ದೆಹಲಿಯಲ್ಲಿ ಲಡ್ಡು ಹಂಚಿದ ಡಿ.ಕೆ.ಶಿವಕುಮಾರ್ ಅಭಿಮಾನಿಗಳು
ಬೆಂಗಳೂರು, ಸೆಪ್ಟೆಂಬರ್ 13 : "ನಮ್ಮ ನಾಯಕನಿಗೆ ಇಂದು ಜಾಮೀನು ಸಿಗುತ್ತದೆ. ನಾವು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದೇವೆ. ಈ ಪ್ರಸಾದವನ್ನು ಅವರಿಗೆ ತಲುಪಿಸಿ" ಎಂದು ಡಿ. ಕೆ. ಶಿವಕುಮಾರ್ ಅಭಿಮಾನಿಗಳು ಪೊಲೀಸರನ್ನು ಒತ್ತಾಯಿಸಿದರು.
ಬೆಂಗಳೂರು ಹೊರವಲಯದ ಜಿಗಣಿಯಿಂದ ದೆಹಲಿಗೆ ಹೋಗಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಭಿಮಾನಿಗಳು ತುಘಲಕ್ ರೋಡ್ ಪೊಲೀಸ್ ಠಾಣೆ ಮುಂದೆ ತಿರುಪತಿ ಲಾಡು ಹಂಚಿಕೆ ಮಾಡಿದರು. ಲಾಡನ್ನು ನೆಚ್ಚಿನ ನಾಯಕನಿಗೆ ತಲುಪಿಸಿ ಎಂದು ಪೊಲೀಸರಿಗೆ ಮನವಿ ಮಾಡಿದರು.
ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ
ಇಡಿ ಅಧಿಕಾರಿಗಳು ತುಘಲಕ್ ರೋಡ್ ಪೊಲೀಸ್ ಠಾಣೆಯಿಂದ ಡಿ. ಕೆ. ಶಿವಕುಮಾರ್‌ರನ್ನು ಇಡಿ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ಬಳಿಕ ಮಧ್ಯಾಹ್ನ ಅವರನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?
ಡಿ. ಕೆ. ಶಿವಕುಮಾರ್‌ಗೆ ಇಂದು ಜಾಮೀನು ಸಿಗಲಿ ಎಂದು ಅಭಿಮಾನಿಗಳು ತಿರುಪತಿಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಲಾಡುವನ್ನು ತೆಗೆದುಕೊಂಡು ದೆಹಲಿಗೆ ಹೋಗಿದ್ದು, ಅದನ್ನು ಡಿ. ಕೆ. ಶಿವಕುಮಾರ್‌ಗೆ ನೀಡಿ ಎಂದು ಪೊಲೀಸರನ್ನು ಒತ್ತಾಯಿಸಿದರು.
ಅನಾರೋಗ್ಯ; ಆಸ್ಪತ್ರೆಯಲ್ಲಿಯೇ ರಾತ್ರಿ ಕಳೆದ ಡಿಕೆಶಿ
ಸೆಪ್ಟೆಂಬರ್ 3ರಂದು ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್‌ರನ್ನು ಇಡಿ ವಶಕ್ಕೆ ನೀಡಿತ್ತು. ಇಂದು ಕಸ್ಟಡಿ ಅಂತ್ಯಗೊಳ್ಳಲಿದ್ದು, ಡಿ. ಕೆ. ಶಿವಕುಮಾರ್ ಪರ ವಕೀಲರು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಲಿದ್ದಾರೆ.
ಇಡಿ ಹೆಚ್ಚಿನ ವಿಚಾರಣೆಗಾಗಿ ಇನ್ನೂ ನಾಲ್ಕು ದಿನ ಕಸ್ಟಡಿಗೆ ಕೊಡುವಂತೆ ಬೇಡಿಕೆ ಇಡುವ ಸಾಧ್ಯತೆ ಇದೆ. ಡಿ. ಕೆ. ಶಿವಕುಮಾರ್ 10 ದಿನದ ವಿಚಾರಣೆ ಎದುರಿಸಿರುವುದರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯೂ ಇದೆ.