ಗುಲಾಬಿ ಮಾರ್ಗ ಉದ್ಘಾಟನೆಗೆ ಮೋದಿ ಆಹ್ವಾನ: ಬಿಜೆಪಿಗೆ ಏನು ಸಂಬಂಧ? ಡಿಕೆ ಶಿವಕುಮಾರ್ ಖಡಕ್ ಪ್ರಶ್ನೆ

ಕನಕಪುರ: ನಮ್ಮ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಮೆಟ್ರೋ ಗುಲಾಬಿ ಮಾರ್ಗವನ್ನು ಉದ್ಘಾಟಿಸಲು ನವೆಂಬರ್ 13 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವರು ಪ್ರಧಾನಿಯನ್ನು ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಬಿಜೆಪಿಯವರಿಗೂ ಇದಕ್ಕೂ ಏನು ಸಂಬಂಧ? ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದರು.

ಕನಕಪುರದಲ್ಲಿ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಇದು ಜನರ ದುಡ್ಡು. ನಾವು ಸಾಲವನ್ನು ಪಡೆದು ಮೆಟ್ರೋ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆಲವು ವಿಚಾರಗಳನ್ನು 13 ರಂದು ಪ್ರಧಾನಿಗಳ ಮುಂದೆ ಮಂಡಿಸಲಿದ್ದೇನೆ ಎಂದು ಹೇಳಿದರು.

DK Shivakumar PM Modi Invited to Inaugurate Bengaluru Metro Pink Line DKS Questions BJP s Role

ರಾಹುಲ್ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣ

ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಪಿಸಿಸಿ ಅಧ್ಯಕ್ಷರನ್ನು ಹಾಗೂ ಸಿ ಎಲ್ ಪಿ ನಾಯಕರನ್ನು ಸಂಜೆ ಸಭೆಗೆ ಕರೆದಿದ್ದಾರೆ. ಒಂದೂವರೆ ಗಂಟೆಗಳ ಕಾಲ ಸಭೆ ನಡೆಯಲಿದ್ದು, ಹೀಗಾಗಿ ದೆಹಲಿಗೆ ತೆರಳುತ್ತಿದ್ದೇನೆ. ದೀಪಾವಳಿ ಹಬ್ಬವಿರುವುದರಿಂದ ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡುತ್ತಿಲ್ಲ ಎಂದು ಡಿ ಕೆ ಶಿವಕುಮಾರ್‌ ಹೇಳಿದರು.

ಕಬ್ಬು ಬೆಳೆಗಾರರ ಹೋರಾಟ ವಾಪಸ್ಸು

ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿರುವ ಬಗ್ಗೆ ಕೇಳಿದಾಗ ನಾವು ರೈತರಿಗೆ ಮನವಿ ಮಾಡಿದ್ದೆವು, ಇದರಲ್ಲಿ ಪ್ರತಿಷ್ಠೆ ಬೇಡ. ಇಂದು ಸಕ್ಕರೆ ಕಾರ್ಖಾನೆಗಳು ಹಾಗೂ ನಮ್ಮ ಸಚಿವರು ಕುಳಿತು ಚರ್ಚಿಸಿದ್ದಾರೆ. ಕೆಲವರು ಕಬ್ಬು ಅರೆಯಲು ಅನುಮತಿ ನೀಡಿ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮೊರೆಯನ್ನು ಹೋಗಿದ್ದಾರೆ. ಅದಕ್ಕೂ ಇಂದು ಅಫಿಡವಿಟ್ ಹಾಕಲಾಗುತ್ತಿದೆ ಎಂದರು.

ಪ್ರಧಾನಿಗಳ ಬಳಿ ಸಕ್ಕರೆ ಬೆಲೆ ನಿಗದಿ ಮಾಡುವ ಬಗ್ಗೆ ಪ್ರಸ್ತಾಪ

ಕೇಂದ್ರ ಸರ್ಕಾರದವರು ಸಕ್ಕರೆ ಬೆಲೆಯನ್ನು ನಿಗದಿ ಮಾಡಬೇಕು. ಈ ಬಗ್ಗೆಯೂ ಪ್ರಧಾನಿಗಳ ಬಳಿ ಪ್ರಸ್ತಾಪಿಸಿ ಪತ್ರವನ್ನು ಬರೆಯಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು.

ರೈತರಿಗೆ ಅಗೌರವ ತೋರಿಸಬಾರದು

ಸಮಸ್ಯೆ ಇತ್ಯರ್ಥವಾಗದಿದ್ದರೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸರ್ಕಾರವನ್ನು ಹೆದರಿಸುವುದು ಸರಿಯಲ್ಲ. ಸ್ವಲ್ಪ ಸೌಜನ್ಯತೆ ಇರಬೇಕು. ಏ ಬಾರೋ ಇಲ್ಲಿ ಎಂದು ಕರೆಯುವುದು ರೈತರಿಗೆ ಅಗೌರವವಾದಂತೆ. ಇಂಥದ್ದು ಆಗಬಾರದು ಎಂದು ಡಿ ಕೆ ಶಿವಕುಮಾರ್‌ ಹೇಳಿದರು. ಕನಕಪುರಕ್ಕೆ ಯಾವಾಗ ಬರುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಮೂರು ನಾಲ್ಕು ದಿನ ಬಿಟ್ಟು ಬರುತ್ತೇನೆ ಎಂದರು.

ಕೆ ವಿ ನಾರಾಯಣ ಅವರ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ

ಹಿರಿಯ ಸಾಹಿತಿಗಳು, ಭಾಷಾಶಾಸ್ತ್ರಜ್ಞ, ವಿಮರ್ಶಕರೂ ಹಾಗೂ ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷರಾದ ಕೆ ವಿ ನಾರಾಯಣ ಅವರ ನಿಧನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲ ಕನ್ನಡವನ್ನೇ ಉಸಿರಾಡಿದ ಹಿರಿಯರಾದ ಕೆ ವಿ ನಾರಾಯಣ ಅವರು ಕನ್ನಡ ಭಾಷೆಯ ಉಳಿವಿನ ಬಗ್ಗೆ, ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಅಕ್ಷರಗಳ ಮೂಲಕ ಕನ್ನಡ ಲೋಕವನ್ನು ಕಟ್ಟಿಕೊಟ್ಟವರು. ಅನೇಕ ಅನುವಾದಗಳ ಮೂಲಕ ಭಾಷೆಯ ಅಳಿವು- ಉಳಿವಿನ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದ್ದರು. ತಮ್ಮ ವಿದ್ವತ್ ಮೂಲಕ ಅಪರೂಪದ ವೈಚಾರಿಕ ಒಳನೋಟವನ್ನು ನೀಡಿದವರು. ಕನ್ನಡ, ಕನ್ನಡಿಗ, ಕರ್ನಾಟಕದ ಏಳಿಗೆಗೆ ಹಲವಾರು ಸಲಹೆ, ಸೂಚನೆಗಳು ಸೇರಿದಂತೆ ತಮ್ಮದೇ ಆದ ಆಲೋಚನಾ ಪರಂಪರೆ ಬೆಳೆಸಿದವರಲ್ಲಿ ಪ್ರಮುಖರು.

ಕರ್ನಾಟಕ ಏಕೀಕರಣವಾದ ನವೆಂಬರ್ ತಿಂಗಳಿನಲ್ಲೇ ಹಿರಿಯ ಸಾಹಿತಿಗಳನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಪಾರ ಶಿಷ್ಯವರ್ಗ, ಸಾಹಿತ್ಯ ಪ್ರೇಮಿಗಳು ಹಾಗೂ ಕುಟುಂಬವರ್ಗಕ್ಕೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿದೊರಕಲಿ ಎಂದು ಪ್ರಾರ್ಥಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+