ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಕದನದ ಸವಾಲು ಹಾಕಿದ್ದ ಡಿಕೆ ಶಿವಕುಮಾರ್ ಈಗ ಜೈಲಿನಲ್ಲಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಆಗಷ್ಟೇ 17 ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಲು ಆರಂಭಿಸಿತ್ತು.

ಗೋಕಾಕ್ ಕ್ಷೇತ್ರದ ಉಪಚುನಾವಣೆ: ಕಣದಲ್ಲಿ ಅಚ್ಚರಿಯ ಹೆಸರುಗೋಕಾಕ್ ಕ್ಷೇತ್ರದ ಉಪಚುನಾವಣೆ: ಕಣದಲ್ಲಿ ಅಚ್ಚರಿಯ ಹೆಸರು

ಅಷ್ಟರೊಳಗೆ ಅವರನ್ನು ಅನರ್ಹ ಶಾಸಕರೆಂದು ಘೋಷಣೆಯನ್ನೂ ಮಾಡಲಾಗಿತ್ತು. ಆಗ ನಿಮ್ಮನ್ನು ಉಪಚುನಾವಣೆಯ ರಣರಂಗದಲ್ಲಿ ನೋಡಿಕೊಳ್ಳುತ್ತೇನೆ ಎಂದು ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿಗೆ ಸವಾಲಾಕಿದ್ದರು. ಆದರೆ ಈಗ ಅವರೇ ಜೈಲಿನಲ್ಲಿದ್ದಾರೆ. ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪು ಸೆ.25 ರಂದು ಹೊರಬೀಳಲಿದೆ.

ರಮೇಶ್ ಜಾರಕಿಹೊಳಿ ಸೋಲಿಸಲು ಸಿದ್ದರಾಮಯ್ಯ ಪಣ

ರಮೇಶ್ ಜಾರಕಿಹೊಳಿ ಸೋಲಿಸಲು ಸಿದ್ದರಾಮಯ್ಯ ಪಣ

ಉಪ ಚುನಾವಣೆಯಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ರಮೇಶ್ ಜಾರಕಿಹೊಳಿಗೆ ಸವಾಲು ಹಾಕಿದ್ದ ಡಿಕೆ ಶಿವಕುಮಾರ್ ಇದೀಗ ಜೈಲಿನಲ್ಲಿದ್ದಾರೆ. ಜಾರಕಿಹೊಳಿಯನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೆ ಸತೀಶ್ ಜಾರಕಿಹೊಳಿ ಜೊತೆಯಾಗಿದ್ದಾರೆ.

ಸೋದರನ ವಿರುದ್ಧವೇ ತಿರುಗಿಬಿದ್ದ ಸತೀಶ್ ಜಾರಕಿಹೊಳಿ

ಸೋದರನ ವಿರುದ್ಧವೇ ತಿರುಗಿಬಿದ್ದ ಸತೀಶ್ ಜಾರಕಿಹೊಳಿ

ಪಕ್ಷ ತೊರೆದು ಸರ್ಕಾರ ಬೀಳಿಸಿದ್ದರಿಂದ ಸಹಜವಾಗಿ ರಮೇಶ್ ಜಾರಕಿಹೊಳಿ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಸೋದರನ ವಿರುದ್ಧ ಬಿರುಸಿನ ಪ್ರಚಾರದ ಪ್ಲಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯನ್ನ ಸೋಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿ ಹೊಳಿಯವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.

ಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸ

ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿಯೇ ಕಾರಣ ಎನ್ನುವ ನಂಬಿಕೆ

ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿಯೇ ಕಾರಣ ಎನ್ನುವ ನಂಬಿಕೆ

ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣ ಎಂದು ಡಿಕೆಶಿ ಬಹಿರಂಗವಾಗಿಯೇ ಹೇಳಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಗೋಕಾಕ್ ಅಖಾಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿ ಪರ ಕೈ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿಗೆ ಹೊಸ ಸವಾಲು

ರಮೇಶ್ ಜಾರಕಿಹೊಳಿಗೆ ಹೊಸ ಸವಾಲು

ಡಿಕೆ ಶಿವಕುಮಾರ್‌ಗೆ ಸವಾಲು ಹಾಕಿದ್ದ ರಮೇಶ್ ಜಾರಕಿಹೊಳಿಗೆ ಈಗ ಹೊಸ ಸವಾಲು ಎದುರಾಗಿದೆ. ಒಂದು ಕಡೆ ರಾಜಕೀಯ ಗುರು ಮತ್ತೊಂದು ಕಡೆ ಸಹೋದರ ಇಬ್ಬರ ಸವಾಲನ್ನ ಒಟ್ಟೊಟ್ಟಿಗೆ ರಮೇಶ್ ಜಾರಕಿಹೊಳಿ ಎದುರಿಸಬೇಕಾಗಿದೆ. ಎರಡೂ ಸವಾಲನ್ನ ಒಟ್ಟಿಗೆ ಎದುರಿಸಿ ಸಾಹುಕಾರ ಸೈ ಅನ್ನಿಸಿಕೊಳ್ಳುತ್ತಾರಾ ಅಥವಾ ಸೋತು ಸೋಲು ಒಪ್ಪಿಕೊಳ್ಳುತ್ತಾರಾ ಎನ್ನುವುದೇ ಸದ್ಯದ ಕುತೂಹಲವಾಗಿದೆ.

ಜನ ಬೆನ್ನ ಹಿಂದೆ ಇರುವವರೆಗೂ ನಾನು ಹೀರೋನೇ ಎಂದ ರಮೇಶ್ ಜಾರಕಿಹೊಳಿಜನ ಬೆನ್ನ ಹಿಂದೆ ಇರುವವರೆಗೂ ನಾನು ಹೀರೋನೇ ಎಂದ ರಮೇಶ್ ಜಾರಕಿಹೊಳಿ

English summary
DK Shivakumar Who Challenged The By-Election Is Now In Jail, By Election For 15 Constituencies on October 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X