ಚನ್ನಪಟ್ಟಣ ಟಿಕೆಟ್ ಬಯಸಿರುವ ಡಿಕೆಶಿ ಬಾವ ಶರತ್ ಚಂದ್ರ
ರಾಮನಗರ, ಮಾರ್ಚ್ 03: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿ ಶರತ್ ಚಂದ್ರ ಅರ್ಜಿ ಸಲ್ಲಿಸುವ ಮೂಲಕ ಚನ್ನಪಟ್ಟಣ ಕಾಂಗ್ರೆಸ್ ನಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದಾರೆ.
ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಚುನಾವಣಾ ವೀಕ್ಷಕರಾದ ಶಫಿ ಅಹಮ್ಮದ್ ಹಾಗೂ ಟಿ.ವಿಮಾರುತಿ ಅವರಿಗೆ ಶರತ್ ಚಂದ್ರ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು.

ಶರತ್ ಚಂದ್ರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರವರ ಬಾವ, ಡಿ.ಕೆ.ಶಿವಕುಮಾರ್ ಸಹೋದರಿಯ ಗಂಡನಾಗಿರುವ ಇವರು ಮೂಲತಃ ಚನ್ನಪಟ್ಟಣದ ನಿವಾಸಿಯಾಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಿಂದ ಏಕೈಕ ಅಭ್ಯರ್ಥಿಯಾಗಿ ಶರತ್ ಚಂದ್ರ ಅರ್ಜಿ ಸಲ್ಲಿಸಿದ್ರು. ಈ ವೇಳೆ ಶರತ್ ಚಂದ್ರಗೆ ಚನ್ನಪಟ್ಟಣ ಹಲವು ಕಾಂಗ್ರೆಸ್ ಮುಖಂಡರ ಸಾಥ್ ನೀಡಿದರು.

ಇನ್ನು ಕಾಂಗ್ರೆಸ್ ವೀಕ್ಷಕರಿಗೆ ಮಾಗಡಿಯಿಂದ ಇಬ್ಬರು ಮತ್ತು ರಾಮನಗರ ಕ್ಷೇತ್ರದಿಂದ ಮೂವರು ಮಂದಿ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮಾಗಡಿಯಿಂದ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕೊಡ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications