DK Vs HDK; ಪರ್ಸಂಟೇಜ್ ಗಿರಾಕಿ ಡಿಕೆಶಿಯವರೇ ಹೆಚ್‌ಡಿ ಕುಮಾರಸ್ವಾಮಿ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳಿವು!

ಬೆಂಗಳೂರು, ನವೆಂಬರ್ 20: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ 'ನೀವು ಕನಕಪುರದಲ್ಲಿ ಕಲ್ಲು ಬಂಡೆಗಳನ್ನು ಕರಗಿಸಿ, ನಿಮ್ಮ ಕುಟುಂಬದವರ ಹೆಸರಲ್ಲಿ ಅಕ್ರಮವಾಗಿ ಸಾವಿರಾರು ಕೋಟಿಗಳ ಆಸ್ತಿಯನ್ನು ರಾಕೆಟ್ ವೇಗದಲ್ಲಿ ಏರಿಕೆ ಮಾಡಿದ್ದೀರಿ. ಇದೇ ನಿಮ್ಮ ಸಾಧನೆ ಎಂದು ಎಚ್‌ಡಿ ಕುಮಾರಸ್ವಾಮಿ ಸಾಧನೆ ಕುರಿತು ಹೇಳಿದವರಿಗೆ ಜೆಡಿಎಸ್ ತಿರುಗೇಟು ನೀಡಿದೆ.

ಬುಧವಾರ ಟ್ವೀಟ್ ಮೂಲಕ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಎರಡು ಭಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಮಾಡಿದ ಸಾಧನೆಯನ್ನು ಜೆಡಿಎಸ್ ಪಟ್ಟಿ ಮೂಲಕ ವಿವರಿಸಿದೆ. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಾಧನೆ, ಮಾಡಿಕೊಂಡಿರುವ ಆಸ್ತಿ ಪ್ರಮಾಣದ ಮೇಲೆ ಚಾಲೆಂಜ್ ಮಾಡಿದೆ.

DK Shivakumar JDS Hits Back by Giving a List of HD Kumaraswamy s Contributions to Karnataka

ಮಿಸ್ಟರ್ ಡಿಕೆ ಶಿವಕುಮಾರ್ ಅವರೇ, ಎಚ್‌ಡಿ ಕುಮಾರಸ್ವಾಮಿ ಅವರು ಅಲ್ಪಾವಧಿಯಲ್ಲೇ ಮಾಡಿರುವ ಜನಪರ ಯೋಜನೆಗಳು ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳಾಗಿವೆ. ಸಾಕಷ್ಟು ಮೆಚ್ಚುಗೆ ಸಹ ಪಡೆದಿವೆ.

ಆದರೆ ನೀವು ಕನಕಪುರದಲ್ಲಿ ಕಲ್ಲು ಬಂಡೆಗಳನ್ನು ಕರಗಿಸಿ, ನಿಮ್ಮ ಕುಟುಂಬದವರ ಹೆಸರಲ್ಲಿ ಅಕ್ರಮವಾಗಿ ಸಾವಿರಾರು ಕೋಟಿಗಳ ಆಸ್ತಿಯನ್ನು ರಾಕೆಟ್ ವೇಗದಲ್ಲಿ ಏರಿಕೆ ಮಾಡಿರುವುದೇ ನಿಮ್ಮ ಸಾಧನೆ ಆಗಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನೀವು ಮಂತ್ರಿಯಾದಾಗ ನಿಮ್ಮ ಆಸ್ತಿ ಎಷ್ಟಿತ್ತು ? ಈಗ ಸಾವಿರಾರು ಕೋಟಿ ಜಾಸ್ತಿಯಾಗಿದೆ. ಅದರ ಬಗ್ಗೆ ಬಹಿರಂಗಪಡಿಸಿ? ಎಂದು ಜೆಡಿಎಸ್ ಸವಾಲು ಹಾಕಿದೆ.

ಮೈಕ್ ಮುಂದೆ ಶೋ ಭಾಷಣಗಳನ್ನು ಬಿಟ್ಟು ರಾಜ್ಯಕ್ಕೆ ಮತ್ತು ಜನರಿಗೆ ನಿಮ್ಮ ಕೊಡುಗೆ ಏನು ಜನತೆಗೆ ತಿಳಿಸಿ ಎಂದು ಡಿಕೆ ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ವಾಗ್ದಾಲಿ ನಡೆಸಿದೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ: ಜೆಡಿಎಸ್

ಬೆಂಗಳೂರು ಉಸ್ತುವಾರಿಗಳು, ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ತೇಪೆಯನ್ನಾದರೂ ಸರಿಯಾಗಿ ಹಾಕಿಸಬೇಕು. ಇಲ್ಲದ ಬಿಟ್ಟಿ ಬಿಲ್ಡಪ್ ಬಿಡಬೇಕು. ಕಲೆಕ್ಷನ್, ಪರ್ಸಂಟೇಜ್ ಗಿರಾಕಿ ಬಗ್ಗೆ ಪ್ರತಿ ದಿನ ಕೆಪಿಸಿಸಿ ಕಚೇರಿಯಲ್ಲೇ ಚರ್ಚೆ ನಡೆಯುತ್ತೆ. ಪರ್ಸಂಟೇಜ್ ಕಾಮಗಾರಿ ಮಿನಿಸ್ಟರ್! ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿತು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳು ಒಂದಾಗಿವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ ಅವರಿಗೆ ಪ್ರತಿ ಸ್ಪರ್ಧಿಯಾಗಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದಾರೆ. ಅಲ್ಲಿಂದ ಶುರುವಾದ ಆರೋಪ ಪ್ರತ್ಯಾರೋಪ ಮತದಾನ ಮುಗಿದರೂ ಮುಂದುವರಿದಿದೆ. ತಮ್ಮ ಮೇಲೆ ಮಾಡಿದ್ದ ಸಾಧನೆಯ ಆರೋಪಗಳಿಗೆ ಜೆಡಿಎಸ್ ತಿರುಗೇಟು ನೀಡಿದೆ.

ಕುಮಾರಸ್ವಾಮಿ ಸಾಧನೆಗಳ ಪಟ್ಟಿ ಕೊಟ್ಟ ಜೆಡಿಎಸ್

ರಾಜ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ಮಹಾನುಭಾವರಿಗೆ ಇಲ್ಲಿದೆ ನೋಟಿ ಪಟ್ಟಿ

* 2 ಬಾರಿ ರೈತರ ಸಾಲ ಮನ್ನಾ ಮಾಡಲಾಗಿದೆ

* ರೈತರನ್ನು ಋಣಮುಕ್ತಗೊಳಿಸುವ ಕಾಯ್ದೆ ಜಾರಿ

* ಸಾರಾಯಿ ನಿಷೇಧ

* ಲಾಟರಿ ನಿಷೇಧ

* ಸುವರ್ಣ ಸೌಧ ನಿರ್ಮಾಣ

* ಬೆಳಗಾವಿಯಲ್ಲಿ ಪ್ರಪ್ರಥಮ ಅಧಿವೇಶನ ನಡೆಸಿದ್ದು

* ಗ್ರಾಮ ವಾಸ್ತವ್ಯದ ರೂವಾರಿ

* ಜನತಾ ದರ್ಶನ

* ಸುವರ್ಣ ಗ್ರಾಮ ಯೋಜನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ ಧಾರವಾಡ ಹೈಕೋರ್ಟ್ ಗೆ ಶಂಕುಸ್ಥಾಪನೆ ನಮ್ಮ ಮೆಟ್ರೋಗೆ ಅಡಿಗಲ್ಲು

* ಬೀದಿ ಬದಿಯ ವ್ಯಾಪಾರಿಗಳಿಗಾಗಿ "ಬಡವರ ಬಂಧು" ಯೋಜನೆ

* ರಾಜ್ಯದಲ್ಲಿ 1000 ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ

* ಕೊಡಗಿನ ನೆರೆ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ, 800 ಕುಟುಂಬದ ಬದುಕಿಗೆ ಆಸರೆ.

* ರೈತ ಸಿರಿ ಯೋಜನೆ

* ಫೆರಿಫೆರಲ್ ರಿಂಗ್ ರೋಡ್

* ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ

* ಸಂಧ್ಯಾ ಸುರಕ್ಷಾ ಯೋಜನೆ

* ರೋಶಿಣಿ ಯೋಜನೆ

* ಮಾತೃಶ್ರೀ ಯೋಜನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+