ಯಾರಿಗೆ, ಎಲ್ಲಿ, ಹೇಗೆ ಉತ್ತರಿಸಬೇಕು ಗೊತ್ತಿದೆ: ಡಿಕೆ.ಶಿವಕುಮಾರ್
ಬೆಂಗಳೂರು, ಫೆಬ್ರವರಿ 02: ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಬೇತಾಳ ಸದ್ಯಕ್ಕೆ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಡಿ.ಕೆ.ಶಿ ಮತ್ತು ಕುಟುಂಬಕ್ಕೆ ಇಡಿ ಇಂದು ಸಮನ್ಸ್ ನೀಡಿದ್ದು ವಿಚಾರಣೆಗೆ ಬರುವಂತೆ ಹೇಳಿದೆ.
ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ನಡೆದ ದಾಳಿಯ ಬಗ್ಗೆ ಈ ತನಿಖೆಗೆ ಈ ನೊಟೀಸ್ ನೀಡಲಾಗಿದೆ. ಡಿಕೆಶಿ ದೆಹಲಿ ನಿವಾಸದಲ್ಲಿ ಹಣ ಮತ್ತು ಕೆಲವು ದಾಖಲೆಗಳು ದೊರೆತಿದ್ದವು ಎನ್ನಲಾಗಿತ್ತು.
ಸಮನ್ಸ್ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ಬರಬೇಕಿದ್ದ ಎಲ್ಲ ಸಮನ್ಸ್, ನೊಟೀಸ್‌ಗಳು ಬಂದಿವೆ. ನಾನು ಇಲ್ಲಿ ಏನೂ ಮಾತನಾಡುವುದಿಲ್ಲ, ಯಾರಿಗೆ, ಎಲ್ಲಿ, ಹೇಗೆ, ಉತ್ತರಿಸಬೇಕೋ ಹಾಗೆಯೇ ಉತ್ತರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದಲೇ ನುಡಿದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಾವುದೇ ಸಮಸ್ಯೆ ಬರಲಿ ಡಿ.ಕೆ.ಶಿವಕುಮಾರ್ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದಿದ್ದಾರೆ . ಅಲ್ಲದೆ ಬಿಜೆಪಿಯು ಐಟಿ, ಇಡಿ, ಸಿಬಿಐ ಬಳಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.












Click it and Unblock the Notifications