ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗದಿಂದ ಆತ್ಮಹತ್ಯೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು: ಶಿವಕುಮಾರ್

|
Google Oneindia Kannada News

ಬೆಂಗಳೂರು, ಮೇ 16: ಉಡುಪಿಯ 23 ವರ್ಷದ ಸಹನಾ ಆತ್ಮಹತ್ಯೆಯ ವಿಷಯ ತಿಳಿದು ಅತೀವ ದುಃಖವಾಗಿದೆ. ಎಂಬಿಎ ಪದವಿ ಪಡೆದರೂ ಸಹ ಸೂಕ್ತ ಕೆಲಸ ದೊರೆಯದೆ ಆಕೆ ಸಾವಿಗೆ ಶರಣಾಗಿದ್ದಾಳೆ. ನಿರುದ್ಯೋಗದ ಕಾರಣಕ್ಕಾಗಿ ಪ್ರಾಣಕಳೆದುಕೊಂಡಿರುವ ಪ್ರಕರಣ ರಾಜ್ಯದಲ್ಲಿ ಇದೇ ಮೊದಲೇನಲ್ಲ. ಅವಳ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು, ಈ ಪ್ರಕರಣ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ತಿಳಿಸಿರುವ ಅವರು, "ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವುದನ್ನು ಒಂದು ಸಮಾಜವಾಗಿ ಆತ್ಮಾವಲೋಕ‌ನ ಮಾಡಿಕೊಳ್ಳಬೇಕು. ಎಂಬಿಎ ಪದವೀಧರೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದಾದರೆ ಖಂಡಿತವಾಗಿಯೂ ನಾವು ತಪ್ಪು ಹೆಜ್ಜೆ ಇಡುತ್ತಿದ್ದೇವೆ," ಎಂದು ನಿರುದ್ಯೋಗ ಸಮಸ್ಯೆಯ ಕುರಿತು ಮಾತನಾಡಿದ್ದಾರೆ.

"ಇದೆಲ್ಲವು ಆಗುತ್ತಿರುವುದು ಯಾಕೆ? ನಮ್ಮ ಯುವಸಮೂಹ ಯಾಕೆ ಹತಾಶೆಯನ್ನು ಎದುರಿಸಬೇಕಿದೆ? ನೋಬೆಲ್ ಪುರಸ್ಕೃತರನ್ನು ಒಳಗೊಂಡಂತೆ ಜಗತ್ತಿನ ಹಲವು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಭಾರತೀಯರು. ಉದ್ಯೋಗಗಳನ್ನು ಸೃಷ್ಟಿ ಮಾಡಲು ನಾವು ಅವರ ಪರಿಣಿತಿಯನ್ನು ಉಪಯೋಗಿಸಿಕೊಳ್ಳಬಹುದಲ್ಲವೆ?" ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಅವರು ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯ ಕುರಿತು ತಿಳಿಸಿದ್ದಾರೆ.

DK Shivakumar expresses concerns over rising unemployment suicides

"ಭಾರತವು ಇದೀಗ 100 ಯುನಿಕಾರ್ನ್ ಕಂಪನಿಗಳ ಕ್ಲಬ್ ಗೆ ಸೇರಿದೆ. ಕರ್ನಾಟಕವು ಭಾರತದಾದ್ಯಂತದ ಜನರಿಗೆ ಉದ್ಯೋಗ ಸೃಷ್ಟಿಸುತ್ತಿದೆ. ಆದರೂ ಯಾಕೆ ಅತಿಹೆಚ್ಚಿನ ನಿರುದ್ಯೋಗ ಪ್ರಮಾಣ ಹಾಗೂ ಆತ್ಮಹತ್ಯೆ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ? ಮಾಧ್ಯಮಗಳು ಈ ಕುರಿತು ಯಾಕೆ ಚರ್ಚಿಸುತ್ತಿಲ್ಲ?" ಎಂದು ಪ್ರಶ್ನಿಸಿರುವ ಅವರು, ಯುವಸಮೂಹದ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಲು ಧ್ವನಿ ಎತ್ತಿದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
With the death of 23-year-old Sahan in Udupi, KPCC President DK Shivakumar has expressed his concern over the rising rate of unemployment-related suicides in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X