ಹಿಂದೆಯೇ ಎಲ್ಲಾ ಕ್ಲಿಯರೆನ್ಸ್ ಆಗಿದೆ. ಬಂಡೂರಿ ಕಾಮಗಾರಿಯ ಕ್ಲಿಯರೆನ್ಸ್ ತೆಗದುಕೊಂಡು ಬನ್ನಿ ಎಂದು ಸಮಾವೇಶದ ಮೂಲಕ ಬಿಜೆಪಿ ಸರ್ಕಾರಕ್ಕೆ ಉತ್ತರ ಕೊಡುತ್ತೇವೆ ಎಂದರು.












Click it and Unblock the Notifications