ಸಂಪುಟ ವಿಸ್ತರಣೆ ಚರ್ಚೆ ಸಭೆಗೆ ನನ್ನ ಆಹ್ವಾನಿಸಿಲ್ಲ: ಡಿಕೆಶಿ ಹೊಸ ಬಾಂಬ್

Recommended Video

      ಡಿ ಕೆ ಶಿವಕುಮಾರ್ ಹಾಕಿದ ಹೊಸ ಬಾಂಬ್ ಏನು? | Oneindia Kannada

      ಬೆಂಗಳೂರು, ಜೂನ್ 1: ಸಚಿವ ಸಂಪುಟ ವಿಸ್ತರಣೆ ಸಭೆಗೆ ನನ್ನು ಆಹ್ವಾನಿಸಿಲ್ಲ, ಕರೆದರೆ ನಾನು ಹೋಗುತ್ತೇನೆ, ನನಗೆ ಸಚಿವ ಸ್ಥಾನ ಕೊಟ್ಟರೂ ಒಂದೇ ಬಿಟ್ಟರೂ ಒಂದೇ ಎಲ್ಲಾ 78 ಶಾಸಕರಂತೆ ನಾನೂ ಕೂಡ ಒಬ್ಬ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

      ಶುಕ್ರವಾರ ಸದಾಶಿವನಗರದ ತಮ್ಮ ನಿವಾಸಲ್ಲಿ ಮಾತನಾಡಿದ ಅವರು, ನನ್ನ ಮ್ಯಾಚ್ ವಿಭಿನ್ನವಾಗಿದೆ. ನನ್ನ ಟಾರ್ಗೆಟ್ ಕೂಡ, ರೇವಣ್ಣ ಅಂತಹ ಹಿರಿಯರಿದ್ದಾರೆ, ಯಾಕೆ ಅವರ ಜತೆಗೆ ನನ್ನನ್ನು ಸೇರಿಸುತ್ತೀರಾ, ನನಗೆ ಅಧಿಕಾರ ಕೊಟ್ಟರೂ ಒಂದೇ ಬಿಟ್ಟರೂ ಒಂದೆ, 78 ಜನರಲ್ಲಿ ನಾನೂ ಕೂಡ ಒಬ್ಬ ಬೇರೆಯವರಿಗೆ ನನ್ನನ್ನು ಹೋಲಿಕೆ ಮಾಡುವುದು ಒಳ್ಳೆಯದಲ್ಲ ಎಂದು ಗುಡುಗಿದ್ದಾರೆ.

      ಸಿಬಿಐ ದಾಳಿ ನಡೆದವರ ಬಳಿ ಡಿಕೆ ಸುರೇಶ್‌ ಹೆಸರು ಹೇಳಿ ಎಂದು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಗುರುವಾರ ಸಾಕಷ್ಟು ಕಡೆಗಳಲ್ಲಿ ಸಿಬಿಐ ದಾಳಿಯಾಗಿದೆ. ದಾಳಿಯಾದವರ ಬಳಿ ಅಧಿಕಾರಿಗಳು ತೆರಳು ಒತ್ತಾಯಪೂರ್ವಕವಾಗಿ ಡಿಕೆ ಸುರೇಶ್‌ ಅವರ ಹೆಸರನ್ನು ಹೇಳಲು ಒತ್ತಾಯಿಸುತ್ತಿದ್ದಾರೆ.

      DK Shivakumar says I will play different match!

      ನನ್ನ ತಮ್ಮನನ್ನು ಸಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಬ್ಬ ಸಂಸದರನ್ನು ಕುಣಿಕೆಗೆ ಸಿಲುಕಿಸಲು ಮಾಡುತ್ತಿರುವ ಪ್ರಯತ್ನ ಸರಿಯಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಪ್ರೀತಿ ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಯಾವುದಕ್ಕೂ ನಾನು ಬಗ್ಗುವುದಿಲ್ಲ. ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+