ಡಿಸಿಎಂ ಸ್ಥಾನಕ್ಕೆ ಹೆಚ್ಚಿದ ಬೇಡಿಕೆ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದು, ಹೀಗೆ ಶತಕ ಬಾರಿಸಿದ ಸಂಭ್ರಮದಲ್ಲಿ ಇರುವಾಗಲೇ ಕಾವೇರಿ ಕಾವು ಜೋರಾಗಿದೆ. ಇದು ಸಾಲದು ಎಂಬಂತೆ ಈಗ ಡಿಸಿಎಂ ಕಿತ್ತಾಟ ಬೇರೆ 'ಕೈ' ನಾಯಕರಲ್ಲಿ ಹೊಸ ಟೆನ್ಷನ್ ಹುಟ್ಟುಹಾಕಿದೆ. 3 ಡಿಸಿಎಂ ಬೇಕು ಅಂತಾ ಒಬ್ಬರು, 6 ಡಿಸಿಎಂ ಬೇಕು ಅಂತಾ ಮತ್ತೊಬ್ಬರು. ಹೀಗೆ ಡಿಸಿಎಂ ಪಟ್ಟಕ್ಕೆ ಬೇಡಿಕೆ ಹೆಚ್ಚಾಗಿರುವಾಗ ಹಾಲಿ ಡಿಸಿಎಂ ಡಿಕೆಶಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಹೌದು, ಕರ್ನಾಟಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹುಮ್ಮಸ್ಸು ಕರಗಿ ಹೋಗುತ್ತಿದೆ. ಯಾಕೆ ಅಂದ್ರೆ ಕಾಂಗ್ರೆಸ್ ಒಳಗೆ ಎರಡು ಬಣವಿದ್ದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಪ್ತರ ಮಧ್ಯೆ ಫೈಟ್ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಆರೋಪಗಳಿಗೆ ಬಲ ನೀಡುವಂತೆ ಕಾಂಗ್ರೆಸ್ ಒಳಗೆ ಡಿಸಿಎಂ ಸ್ಥಾನಕ್ಕೆ ಕಿರಿಕ್ ಶುರುವಾಗಿದೆ. ಹಾಗೇ ಇದೆಲ್ಲ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನ ಕಟ್ಟಿಹಾಕುವ ತಂತ್ರ ಎಂಬ ಆರೋಪವೂ ಇದೆ. ಈಗ ಡಿಕೆಶಿ ಅವರು ಪಕ್ಷದ ಒಳಗಿನ ಡಿಸಿಎಂ ಕೂಗಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಆಸೆ ಪಡುವುದು ತಪ್ಪಲ್ಲ.. ಆದರೆ...
ಅಂದಹಾಗೆ ಕರ್ನಾಟಕದ ಕಾಂಗ್ರೆಸ್ ನಾಯಕರು, ಅದ್ರಲ್ಲೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರು ಡಿಸಿಎಂ ಪಟ್ಟಕ್ಕಾಗಿ ಬೇಡಿಕೆ ಇಡುತ್ತಿರುವ ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕ್ರಿಯೆ ಭಾರಿ ಕುತೂಹಲ ಕೆರಳಿಸಿದೆ. ಈಗ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಉತ್ತರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲರಿಗು ಆಸೆ ಇರುತ್ತದೆ. ಅವರಿಗೆ ಸ್ಪಂದಿಸಲು ಜನರಿದ್ದಾರೆ. ನನ್ನ ಪಕ್ಷದ ಹೈಕಮಾಂಡ್ & ಸಿಎಂ ತೀರ್ಮಾನಿಸಿ ನನಗೆ ಡಿಸಿಎಂ ಸ್ಥಾನ ನೀಡಿದ್ದು, ನನಗೆ ಅವರ ಮಾರ್ಗದರ್ಶನವಿದೆ ಎಂದು ಹೇಳಿದ್ದಾರೆ.
ಮೆರಿಟ್.. ಮೆರಿಟ್‌ನಲ್ಲಿ ಬಂದೋರಮ್ಮ!
ಈ ಮೂಲಕ ನನಗೆ ಡಿಸಿಎಂ ಸ್ಥಾನ ನೀಡಿದ್ದು ಯಾರೋ ಅಲ್ಲ, ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಎಂಬುದನ್ನ ಸ್ಪಷ್ಟವಾಗಿ ಹೇಳಿದ್ದಾರೆ ಡಿಸಿಎಂ. ಇದೇ ವೇಳೆ ತಮ್ಮ ರಾಜಕೀಯ ಇತಿಹಾಸವನ್ನೂ ಪ್ರಸ್ತಾಪ ಮಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, 1985 ರಿಂದಲೂ ನಾನು ರಾಜಕೀಯದಲ್ಲಿ ಇದ್ದು, ನೀವು ನನ್ನ ರಾಜಕೀಯ ದಾಖಲೆಯನ್ನು ನೋಡಿದ್ದೀರಿ. ನನ್ನ ಹೋರಾಟದ ಹಿನ್ನೆಲೆ ಕಾರಣ ಪಕ್ಷ ನನ್ನ ಈ ಸ್ಥಾನದಲ್ಲಿ ಕೂರುವಂತೆ ಮಾಡಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಪಕ್ಷಕ್ಕಾಗಿ ದುಡಿದಿದ್ದು ಹಾಗೂ ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ತಮಗೆ ಇರುವ ಅನುಭವದಿಂದ ಡಿಸಿಎಂ ಸ್ಥಾನ ಸಿಕ್ಕಿದೆ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಅಲ್ಲದೆ ಇದು ಪಕ್ಷದ ಒಳಗೆ ಎದ್ದಿರುವ ಡಿಸಿಎಂ ಕೂಗಿಗೆ ಪರೋಕ್ಷ ಎಚ್ಚರಿಕೆ ಎಂಬಂತೆಯು ಬಿಂಬಿಸಲಾಗುತ್ತಿದೆ. ಆದರೆ ಕರ್ನಾಟಕ ಕಾಂಗ್ರೆಸ್ ನಾಯಕರು ಇಷ್ಟಕ್ಕೇ ಸುಮ್ಮನಾಗ್ತಾರಾ? ಅಥವಾ ಡಿಸಿಎಂ ಸ್ಥಾನದ ಕೂಗು ಮತ್ತಷ್ಟು ಹೆಚ್ಚಾಗುತ್ತಾ? ಈಗಾಗಲೇ ಆರು ಡಿಸಿಎಂಗಳ ಡಿಮ್ಯಾಂಡ್ ಕೇಳಿಬರುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಹೇಗೆ ಪ್ರತಿಕ್ರಿಯೆ ನೀಡುತ್ತೆ? ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲು ಒಂದಷ್ಟು ದಿನ ಕಾದು ನೋಡಬೇಕಿದೆ.

ಒಟ್ನಲ್ಲಿ ಕಾಂಗ್ರೆಸ್ ಒಳಗೆ ಎದ್ದಿರುವ ಡಿಸಿಎಂ ಸ್ಥಾನದ ಸುನಾಮಿಗೆ ಅಂತ್ಯ ಕಾಣಿಸೋದಕ್ಕೆ ಸ್ವತಃ ಹಾಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ರಣತಂತ್ರ ಹೆಣೆದಂತೆ ಕಾಣಿಸುತ್ತಿದೆ. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೂಡ ಇದೇ ಅಸ್ತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿವೆ. ಅಲ್ಲದೆ ಬಿಜೆಪಿ & ಜೆಡಿಎಸ್ ನಡುವೆ ಮೈತ್ರಿ ಬೇರೆ ಫಿಕ್ಸ್ ಆಗಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಲೋಕಸಭೆ ಚುನಾವಣೆಗಾಗಿ ಸಿದ್ಧವಾಗ್ತಿರುವ ಕಾಂಗ್ರೆಸ್ ನಾಯಕರು ಮೊದಲು ಪಕ್ಷದ ಒಳಗಿನ ಬಿಗುವಿನ ವಾತಾವರಣ ತಣ್ಣಗಾಗಿಸಬೇಕಿದೆ.












Click it and Unblock the Notifications